Advertisement

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

08:55 PM Sep 18, 2021 | Team Udayavani |

ನವದೆಹಲಿ: ಫೋರ್ಡ್‌ ಮೋಟಾರು ವಾಹನ ಸಂಸ್ಥೆ ಭಾರತದಲ್ಲಿರುವ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಅದರ ಘಟಕಗಳನ್ನು ಎಂಜಿ ಮೋಟಾರ್‌ ಸಂಸ್ಥೆ ತನ್ನದಾಗಿಸಿಕೊಳ್ಳುವ ಸಾಧ್ಯತೆಯಿದೆ.

Advertisement

ಗುಜರಾತ್‌ನ ಸಾನಂದ್‌ ಮತ್ತು ತಮಿಳುನಾಡಿನ ಚೆನ್ನೈನಲ್ಲಿರುವ ಉತ್ಪಾದನಾ ಘಟಕಗಳನ್ನು ಖರೀದಿಸುವ ಬಗ್ಗೆ ಎಂಜಿ ಸಂಸ್ಥೆ ಫೋರ್ಡ್‌ನೊಂದಿಗೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. ಫೋರ್ಡ್‌ ಸಂಸ್ಥೆಯು ಓಲಾ ಎಲೆಕ್ಟ್ರಿಕ್‌, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಸೇರಿ ಅನೇಕ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದು, ಅಂತಿಮವಾಗಿ ಯಾರಿಗೆ ಘಟಕವನ್ನು ಬಿಟ್ಟುಕೊಡುತ್ತದೆ ಎನ್ನುವುದು ಮಾತ್ರ ಇನ್ನೂ ನಿರ್ಧಾರವಾಗಿಲ್ಲ.

ಫೋರ್ಡ್‌, ಸಾನಂದ್‌ ಉತ್ಪಾದನಾ ಘಟಕವನ್ನು ಇದೇ ವರ್ಷದ ಕೊನೆಯ ತ್ತೈಮಾಸಿಕದಲ್ಲಿ ಹಾಗೂ ಚೆನ್ನೈನ ಉತ್ಪಾದನಾ ಘಟಕವನ್ನು ಮುಂದಿನ ವರ್ಷದ ದ್ವಿತೀಯ ತ್ತೈಮಾಸಿಕದಲ್ಲಿ ಮುಚ್ಚಲಿದೆ.

Advertisement

Udayavani is now on Telegram. Click here to join our channel and stay updated with the latest news.

Next