ದೇವದುರ್ಗ: ಸಮೀಪದ ಗಬ್ಬೂರು ಗ್ರಾಮದ ರಾಜ್ಯ ಹೆದ್ದಾರಿ ರಸ್ತೆ ಮೇಲೆ ಮಳೆ, ಚರಂಡಿ ಗಲೀಜು ನೀರು ನಿಂತು ಸಂಚಾರಕ್ಕೆ ಆಡಚರಣೆ ಉಂಟಾಗುತ್ತಿದೆ. ಗ್ರಾಮ ಪಂಚಾಯತಿ ಆಡಳಿತ ಮಂಡಳಿ ದಿವ್ಯ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಸಮಸ್ಯೆ ಕುರಿತು ಈಗಾಗಲೇ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ರಾಜ್ಯ ಹೆದ್ದಾರಿ ರಸ್ತೆ ಮೇಲೆ ಸಂಗ್ರಹವಾಗಿರುವ ಗಲೀಜು ನೀರು ತೆರುವುಗೊಳಿಸಲು ಹಿಂದೇಟು ಹಾಕಿದ್ದಾರೆ.
ಈ ರಸ್ತೆ ಮೂಲಕ ನಿತ್ಯ ನೂರಾರು ವಾಹನಗಳು, ಬೈಕ್ ಗಳು ಚಲ್ಲಿಸುತ್ತಿವೆ. ಸಂಗ್ರಹವಾದ ನೀರಿನಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದ್ದು, ಸುತ್ತಲಿನ ವ್ಯಾಪಾರಸ್ಥರು ಹಲವು ಸಮಸ್ಯೆ ಎದುರಿಸುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಹೆದ್ದಾರಿ ಮೂಲಕ ಜನಪತ್ರಿನಿಧಿ ಗಳು ಸಂಚಾರ ಮಾಡುತ್ತಿದ್ದು, ಸಮಸ್ಯೆ ಕುರಿತು ಗಮನ ಹರಿಸಿಲ್ಲ.
ಗ್ರಾಪಂ ಇದ್ದು, ಇಲ್ಲದಂತಾಗಿದೆ. ರಾಜ್ಯ ಹೆದ್ದಾರಿ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಿಸಲಾಗಿದೆ. ಆದರೆ, ಕಾಮಗಾರಿ ಅರ್ಧಕ್ಕೆ ಕೈಬಿಟ್ಟಿರುವುದರಿಂದ ನೀರು ಸುಗಮವಾಗಿ ಹರಿಯದೇ ರಸ್ತೆಯಲ್ಲಿ ಸಂಗ್ರಹವಾಗುತ್ತಿದೆ. ಹೀಗಾಗಿ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ.
ಮಳೆ ಬಂದಾಗ ರಸ್ತೆಯಲ್ಲಿ ಎರಡು ಅಡಿವರಿಗೆ ನೀರು ನಿಲ್ಲದೆ. ವಾಹನಗಳು, ಬೈಕ್ ಸವಾರರು ಸಂಚಾರ ಮಾಡಲು ಹರಸಾಹಸ ಪಡುವಂತ ಸ್ಥಿತಿ ಎದುರಾಗುತ್ತದೆ. ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಾಗಿದ್ದು, ಜಿಲ್ಲಾಮಟ್ಟದ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಹೆದ್ದಾರಿ ರಸ್ತೆ ಮೇಲೆ ನಿಂತ ನೀರಿನಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ಕೊಡಲೇ ಸರಿಪಡಿಸಬೇಕು ಎಂದು ಗ್ರಾಮಸ್ಥ ಶಿವರಾಜ ಆಗ್ರಹಿಸಿದ್ದಾರೆ.