Advertisement

MGM College “ಶಿಸ್ತು, ಜೀವನ ಮೌಲ್ಯದಿಂದ ಉತ್ತಮ ಸ್ಥಾನಮಾನ’

12:36 AM Sep 02, 2023 | Team Udayavani |

ಉಡುಪಿ: ಇಂದಿನ ಶೈಕ್ಷಣಿಕ ಮಟ್ಟದ ಬಗ್ಗೆ ಆಳ ಅಧ್ಯಯನ ನಡೆಸುವ ಜತೆಗೆ ಜೀವನ ಮೌಲ್ಯ ಹಾಗೂ ಶಿಸ್ತು ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಲು ಸಾಧ್ಯವಿದೆ ಎಂದು ಸೈಂಟ್‌ ಅಲೋಶಿಯಸ್‌ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ರೆ| ಫಾ| ಡಾ| ಪ್ರವೀಣ್‌ ಮಾರ್ಟಿಸ್‌ ಹೇಳಿದರು.

Advertisement

ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶುಕ್ರವಾರ ನಡೆದ ಎಂಜಿಎಂ ಸಂಧ್ಯಾ ಕಾಲೇಜಿನ ಸ್ಥಾಪಕ ದಿನಾಚರಣೆಯಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.

ಯಶಸ್ಸಿನ ಕಥೆಗಳನ್ನು ಓದಿದಂತೆ ವೈಫ‌ಲ್ಯದ ಕಥೆಗಳನ್ನೂ ಓದುವ ಮೂಲಕ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹಂತ- ಹಂತವಾಗಿ ಯಶಸ್ಸು ಕಂಡ ಮಣಿಪಾಲ ಸಮೂಹ ಸಂಸ್ಥೆಗಳು ಸಮಾಜಕ್ಕೂ ಮಾದರಿಯಾಗಿವೆ. ಮುಖ್ಯ ವಾಗಿ ಶೈಕ್ಷಣಿಕ ವಿಷಯಗಳು ಬದಲಾದಂತೆ ನಾವು ಅದಕ್ಕೆ ಒಗ್ಗಿ  ಕೊಳ್ಳಬೇಕಾದ ಅಗತ್ಯವಿದೆ. ಅತ್ಯಾ ಧುನಿಕ ತಂತ್ರಜ್ಞಾನಗಳಿಗೆ ನಾವು ಹೊಂದಿ ಕೊಳ್ಳಬೇಕು. ಆದರೆ ಅದರ ಗುಲಾಮರಾಗಬಾರದು. ನಮ್ಮ ಆಲೋ ಚನೆಗಳು ಉತ್ತಮವಾಗಿರ ಬೇಕು. ಧನಾತ್ಮಕ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವೆಬ್‌ಸೈಟ್‌ ಉದ್ಘಾಟನೆ
ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷರಾದ ಟಿ. ಸತೀಶ್‌ ಯು. ಪೈ ಅಧ್ಯಕ್ಷತೆ ವಹಿಸಿ, ಟಿ. ಮೋಹನ್‌ದಾಸ್‌ ಪೈ ಸ್ಕಿಲ್‌ ಡೆವಲಪ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ನ ವೆಬ್‌ಸೈಟ್‌ ಅನಾವರಣಗೊಳಿಸಿ ಶುಭ ಹಾರೈಸಿದರು.

ರೆ| ಫಾ| ಡಾ| ಪ್ರವೀಣ್‌ ಮಾರ್ಟಿಸ್‌ ಅವರನ್ನು ಸಮ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ವಿತರಿಸಲಾಯಿತು.ಮಣಿಪಾಲ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಕಾರ್ಯದರ್ಶಿ ಬಿ.ಪಿ. ವರದರಾಯ ಪೈ, ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ, ಪಿಯು ಕಾಲೇಜು ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು.ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ್‌ ಎಸ್‌. ನಾಯ್ಕ ಸ್ವಾಗತಿಸಿದರು. ಗಣಕಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಎಂ. ವಿಶ್ವನಾಥ ಪೈ ವಂದಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಸಂಯೋಜಕಿ ಡಾ| ಮಲ್ಲಿಕಾ ಶೆಟ್ಟಿ ನಿರೂಪಿಸಿದರು.

Advertisement

ಉತ್ತಮ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ
ಮಾಹೆ ವಿ.ವಿ. ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಮಾತನಾಡಿ, ಕೌಶಲ ಆಧಾರಿತ ಶಿಕ್ಷಣ ಕ್ರಮದಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯೋಗವಾಗುತ್ತಿದೆ. ಆರ್ಥಿಕ ಅಭಿವೃದ್ಧಿಯ ಜತೆಗೆ ಮಹಿಳಾ ಸಶಕ್ತೀಕರಣವೂ ಆಗಬೇಕು. ಸ್ವಸಾಮರ್ಥ್ಯ ನಿರ್ಮಾಣವನ್ನು ಪ್ರತಿಯೊಬ್ಬರೂ ಕರಗತ ಮಾಡಿಕೊಳ್ಳಬೇಕು. ಏಕಕಾಲದಲ್ಲಿ ಎರಡು ಪದವಿ ಸಿಗುವಂತಹ ಶೈಕ್ಷಣಿಕ ವ್ಯವಸ್ಥೆಯಲ್ಲಿ ನಾವಿದ್ದೇವೆ. ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ಉತ್ತಮ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯವಿದೆ. ಈ ಕಾರಣಕ್ಕೆ ನಾವು ವಿವಿಧ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆ ಹಾಗೂ ತಂತ್ರಜ್ಞಾನಗಳನ್ನು ಸದುಪಯೋಗಿಸಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next