ನರಿಮೊಗರು: ಮುಂಡೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಮೆಟ್ರಿಕ್ ಮೇಳ ಭರ್ಜರಿಯಾಗಿ ನಡೆಯಿತು. ದಿನನಿತ್ಯ ಪುಸ್ತಕ, ಪಾಠಗಳಲ್ಲಿ ತಲ್ಲೀನರಾಗಿ ಸುಸ್ತಾಗಿದ್ದ ಮಕ್ಕಳು ಒಂದು ದಿನ ಅವೆಲ್ಲವನ್ನೂ ಬದಿಗೊತ್ತಿ ಶಾಲೆಯಲ್ಲೇ ಭರ್ಜರಿ ವ್ಯಾಪಾರ ಮಾಡಿ ಖುಷಿ ಪಟ್ಟರು, ವ್ಯಾಪಾರದಲ್ಲಿ ಒಂದಿಷ್ಟು ಲಾಭವನ್ನೂ ಮಾಡಿದರು. ಶಾಲಾ ಮುಂಭಾಗದ ವಿವಿಧ ಸ್ಥಳಗಳಲ್ಲಿ ಮಕ್ಕಳ ಸ್ಟಾಲ್‌ಗಳು ರಾರಾಜಿಸುತ್ತಿದ್ದವು.
ತರಕಾರಿಯಿಂದ ಹಿಡಿದು ಕರಿದ ತಿನಿಸುಗಳ ವರೆಗೆ ಮಕ್ಕಳು ವ್ಯಾಪಾರ ಮಾಡಿ ಸಂಭ್ರಮಪಟ್ಟರು. ವಿದ್ಯಾರ್ಥಿಗಳ ಪೋಷಕರು, ಊರವರು ಮಕ್ಕಳಿಂದ ವಿವಿಧ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹ ನೀಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಶಾಲಾ ಶಿಕ್ಷಕ, ಶಿಕ್ಷಕಿಯರು ಸಂಪೂರ್ಣವಾಗಿ ವಿದ್ಯಾರ್ಥಿಗಳೊಂದಿಗೆ ಬೆರೆತು ವಿದ್ಯಾರ್ಥಿಗಳ ಮೆಟ್ರಿಕ್ ಮೇಳವನ್ನು ಯಶಸ್ವಿಗೊಳಿಸಿದರು. ಮೆಟ್ರಿಕ್ ಮೇಳವನ್ನು ಉದ್ಯಮಿ ಜಯಂತ ನಡುಬೈಲು ಉದ್ಘಾಟಿಸಿದರು.
ಶ್ರೀನಿವಾಸ್ ರಾವ್ ಕಾವೇರಮ್ಮ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷ ಎಂ.ಪಿ. ಬಾಲಕೃಷ್ಣ ಪಜಿಮಣ್ಣು ಸ್ಟಾಲ್‌ಗಳ ಉದ್ಘಾಟನೆ ನೆರವೇರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ಅಧ್ಯಕ್ಷತೆ ವಹಿಸಿದ್ದರು. ಮುಂಡೂರು ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಮುಂಡೂರು ಗ್ರಾ.ಪಂ. ಸದಸ್ಯೆ ಪ್ರೇಮಲತಾ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸದಾಶಿವ ಶೆಟ್ಟಿ ಪಟ್ಟೆ, ಗೌರವ ಸಲಹೆಗಾರ ಖಲಂದರ್ ಶಾಫಿ, ನರಿಮೊಗರು ಕ್ಲಸ್ಟರ್ ಸಿ.ಆರ್.ಪಿ. ದೇವಪ್ಪ ಉಪಸ್ಥಿತರಿದ್ದರು ಮೆಟ್ರಿಕ್ ಮೇಳದ ವೀಕ್ಷಣೆಗೆ ಮುಂಡೂರು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಚೆಲ್ಯಡ್ಕ, ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣ್ಣರಾಯ, ಜಯಪ್ರಕಾಶ್ ರೈ, ತುಳಸಿ, ಪುಟ್ಟಣ್ಣ ಗೌಡ, ಧನಂಜಯ ಕುಲಾಲ್, ಶಾಲಾಭಿವೃದ್ಧಿ ಸದಸ್ಯರು, ಪೋಷಕರು, ಊರವರು ಆಗಮಿಸಿ ಪ್ರೋತ್ಸಾಹ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಕೆ ಸ್ವಾಗತಿಸಿದರು. ದೈಹಿಕ ಶಿ. ಶಿಕ್ಷಕಿ ವನಿತಾ ವಂದಿಸಿದರು. ಸಹಶಿಕ್ಷಕ ರಾಮಚಂದ್ರ ವಂದಿಸಿದರು.