Advertisement

ಮೆಕ್ಸಿಕನ್‌ ಓಪನ್‌: ಡೆಲ್‌ ಪೊಟ್ರೊ, ಲೆಸಿಯಾ ಸುರೆಂಕೊ ಚಾಂಪಿಯನ್‌

06:25 AM Mar 05, 2018 | |

ಅಕಪುಲ್ಕೊ (ಮೆಕ್ಸಿಕೊ): ಆರ್ಜೆಂಟೀನಾದ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಎಟಿಪಿ ಮೆಕ್ಸಿಪನ್‌ ಓಪನ್‌ ಟೆನಿಸ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಅವರು ದಕ್ಷಿಣ ಆಫ್ರಿಕಾದ ಕೆವಿನ್‌ ಆ್ಯಂಡರ್ಸನ್‌ ವಿರುದ್ಧ 6-4, 6-4 ಅಂತರದ ನೇರ ಸೆಟ್‌ ಜಯ ಸಾಧಿಸಿದರು.

Advertisement

ಇದು 2018ರಲ್ಲಿ ಡೆಲ್‌ ಪೊಟ್ರೊ ಗೆದ್ದ ಮೊದಲ ಟೆನಿಸ್‌ ಪ್ರಶಸ್ತಿ. ಜತೆಗೆ ಆ್ಯಂಡರ್ಸನ್‌ ವಿರುದ್ಧ ಸತತ 7ನೇ ಗೆಲುವು ಸಾಧಿಸಿ ಮೆರೆದರು. 2011ರಲ್ಲಿ ಇವರಿಬ್ಬರು ಮೊದಲ ಸಲ ಮುಖಾಮುಖೀಯಾಗಿದ್ದರು. 29ರ ಹರೆಯದ ಡೆಲ್‌ ಪೊಟ್ರೊ ಪಾಲಾದ 21ನೇ ಎಟಿಪಿ ಟೆನಿಸ್‌ ಪ್ರಶಸ್ತಿ ಇದಾಗಿದೆ.

ವನಿತಾ ಸಿಂಗಲ್ಸ್‌ನಲ್ಲಿ ಉಕ್ರೇನಿನ ಲೆಸಿಯಾ ಸುರೆಂಕೊ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅವರು ಸ್ವಿಜರ್‌ಲ್ಯಾಂಡಿನ ಸ್ಟಿಫಾನಿ ವೋಗ್ಲೆ ವಿರುದ್ಧ ಸೋಲಿನ ದವಡೆಯಿಂದ ಪಾರಾಗಿ 5-7, 7-6 (7-2), 6-2 ಅಂತರದ ಜಯ ಒಲಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next