Advertisement
ಲೋಕಾಯುಕ್ತ ಕಚೇರಿ, ಎಂ.ಎಸ್. ಕಟ್ಟಡ ಹಾಗೂ ವಿಧಾನಸೌಧದಲ್ಲಿ ಭದ್ರತಾ ಲೋಪಗಳಿದ್ದು, ಕೂಡಲೇ ಭದ್ರತೆ ಹೆಚ್ಚಿಸುವಂತೆ 2015ರಲ್ಲೇ ರಾಜ್ಯಗುಪ್ತಚರ ಇಲಾಖೆ ಅಧಿಕಾರಿಗಳು, ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ವರದಿ ನೀಡಿದ್ದರೂ, ಸರ್ಕಾರವಾಗಲಿ, ಪೊಲೀಸ್ ಇಲಾಖೆಯಾಗಲಿ ಎಚ್ಚೆತ್ತುಕೊಂಡಿರಲಿಲ್ಲ.
Related Articles
Advertisement
ಮತ್ತೂಂದೆಡೆ ಲೋಕಾಯುಕ್ತರ ಮೇಲೆ ನಡೆದ ಚಾಕು ಇರಿತ ಪ್ರಕರಣ ಖಂಡಿಸಿ ಹಾಗೂ ಮತ್ತಷ್ಟು ಭದ್ರತಾ ಕ್ರಮಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಲೋಕಾಯುಕ್ತ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ವಕೀಲರು ಪ್ರತಿಭಟನೆ ನಡೆಸಿದರು. ಕೆಲ ಪ್ರಕರಣಗಳನ್ನು ವಿಚಾರಣೆ ನಡೆಸುವಾಗ ಸೂಕ್ತ ಸಾಕ್ಷಿಗಳಿಲ್ಲದಿದ್ದರೆ ಅವುಗಳನ್ನು ಖುಲಾಸೆಗೊಳಿಸಲಾಗುತ್ತದೆ.
ಇದಕ್ಕೆ ಕಾನೂನು ಪ್ರಕಾರ ಹೋರಾಟ ಮಾಡಬೇಕು. ಖುಲಾಸೆಗೊಂಡಿರುವ ಆಕ್ರೋಶದಲ್ಲಿ ವಕೀಲರ ಮೇಲೆಯೂ ಹಲ್ಲೆ ನಡೆಸುವ ಸಾಧ್ಯತೆಗಳಿವೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಭದ್ರತಾ ವೈಫಲ್ಯದ ವಿರುದ್ಧ ಪ್ರತಿಭಟನಾ ನಿರತ ವಕೀಲರು ಆಕ್ರೋಶ ವ್ಯಕ್ತಪಡಿಸಿದರು.
ಎಂಟು ಪತ್ರಗಳಿಗೂ ಸರ್ಕಾರದ ಉತ್ತರವಿಲ್ಲ: ಲೋಕಾಯುಕ್ತ ಕಚೇರಿಗೆ ಸೂಕ್ತ ಭದ್ರತೆ ನೀಡುವಂತೆ ಕೋರಿ 2015ರಿಂದ 2018ರವರೆಗೆ ಸರ್ಕಾರಕ್ಕೆ ಎಂಟು ಬಾರಿ ಪತ್ರ ಬರೆಯಲಾಗಿತ್ತು. 2015ರಲ್ಲಿ ಮೂರು ಬಾರಿ ಮೆಟಲ್ ಡಿಟೆಕ್ಟರ್ ಅಳವಡಿಸುವಂತೆ ಪತ್ರ ಬರೆಯಲಾಗಿತ್ತು. ನಂತರ 2016-17ರಲ್ಲಿ ಐದು ಬಾರಿ ಸರ್ಕಾರಕ್ಕೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಎಂದು ಲೋಕಾಯುಕ್ತ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.