ಬೆಂಗಳೂರು: ಸುಮಾರು ಒಂದೂವರೆ ವರ್ಷದಿಂದಸ್ಥಗಿತಗೊಂಡಿದ್ದ ಟೋಕನ್ ವ್ಯವಸ್ಥೆಯನ್ನು “ನಮ್ಮಮೆಟ್ರೋ’ದಲ್ಲಿ ಮತ್ತೆ ಪರಿಚಯಿಸಲಾಗಿದ್ದು, ಗುರುವಾರದಿಂದ ಪ್ರಯಾಣಿಕರು ಈ ಹಿಂದಿನಂತೆ ನೇರವಾಗಿ ಟೋಕನ್ ಪಡೆದು ಪ್ರಯಾಣಿಸಬಹುದು.ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್)ವು ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋಸೇವೆ ಅವಧಿವಿಸ್ತರಣೆ ಜತೆಗೆಟೋಕನ್‌ವ್ಯವಸ್ಥೆಯನ್ನುಕಲ್ಪಿಸಲಾಗಿದೆ.
ಲಾಕ್‌ಡೌನ್ ಸಡಿಲಿಕೆಯಾದರೂಪೀಕ್ ಅವರ್‌ನಲ್ಲಿ ಮಾತ್ರ ಅಂದರೆ ಬೆಳಿಗ್ಗೆ 7 ರಿಂದ 11ಹಾಗೂ ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಮೆಟ್ರೋಕಾರ್ಯಾಚರಣೆ ಮಾಡುತ್ತಿತ್ತು. ಗುರುವಾರ (ಜುಲೈ1)ದಿಂದ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಅನಿಯಮಿತವಾಗಿ ಸೇವೆ ಇರಲಿದೆ.
ಟೋಕನ್‌ಗಳನ್ನುನಗದು ನೀಡಿ ಅಥವಾ ಸ್ಟಾಟಿಕ್ ಕ್ಯೂಆರ್ ಕೋಡ್‌ಸ್ಕ್ಯಾನ್ ಮಾಡಿಯೂ ಖರೀದಿಸಬಹುದು.”ಪೀಕ್ ಅವರ್’ (ಪ್ರಯಾಣಿಕರ ದಟ್ಟಣೆ ಅವಧಿ)ನಲ್ಲಿ ಪ್ರತಿ ಐದು ನಿಮಿಷಕ್ಕೊಂದು ಮೆಟ್ರೋ ಸೇವೆ ಇರಲಿದೆ.
ಉಳಿದ ಅವಧಿಯಲ್ಲಿ 15 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ. ಆದಾಗ್ಯೂ, ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ರೈಲುಗಳ ಸಂಚಾರಸಮಯದಲ್ಲಿನಅಂತರವನ್ನುಮರುಪರಿಶೀಲಿಸಲಾಗುವುದು. ವಾರಾಂತ್ಯಕರ್ಫ್ಯೂ ಇರುವುದರಿಂದ ಶನಿವಾರ ಮತ್ತು ಭಾನುವಾರ ಮೆಟ್ರೊ ರೈಲು ಸಂಚಾರ ಇರುವುದಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.
ಮೊದಲ ಹಂತದ ಲಾಕ್‌ಡೌನ್‌ನಿಂದ ಟೋಕನ್‌ವಿತರಣಾ ವ್ಯವಸ್ಥೆ ಸ್ಥಗಿತಗೊಳಿಸಲಾಗಿತ್ತು. ಇದರಿಂದಸ್ಮಾರ್ಟ್ ಕಾರ್ಡ್ ಹೊಂದಿದವರಿಗೆ ಮಾತ್ರ ಸಂಚಾರಕ್ಕೆಅವಕಾಶ ಇತ್ತು. ಜನರ ನಸುವೆ ಸಂಪರ್ಕ ಕಡಿಮೆಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿತ್ತು.
ಆದರೆ,ಪ್ರಯಾಣಿಕರು ನಿರೀಕ್ಷಿತಮಟ್ಟದಲ್ಲಿ ಸಂಚರಿಸುತ್ತಿರಲಿಲ್ಲ. ಇದಕ್ಕೆ ಟೋಕನ್ ವ್ಯವಸ್ಥೆ ಇಲ್ಲದಿರುವುದುಕೂಡ ಒಂದುಕಾರಣ ಎನ್ನಲಾಗಿತ್ತು.ಇನ್ನು ಸ್ಮಾರ್ಟ್‌ಕಾರ್ಡ್ ಬಳಸಿ ಸಂಚರಿಸುವ ವ್ಯವಸ್ಥೆಎಂದಿನಂತೆ ಮುಂದುವರಿಯಲಿದೆ. ಕಾರ್ಡ್‌ಗಳನ್ನುನಿಗಮದ ವೆಬ್‌ಸೈಟ್, ಆ್ಯಪ್ ಬಳಸಿ ರಿಚಾರ್ಜ್‌ಮಾಡಿಕೊಳ್ಳಬಹುದು. ಅಲ್ಲದೆ, ಮೆಟ್ರೋ ನಿಲ್ದಾಣಗಳಲ್ಲಿನ ಕೌಂಟರ್‌ಗಳಲ್ಲಿಯೂ ಎಟಿಎಂ ಕಾರ್ಡ್‌ಅಥವಾ ನಗದು ಬಳಸಿ ಖರೀದಿ ಅಥವಾ ರಿಚಾರ್ಜ್‌ಮಾಡಿಸಬಹುದು ಎಂದು ನಿಗಮ ಹೇಳಿದೆ.