Advertisement

ವಿಶ್ವಸಂಸ್ಥೆ ಶಾಂತಿ ಪಾಲನಾ ಸಮಿತಿಯಲ್ಲಿ ಮೋದಿ?

12:19 AM Aug 12, 2022 | Team Udayavani |

ಮೆಕ್ಸಿಕೋ ಸಿಟಿ:  ದೇಶಗಳ ನಡುವೆ ಯುದ್ಧಗಳು ನಡೆ ಯುವುದನ್ನು ತಪ್ಪಿಸಲು ಕೆಲಸ ಮಾಡುವಂಥ ಸಮಿತಿ ಯೊಂದನ್ನು ನೇಮಿಸಬೇಕು ಹಾಗೂ ಅದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಯವರನ್ನು ಸದಸ್ಯರನ್ನಾಗಿ ನೇಮಿಸಬೇಕು ಎಂಬ ಸಲಹೆಯನ್ನು ವಿಶ್ವಸಂಸ್ಥೆಗೆ ಕೊಡಲು ಸಿದ್ಧವಿ ರುವುದಾಗಿ ಮೆಕ್ಸಿಕೋದ ಅಧ್ಯಕ್ಷ ಆ್ಯಂಡ್ರೆಸ್‌ ಮ್ಯಾನ್ಯು ಯೆಲ್‌ ಲೋಪೇಜ್‌ ಒಬ್ರಾಟರ್‌ ಹೇಳಿದ್ದಾರೆ.

Advertisement

ಸದ್ಯ ದಲ್ಲೇ ಸಮಿತಿ ರಚನೆಗೆ ಲಿಖೀತ ರೂಪದಲ್ಲಿ ಸಲಹೆ ನೀಡಲು ನಿರ್ಧರಿಸಿದ್ದೇನೆ. ಅದರಲ್ಲಿ ಕ್ರೈಸ್ತರ ಧರ್ಮ ಗರು ಪೋಪ್‌ ಫ್ರಾನ್ಸಿಸ್‌, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟಾನಿಯೊ ಗುಟೆರೆಸ್‌ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಇರಬೇಕೆಂದು ಅದರಲ್ಲಿ ಉಲ್ಲೇಖೀಸಲಿದ್ದೇನೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next