Advertisement

ರಚಿತಾ ಮೊಗದಲ್ಲಿ ಮೆಟ್ರೋ ಖುಷಿ

11:15 AM Oct 11, 2019 | Lakshmi GovindaRaju |

ನಟಿ ರಚಿತಾ ರಾಮ್‌ ಮುಖ ಮುಚ್ಚಿಕೊಂಡು ಮೆಟ್ರೋ ರೈಲು ಹತ್ತಿದ್ದಾರೆ! ಈ ಮೂಲಕ ತಮ್ಮ ಬಹುದಿನಗಳ ಆಸೆ ಪೂರೈಸಿಕೊಂಡಿದ್ದಾರೆ. ಮುಖಮುಚ್ಚಿಕೊಂಡು ರೈಲು ಹತ್ತುವಂಥದ್ದೇನಾಯಿತು ರಚಿತಾಗೆ ಎಂದು ನೀವು ಪ್ರಶ್ನೆ ಮಾಡುವಂತಿಲ್ಲ. ಏಕೆಂದರೆ ರಚಿತಾ ರಾಮ್‌ ನಟಿ. ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವ, ಬಹುತೇಕ ಸ್ಟಾರ್‌ ನಟರ ಚಿತ್ರಗಳಲ್ಲಿ ನಟಿಸಿರುವ ನಟಿ.

Advertisement

ಹೀಗಿರುವಾಗ ನೇರಾನೇರ ಮೆಟ್ರೋ ಹತ್ತಿದರೆ ಹೇಗೆ ಹೇಳಿ? ಒಮ್ಮೆಲೇ ಅಭಿಮಾನಿಗಳು ಬಂದು ಸೆಲ್ಫಿಗೆ ಮುಗಿಬಿದ್ದರೆ ಏನ್ಮಾಡೋದು? ಅದೇ ಕಾರಣದಿಂದ ರಚಿತಾ ಯಾರಿಗೂ ಗುರುತು ಸಿಗದ ಹಾಗೆ ಮುಖಕ್ಕೆ ಬಟ್ಟೆ ಕಟ್ಟಿ, ಮೆಟ್ರೋ ಪ್ರಯಾಣದ ಖುಷಿಯನ್ನು ಅನುಭವಿಸಿದ್ದಾರೆ. ತನ್ನನ್ನು ಮೆಟ್ರೋ ಪ್ರಯಾಣ ಮಾಡಿಸಿದ ಸ್ನೇಹಿತೆಯೊಂದಿಗಿನ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟ-ನಟಿಯರು ಈ ರೀತಿ ಯಾರಿಗೂ ಪರಿಚಯ ಸಿಗದಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸಿನಿಮಾ ನೊಡೋದು, ತಮಗೆ ಇಷ್ಟವಾದ ಸ್ಥಳಗಳಲ್ಲಿ ಸ್ವತ್ಛಂದವಾಗಿ ಓಡಾಡೋದು ಸಹಜ. ಕೆಲವು ದಿನಗಳ ಹಿಂದಷ್ಟೇ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ಮೆಟ್ರೋ ಪ್ರಯಾಣ ಮಾಡಿ, ಆ ಖುಷಿಯನ್ನು ಹಂಚಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next