Advertisement

ಹಿಂದಿ “ಚೆಕ್‌’ಗೆ ಮತ್ತೆ ಮೆಟ್ರೋ ಪ್ರಯಾಣ

12:02 PM Sep 18, 2017 | |

ಬೆಂಗಳೂರು: ಸರ್ಕಾರದ ಆದೇಶದ ಬಳಿಕವೂ ನಮ್ಮ ಮೆಟ್ರೋ ಆಡಳಿತದಲ್ಲಿ ಹಿಂದಿ ಬಳಕೆ ಮುಂದುವರಿಸಿದ್ದು, ಮತ್ತೂಮ್ಮೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ ಹಿಂದಿ ನಾಮಫ‌ಲಕಗಳನ್ನು ತೆರವುಗೊಳಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

Advertisement

ಬನಸವಾಸಿ ಬಳಗ ಭಾನುವಾರ ನಗರದ ಪ್ರಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ “ನುಡಿ ಸಮಾನತೆಯತ್ತ ನಮ್ಮ ನಡೆ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮೊದಲಿಗೆ ಹಿಂದಿ ರಾಷ್ಟ್ರಭಾಷೆ ಎಂದು ಹೇಳಿ ಜನರನ್ನು ಮರಳು ಮಾಡುತ್ತಿದ್ದರು. ಜನರು ಎಚ್ಚೆತ್ತುಕೊಂಡ ಹಿನ್ನೆಲೆಯಲ್ಲಿ ಬಲವಂತವಾಗಿ ಹಿಂದಿ ಹೇರಿ ದಬ್ಟಾಳಿಕೆ ಮಾಡಲಾಗುತ್ತಿದೆ ಎಂದು ದೂರಿದರು.

ನಮ್ಮ ಮೆಟ್ರೋ ರೈಲು ಹಾಗೂ ನಿಲ್ದಾಣಗಳಲ್ಲಿ ಹಿಂದಿ ಫ‌ಲಕಗಳ ಅಳವಡಿಕೆ ವಿರೋಧಿಸಿ ಇತ್ತೀಚೆಗೆ ಪ್ರತಿಭಟನೆ ನಡೆಸಲಾಗಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಿಂದಿ ಬಳಕೆ ಮಾಡದಂತೆ ಅಧಿಕೃತ ಆದೇಶ ಹೊರಡಿಸಿದೆ. ಅದಾದ ಬಳಿಕವೂ ಆಡಳಿತದಲ್ಲಿ ಹಿಂದಿ ಬಳಸಲಾಗುತ್ತಿದ್ದು, ವಾರದೊಳಗೆ ಮತ್ತೂಮ್ಮೆ ರೈಲಿನಲ್ಲಿ ಪ್ರಯಾಣಿಸಿ ಪರಿಶೀಲಿಸಲಾಗುವುದು ಮತ್ತು ಹಿಂದಿ ಫ‌ಲಕಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿದರು.

ಹಿಂದಿ ಹೇರಿಕೆಯ ಕುರಿತು ಅಕ್ಟೋಬರ್‌ 14ರಂದು ದೆಹಲಿಯಲ್ಲಿ ದುಂಡು ಮೇಜಿನ ಸಭೆ ನಡೆಸಲಿದ್ದು, ಅದಕ್ಕೂ ಮೊದಲು ಬೆಂಗಳೂರಿನಲ್ಲಿ ಸಮಾವೇಶ ಆಯೋಜಿಸಲಾಗಿದೆ. ಹೋರಾಟವನ್ನು ದೇಶದಾದ್ಯಂತ ಚಳವಳಿಯನ್ನಾಗಿ ರೂಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳ ಪ್ರಾದೇಶಿಕ ಭಾಷಾ ಹೋರಾಟಗಾರರ ಸಭೆ ನಡೆಸಲಾಗುವುದು ಎಂದರು.

ವಿಧಾನ ಪರಿಷತ್‌ ಸದಸ್ಯ ರಮೇಶ್‌ ಬಾಬು ಮಾತನಾಡಿ, ಗೋವಾ, ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿಯೂ ಬಿಜೆಪಿ ಪಕ್ಷವೇ ಅಧಿಕಾರದಲ್ಲಿದೆ. ರಾಜ್ಯದಲ್ಲಿ ಬಿಜೆಪಿಯ 17ಸಂಸದರಿದ್ದರೂ ಮಹದಾಯಿ, ಕಾವೇರಿ ಮತ್ತು ಕೃಷ್ಣ ವಿವಾದಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರೀಯ ಪಕ್ಷಗಳು ಎಂದೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ ಎಂಬುದಕ್ಕೆ ಇದೊಂದು ಉದಾಹರಣೆ ಎಂದರು.

Advertisement

ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಆದ್ಯತೆ ನೀಡುವುದರಿಂದ ನಾಡು-ನುಡಿ-ಭಾಷೆ ರಕ್ಷಣೆ ದೊರೆಯುತ್ತದೆ. ಹೀಗಾಗಿಯೇ ತಮಿಳುನಾಡಿನ ದಿ.ಮುಖ್ಯಮಂತ್ರಿ ಜಯಲಲಿತಾ 39 ಸ್ಥಾನಗಳನ್ನು ಗೆಲ್ಲಿಸಿದರೆ ಪ್ರಧಾನಿಯಾಗುತ್ತೇನೆ ಎಂದಿದ್ದರು. ಅವರು ಹೇಳಿಂದತೆ ತಮಿಳುನಾಡಿನ ಹಿತಕ್ಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು.

ಆದರೆ, ಅಂತಹ ಕೆಲಸ ರಾಜ್ಯದಲ್ಲಿ ಆಗುತ್ತಿಲ್ಲ ಎಂದರು. ಕಾರ್ಯಕ್ರಮದಲ್ಲಿ ಕ್ಲಿಯರ್‌ ಸಂಸ್ಥೆ ಕಾರ್ಯದರ್ಶಿ ಸೆಂಥಿಲ್‌ನಾಥನ್‌, ಬಳಗದ ಅಧ್ಯಕ್ಷ ಜಿ.ಆನಂದ್‌, ವಕೀಲ ಮನುಕುಲಕರ್ಣಿ, ಅಜೀಂ ಪ್ರೇಮ್‌ಜೀ ವಿವಿಯ ಪ್ರಾಧ್ಯಾಪಕ ಚಂದನ್‌ಗೌಡ ಸೇರಿ ಪ್ರಮುಖರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next