- ಗೋಧಿ ಹಿಟ್ಟು- 3 ಕಪ್
- ಮೆಂತ್ಯ ಎಲೆಗಳು-1 ಕಪ್
- ನುಣ್ಣಗೆ ಕತ್ತರಿಸಿದ ಶುಂಠಿ-1 ಟೀ ಸ್ಪೂನ್
- ನುಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ-1 ಟೀ ಸ್ಪೂನ್
- ಕೆಂಪು ಮೆಣಸಿನ ಪುಡಿ- 1 ಟೀ ಸ್ಪೂನ್
- ಅರಿಶಿನ ಪುಡಿ- 1/4 ಟೀ ಸ್ಪೂನ್
- ಉಪ್ಪು- ರುಚಿಗೆ ತಕ್ಕಷ್ಟು
- ನೀರು- ಅಗತ್ಯವಿರುವಷ್ಟು
- ಅಡುಗೆ ಎಣ್ಣೆ- 4 ಟೀ ಸ್ಪೂನ್
Advertisement
ಮಾಡುವ ವಿಧಾನ:ಮೆಂತೆ ಪರಾಟಾಗೆ ಎಲೆಗಳನ್ನು, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ನುಣ್ಣಗೆ ಕತ್ತರಿಸಿಕೊಳ್ಳಿ. ಅಗಲವಾದ ಬಟ್ಟಲಿನಲ್ಲಿ ಗೋಧಿ ಹಿಟ್ಟನ್ನು ತೆಗೆದುಕೊಂಡು, ಕತ್ತರಿಸಿದ ಮೆಂತೆ ಎಲೆಗಳು, ಶುಂಠಿ, ಬೆಳ್ಳುಳ್ಳಿ, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ ಮತ್ತು ಉಪ್ಪನ್ನು ಸೇರಿಸಿ, ನೀರನ್ನು ಸ್ವಲ್ಪಮಟ್ಟಿಗೆ ಬಳಸಿ ಗಟ್ಟಿಯಾದ ಹಿಟ್ಟನ್ನು ಮಾಡಿಕೊಳ್ಳಿ. 2 ಟೀ ಸ್ಪೂನ್ ಎಣ್ಣೆಯನ್ನು ಸೇರಿಸಿ, 10 ನಿಮಿಷಗಳ ಕಾಲ ಮುಚ್ಚಿಡಿ. ಈಗ ಮೆಂತೆ ಪರಾಟಾಗೆ ಹಿಟ್ಟನ್ನು ದೊಡ್ಡ ನಿಂಬೆ ಗಾತ್ರದಲ್ಲಿ ಉಂಡೆ ಮಾಡಿಕೊಂಡು ಅದನ್ನು ವೃತ್ತಾಕಾರದಲ್ಲಿ ರೋಲಿಂಗ್‌ಮಾಡಿ, ತವಾ ಅಥವಾ ಗ್ರಿಡ್ ಅನ್ನು ಬಿಸಿ ಮಾಡಿ ಮತ್ತು ಸ್ವಲ್ಪ ಎಣ್ಣೆ ಚಿಮುಕಿಸುವ ಮೂಲಕ ಸುತ್ತಿಕೊಂಡ ಮೆಂತೆ ಪರಾಟಾವನ್ನು ಬೇಯಿಸಿ ಅನಂತರ ಮತ್ತೆ ಸ್ವಲ್ಪ ಎಣ್ಣೆಚಿಮುಕಿಸುವ ಮೂಲಕ ಫ್ಲಿಪ್ ಮಾಡಿ ಮತ್ತು ಇನ್ನೊಂದು ಬದಿಯಲ್ಲಿ ಬೇಯಿಸಿ. ಇದನ್ನು ಬೆಣ್ಣೆ ಅಥವಾ ಮೊಸರಿನಲ್ಲಿ ಬಿಸಿಯಾಗಿ ಬಡಿಸಿದರೆ ರುಚಿ ರುಚಿಯಾದ ಮೆಂತೆ ಪರಾಟಾ ಸವಿಯಲು ಸಿದ್ಧ.