Advertisement

ಈ ವ್ಯಕ್ತಿ ಪ್ರತಿದಿನ 6 ಕೆಜಿ ಚಿನ್ನ ಧರಿಸ್ತಾನೆ : 3 ಕೆಜಿ ಚಿನ್ನದ ಶರ್ಟ್ ಖರೀದಿಸಿದ್ದಾನೆ

10:15 AM Sep 13, 2021 | Team Udayavani |

ಮೆಕ್ಸಿಕೋ ಸಿಟಿ: ಪುಣೆಯ ದತ್ತ ಫ‌ುಗೆ ಎಂಬ ವ್ಯಕ್ತಿಯೊಬ್ಬ ಪ್ರತಿದಿನ ಬರೋಬ್ಬರಿ 6 ಕೆಜಿಯಷ್ಟು ಚಿನ್ನವನ್ನು ಧರಿಸುತ್ತಿದ್ದುದು ಹಾಗೂ  ಚಿನ್ನದ ಮೇಲಿನ ಮೋಹದಿಂದ 3 ಕೆಜಿ ತೂಕದ ಚಿನ್ನದ ಎಳೆಗಳಿಂದ ಮಾಡಿದ ಶರ್ಟ್‌ ಅನ್ನೂ ಖರೀದಿ ಸಿದ್ದು ಭಾರೀ ಸುದ್ದಿಯಾಗಿತ್ತು.

Advertisement

ಈಗ ಅಂಥದ್ದೇ ಮತ್ತೂಬ್ಬ “ಸ್ವರ್ಣ­ಮೋಹಿ’ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದ್ದಾನೆ. ಈತ ಮೆಕ್ಸಿಕೋದ ರ್ಯಾಪರ್‌ ಡ್ಯಾನ್‌ ಸುರ್‌. ವಯಸ್ಸು 23. ಈತನ ವಿಶೇಷ ವೆಂದರೆ, ಈತ ಚಿನ್ನದ ಸರಗಳನ್ನೇ ತನ್ನ ತಲೆಗೂದಲಾಗಿ ಮಾಡಿ ಕೊಂಡಿ­ದ್ದಾನೆ! ಅಷ್ಟೇ ಅಲ್ಲ, ಈತ ತನ್ನ ಹಲ್ಲುಗಳಿಗೂ ಹಳದಿ ಲೋಹದ ಲೇಪನ ಮಾಡಿ­ಕೊಂಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸಾಮಾನ್ಯವಾಗಿ, ಬೋಳು ತಲೆಯವರಿಗೆ “ಹೇರ್‌ ಟ್ರಾನ್ಸ್‌ ಪ್ಲಾಂಟೇಶನ್‌’ ಎಂಬ ವೈದ್ಯಕೀಯ ಪ್ರಕ್ರಿಯೆಯ ಮೂಲಕ ತಲೆಗೂದಲನ್ನು ಈ ಪ್ರಕ್ರಿಯೆಗೆ ಒಳಗಾಗುವ ತಲೆಗೆ ಜೋಡಿಸ­ಲಾಗುತ್ತದೆ. ಆನಂತರ ಅವು  ನೈಜ ಕೂದಲಿನಂತೆ ಕಾಣಿಸ­ತೊಡಗುತ್ತವೆ.

ಆದರೆ, ಡ್ಯಾನ್‌ ಸುರ್‌, ತನ್ನ ತಲೆಯಲ್ಲಿರುವ ಕೂದಲುಗಳನ್ನೆಲ್ಲ ಕಿತ್ತುಹಾಕಿ, ತಲೆಯ ಬುಡಭಾ ಗಕ್ಕೆ ಕೊಕ್ಕೆ(ಹುಕ್ಸ್‌)ಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸಿಕೊಂಡು ಅವಕ್ಕೆ ಚಿನ್ನದ ಸರಗಳನ್ನು ಸಿಕ್ಕಿಸಿಕೊಂಡಿದ್ದಾನೆ! ಚಿನ್ನದ ಸರಗಳಷ್ಟೇ ಅಲ್ಲ, ಆ ಸರಗಳಿಗೆ ವಜ್ರ, ಹರಳುಗಳು ಪೋಣಿಸಿಕೊಂಡು ತೂಗುಹಾಕಿ ದ್ದಾನೆ. ಹೀಗೆ “ಚಿನ್ನದ ಕೂದಲು’ ಗಳಿಸಿದ ಬಳಿಕ ಹೊಸ ಮ್ಯೂಸಿಕ್‌ ವೀಡಿಯೋವನ್ನೂ ಡ್ಯಾನ್‌ ಸುರ್‌ ಬಿಡುಗಡೆ ಮಾಡಿದ್ದಾನೆ. ಈ ಮೂಲಕ ಈತ ಇತಿಹಾಸದಲ್ಲೇ ತಲೆಕೂದಲ ನ್ನು ತೆಗಿಸಿ, ಅವುಗಳ ಬದಲು ಚಿನ್ನದ ಸರಗಳನ್ನು ಕೂದಲಿನಂತೆ ಹಾಕಿಸಿಕೊಂಡ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾನೆ. ಈ ಶಸ್ತ್ರ ಚಿಕಿತ್ಸೆಗೆ ಎಷ್ಟು ವೆಚ್ಚವಾಗಿದೆ ಎಂಬುದು ಬಹಿರಂಗಗೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next