ಕೋಲಾರ: ನಗರದಲ್ಲಿ ಮಿತಿ ಮೀರಿದ ಮೀಟರ್ ಬಡ್ಡಿ ಹಾವಳಿ ವಿರುದ್ಧ ಕಠಿಣ ಕ್ರಮಜರುಗಿಸುವಂತೆ ಒತ್ತಾಯಿಸಿ ಮುಸ್ಲಿಂ ಏರಿಯಾಗಳ ಪ್ರಮುಖರು ನೂತನ ಜಿಲ್ಲಾಧಿಕಾರಿ ವೆಂಕಟರಾಜ್‌ರಿಗೆ ದೂರು ನೀಡಿದರು.
ನಗರದಲ್ಲಿ ಬಡ್ಡಿ, ಚಕ್ರಬಡ್ಡಿ, ಮೀಟರ್‌ಬಡ್ಡಿ ವ್ಯವಹಾರ ಪೀಡಿಸುತ್ತಿವೆ. ಇತ್ತೀಚೆಗೆ ವಾರದ ಬಡ್ಡಿವ್ಯವಹಾರ ಸ್ಲಂ ಏರಿಯಾಗಳಲ್ಲಿ ಮಿತಿ ಮೀರುತ್ತಿದೆ. 20 ಸಾವಿರ ರೂ. ಸಾಲ ತೆಗೆದುಕೊಂಡರೆ ಅದಕ್ಕೆವಾರಕ್ಕೆ ಎರ ಡೂ ವರೆ ಸಾವಿರ ರೂಪಾಯಿ ಬಡ್ಡಿ ಕೊಡ ಬೇಕಾದ ದುಸ್ಥಿತಿ ಎದುರಾಗಿದೆ. ಸ್ಲಂ ಏರಿಯಾದಲ್ಲಿ ಯಾರೇ ಸತ್ತರೂ, ಯಾರೇ ಅನಾ ರೋಗ್ಯ ದಿಂದ ಆಸ್ಪತ್ರೆ ಪಾಲಾದರೂ ಮನೆಗೇ ಬಂದು ಸಾಲಬೇಕಾ ಎಂದು ಕೇಳಿ ಕೇಳಿ ವಾರದ ಬಡ್ಡಿಗೆ ಸಾಲ ನೀಡಿ ಜನರನ್ನು ಸಾಯಿಸುತ್ತಿದ್ದಾರೆಂದರು.
ರಸ್ತೆ ಬದಿ ತಳ್ಳೋ ಗಾಡಿಯಲ್ಲಿ ಬಾಳೆ ಹಣ್ಣು ಮಾರುವವರು, ಸರ್ಕಲ್‌ಗಳಲ್ಲಿ ರಸ್ತೆ ಬದಿ ಕುಳಿತುಹೂ ಮಾರುವವರು, ಬೀಡಿ ಕಟ್ಟಿ ಜೀವನಸಾಗಿಸುವವರು ಇಂಥವರೇ ಅತಿ ಹೆಚ್ಚಾಗಿ ವಾಸಇರುವ ಮುಸ್ಲಿಂ ಏರಿಯಾ ಗಳಲ್ಲಿಯೇ ವಾರದಬಡ್ಡಿ ದಂಧೆಯಾಗಿ ಮಾರ್ಪಟ್ಟಿದೆ. ಬಡ್ಡಿಗೆ ಹಣಕೊಡುವವರೂ ಅಲ್ಪಸಂಖ್ಯಾ ತರೇ ಆಗಿರುವುದು ಇನ್ನೊಂದು ವಿಪರ್ಯಾಸ. ಅತಿ ಸಾಮಾನ್ಯ ಕುಟುಂಬ ಹಿನ್ನೆಲೆಯಿಂದ ಬಂದಂಥವರೂ ಕೋಟ್ಯಂತರ ರೂ.ಬಡ್ಡಿ ದಂಧೆಗೆ ಹೂಡುತ್ತಿದ್ದಾರೆ. ಇವರಿಗೆ ಕೋಟ್ಯಂತರ ರೂಪಾಯಿ ಎಲ್ಲಿಂದ ಬರುತ್ತದೆ ಎಂದು ತನಿಖೆ ನಡೆಯಲಿ ಎಂದು ಒತ್ತಾಯಿಸಿದರು.
ಕೋಲಾರದ ಮಿಲ್ಲತ್‌ನಗರದ ಮುಜಾಮಿಲ್ ಇದೇ ರೀತಿ ರಹಮತ್‌ನಗರದ ಒಬ್ಬರಿಂದ ಲಾಕ್‌ಡೌನ್ ದಿನಗಳಲ್ಲಿ ವಾರದ ಬಡ್ಡಿಗೆ 90 ಸಾವಿರಸಾಲ ಪಡೆದಿದ್ದರು. ಎರಡು ವರ್ಷದಲ್ಲಿ 90ಸಾವಿರಕ್ಕೆ 4.32 ಲಕ್ಷ ರೂ. ಬಡ್ಡಿ ಪಾವತಿಸಿದ್ದರು.ನಂತರದ ಬಡ್ಡಿ ಹಣ ನೀಡುವುದಕ್ಕೆ ತಡವಾಗಿದ್ದಕ್ಕೆ ಗಲ್‌ಪೇಟೆ ಪೊಲೀಸರನ್ನೇ ಛೂಬಿಟ್ಟು ಮುಜಾ ಮಿಲ್‌ನನ್ನು ಬಂಧಿಸಿ, ರಸ್ತೆಯಲ್ಲಿ ಮೆರವಣಿಗೆ ಮಾಡಿಕೊಂಡು ಬಂದು ಠಾಣೆಯಲ್ಲಿ ಬರಿ ನಿಕ್ಕರ್‌ನಲ್ಲಿ ಕೂರಿಸಲಾಗಿತ್ತು. ಈ ರೀತಿ ಪೊಲೀಸರನ್ನು ಬಡ್ಡಿವ್ಯವಹಾರಕ್ಕೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು.
ಡೀಸಿ ವೆಂಕಟ ರಾಜ್ ಪ್ರತಿಕ್ರಿಯಿಸಿ, ಇಂಥ ಅವಘಡ ಮುಂದೆ ನಡೆಯದಂತೆ ತಕ್ಕ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದ್ದಲ್ಲದೇ, ಬಡ್ಡಿಕೋರರೊಡನೆ ಕೈ ಜೋಡಿಸಿ ಸಂತ್ರಸ್ಥರನ್ನು ಠಾಣೆಗೆ ಕರೆಸಿ ಕಿರುಕುಳನೀಡಿದ್ದ ಅಧಿಕಾರಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸಿದ್ದಾರೆ. ಸಂತ್ರಸ್ಥ ಮುಜಾಮಿಲ್ ಪಾಷ, ನಾಟಿ ವೈದ್ಯ ಪರಿಷತ್ ಅಧ್ಯಕ್ಷ ಪೀರ್ ಸಾಬ್, ಸಮಾಜ ಸೇವಕ ನೌಷಾದ್ ಇದ್ದರು.
ಮುಸ್ಲಿಂ ಮುಖಂಡರು ಹೇಳಿದ್ದೇನು? :
ಬಡ್ಡಿಹಣ ನೀಡುವುದಕ್ಕೆ ಒಂದು ದಿನ ತಡವಾದರೂ ಸಾಲಗಾರರು ಮನೆಗೆ ನುಗ್ಗಿ ಹೆಂಗಸರು-ಮಕ್ಕಳನ್ನು ಹೊಡೆಯುವುದು, ಕೈಕಾಲು ಕತ್ತರಿಸುವುದಾಗಿ ಬೆದರಿಸುವುದು, ಹಾಡ ಹಗಲೇ ರಾಜಾರೋಷವಾಗಿ ನಡೆಯು ತ್ತಿದೆ. ಸಂತ್ರಸ್ಥರು ಈ ವಿರುದ್ಧ ಸಂಬಂಧಿಸಿದ ಪೊಲೀಸರಿಗೆ ದೂರು ನೀಡಿದರೂ ಕ್ರಮ ಜರುಗುತ್ತಿಲ್ಲ. ಎಷ್ಟೋ ಬಾರಿ ಠಾಣೆಗಳಲ್ಲಿಯೇವಾರದ ಬಡ್ಡಿ ವ್ಯವಹಾರದ ಸೆಟ್ಲಮೆಂಟ್ ನಡೆಯುತ್ತಿವೆ. ಪೊಲೀಸರನ್ನೇ ಸಂತ್ರಸ್ಥರ ಮನೆ ಮೇಲೆ ಛೂಬಿಟ್ಟು ಅವಮಾನ ಮಾಡಿಸುವ ಪರಿಸ್ಥಿತಿ ನಗರದಲ್ಲಿದೆ ಎಂದು ಹೇಳಿದರು.