Advertisement

ಮೆಸ್ಕಾಂ ಅಧಿಕಾರಿಗಳ ಗೈರು: ಗ್ರಾಮಸ್ಥರ ಆಕ್ರೋಶ

10:41 PM Jul 10, 2019 | Team Udayavani |

ಅಜೆಕಾರು: ವರಂಗ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿದ್ಯುತ್‌ ಸಮಸ್ಯೆ ಬಹಳಷ್ಟಿದ್ದರೂ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆಗೆ ಬಂದಿಲ್ಲ. ಅಧಿಕಾರಿಗಳು ಗ್ರಾಮ ಸಭೆಗೆ ಬಾರದೆ ನುಣುಚಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ವರಂಗ ಗ್ರಾಮ ಸಭೆಯಲ್ಲಿ ನಡೆಯಿತು.

Advertisement

ಪಂಚಾಯತ್‌ನ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಜು. 10 ಪಂಚಾಯತ್‌ ಸಭಾಭವನದಲ್ಲಿ ಪಂಚಾಯತ್‌ ಅಧ್ಯಕ್ಷ ಸುರೇಂದ್ರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪಂಚಾಯತ್‌ ವ್ಯಾಪ್ತಿಯ ಮಾತಿಬೆಟ್ಟು ಸಂಪಿಗೆ ಬಾಕ್ಯಾರು ಬಳಿ ಟ್ರಾನ್ಸ್‌ಫಾರ್ಮರ್‌ ಅಳವಡಿಸುವಂತೆ ಕಳೆದ 10 ವರ್ಷಗಳಿಂದ ಮೆಸ್ಕಾಂಗೆ ಮನವಿ ಮಾಡುತ್ತಬಂದಿದ್ದು ಪ್ರತೀ ಗ್ರಾಮ ಸಭೆಯಲ್ಲಿಯೂ ಈ ಬಗ್ಗೆ ಒತ್ತಾಯಪಡಿಸಲಾಗುತ್ತಿದೆ. ಆದರೂ ಸಮಸ್ಯೆ ಪರಿಹಾರಗೊಂಡಿಲ್ಲ ಎಂದು ರತ್ನಾಕರ ಪೂಜಾರಿ ಹೇಳಿದರು.

ಸಂಪಿಗೆ ಬಾಕ್ಯಾರು ಸುತ್ತಮುತ್ತ ಪರಿಸರದಲ್ಲಿ ಪ್ರತೀನಿತ್ಯ ಲೋ ವೋಲೆrೕಜ್‌ ಸಮಸ್ಯೆಯಿಂದ ಕೃಷಿಕರು ತೀವ್ರ ಸಂಕಷ್ಟಕ್ಕೆ ಈಡಾಗುವಂತಾಗಿದೆ. ಈ ಪರಿಸರದಲ್ಲಿ ಹೊಸ ಟ್ರಾನ್ಸ್‌ಫಾರ್ಮರ್‌ ಅಳವಡಿಸುವುದರಿಂದ ಸಮಸ್ಯೆಗೆ ಪರಿಹಾರ ಕಾಣಬಹುದು ಎಂದರು.

ಪಡುಕುಡೂರು, ಮಾವಿನ ಕಟ್ಟೆ ಪರಿಸರದಲ್ಲಿ ನಿರಂತರ ವಿದ್ಯುತ್‌ ಕಣ್ಣಾಮುಚ್ಚಾಲೆಯಾಗುತ್ತಿದ್ದು ಸಮಸ್ಯೆ ಬಗ್ಗೆ ಮೆಸ್ಕಾಂ ಇಲಾಖೆಯ ಸಿಬಂದಿ ‌ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರ ಕಾಣುತ್ತಿಲ್ಲ. ಪಂಚಾಯತ್‌ ವ್ಯಾಪ್ತಿಯಲ್ಲಿ ವಿದ್ಯುತ್‌ ಸಮಸ್ಯೆ ನಿರಂತರವಾಗಿದ್ದು ಈ ಬಗ್ಗೆ ಮೆಸ್ಕಾಂ ಸಿಬಂದಿಯವರು ನಿರ್ಲಕ್ಷ್ಯತನ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

Advertisement

ಜನಸಂಪರ್ಕ ಸಭೆಗೆ ಆಗ್ರಹ

ಪಂಚಾಯತ್‌ ವ್ಯಾಪ್ತಿಯಲ್ಲಿ ಮೆಸ್ಕಾಂ ಇಲಾಖೆಗೆ ಸಂಬಂಧಪಟ್ಟಂತೆ ಹಲವಾರು ಸಮಸ್ಯೆಗಳಿದ್ದು ಇದರ ಪರಿಹಾರಕ್ಕೆ ಪಂಚಾಯತ್‌ ಸಭಾಭವನದಲ್ಲಿ ಮೆಸ್ಕಾಂ ಅಧಿಕಾರಿಗಳನ್ನು ಒಳಗೊಂಡ ಜನಸಂಪರ್ಕ ಸಭೆಯನ್ನು ತುರ್ತಾಗಿ ಕರೆಯುವಂತೆ ಪಂಚಾಯತ್‌ಗೆ ಗ್ರಾಮಸ್ಥರು ಮನವಿ ಮಾಡಿದರು.

ಮರ ತೆರವಿಗೆ ಮನವಿ

ಪಂಚಾಯತ್‌ ವ್ಯಾಪ್ತಿಯ ಅಂಡಾರು ಗ್ರಾಮದ ಅಂಗನವಾಡಿ ಕಟ್ಟಡ ಸಮೀಪದಲ್ಲಿಯೇ ಅಪಾಯಕಾರಿ ಮರವಿದ್ದು ತೆರವು ಮಾಡುವಂತೆ ಹಲವು ವರ್ಷಗಳಿಂದ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ಶಕುಂತಳಾ ಸಭೆಯ ಗಮನಕ್ಕೆ ತಂದರು.

ಅಪಾಯಕಾರಿ ಮರವು ಭಾರೀ ಗಾಳಿ ಮಳೆ ಸಂದರ್ಭ ಕಟ್ಟಡದ ಮೇಲೇಯೇ ಉರುಳಿ ಬೀಳುವ ಸಂಭವವಿದ್ದು ಅಪಾಯ ಸಂಭವಿಸುವ ಮೊದಲೇ ಅರಣ್ಯ ಇಲಾಖೆ ಮರ ತೆರವುಗೊಳಿಸಬೇಕಾಗಿದೆ ಎಂದರು.

ಉತ್ತಮ ಗಿಡಕ್ಕೆ ಮನವಿ

ಅರಣ್ಯ ಇಲಾಖೆಯಿಂದ ಕೃಷಿಕರಿಗೆ ಹಾಗೂ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸಲಾಗುತ್ತಿದೆ. ಆದರೆ ರೈತರಿಗೆ ಅಗತ್ಯವಿರುವ ಗಿಡಗಳು ದೊರೆಯುತ್ತಿಲ್ಲ. ಈಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಗಮನಹರಿಸಿ ರೈತರಿಗೆ ಯೋಗ್ಯವಾದ ಗಿಡಗಳನ್ನು ವಿತರಿಸುವ ಕ್ರಮ ಕೈಗೊಳ್ಳಬೇಕೆಂದು ಕೃಷಿಕ ಸುಂದರ್‌ ಶೆಟ್ಟಿ ಮನವಿ ಮಾಡಿದರು.

ಶೀಘ್ರ ಕಾಮಗಾರಿಗೆ ಮನವಿ

ಅಂಡಾರು ಗ್ರಾಮದ ಬಾಳ್ಜೆ ಚಿಕ್ಕಾಡಿ ಪರಿಸರದಲ್ಲಿ ಕಿಂಡಿ ಅಣೆಕಟ್ಟು ಸಹಿತ ಕಿರು ಸೇತುವೆಗೆ 9 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದ್ದರೂ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಗ್ರಾಮಸ್ಥರಾದ ವಸಂತ ಶೆಟ್ಟಿ ಸಭೆಯ ಗಮನಕ್ಕೆ ತಂದರು.

2018ನೇ ಸಾಲಿನಲ್ಲಿ ಅಡಿಕೆ ಕೊಳೆ ರೋಗಕ್ಕೆ ತುತ್ತಾದ ಅರ್ಹ ರೈತರಿಗೆ ಪರಿಹಾರ ಧನ ದೊರೆಯದೆ ಅನ್ಯಾಯವಾಗಿದೆ ಎಂದು ಗ್ರಾಮಸ್ಥರಾದ ಹೃದಯ ಕುಮಾರ್‌ ಶೆಟ್ಟಿ ಹೇಳಿದರು. ಕೆಲ ರೈತರಿಗೆ ಪರಿಹಾರ ದೊರೆತರೆ ಇನ್ನು ಕೆಲ ರೈತರಿಗೆ ಇನ್ನೂ ಪರಿಹಾರ ಧನ ದೊರೆತಿಲ್ಲ ಇಂತಹ ತಾರತಮ್ಯ ನಡೆಯಬಾರದು ಎಂದರು. ಈ ಬಗ್ಗೆ ಸ್ಪಷ್ಟನೆ ನೀಡಿದ ತೋಟಗಾರಿಕೆ ಇಲಾಖೆಯ ಅಧಿಕಾರಿ ಚಿದಾನಂದರವರು, ರೈತರಿಂದ ಬಂದ ಎಲ್ಲ ಅರ್ಜಿಗಳನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಸರಕಾರದಿಂದ ಬಂದ ಪರಿಹಾರ ಧನವನ್ನು ವಿತರಿಸಲಾಗಿದೆ. ಅರ್ಜಿ ಕೊಟ್ಟು ಪರಿಹಾರ ಧನ ಬಾರದೇ ಇದ್ದವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಂಚಾಯತ್‌ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿರುವ ತೋಡುಗಳ ಹೂಳನ್ನು ಹಿಂದೆ ಜಲಾನಯನ ಇಲಾಖೆಯಿಂದ ತೆಗೆಯಲಾಗುತ್ತಿತ್ತು. ಆದರೆ ಕೆಲ ವರ್ಷಗಳಿಂದ ಜಲಾನಯನ ಇಲಾಖೆಯು ಕೃಷಿ ಇಲಾಖೆಯೊಂದಿಗೆ ಸೇರ್ಪಡೆಗೊಂಡಿದ್ದು ಅನಂತರದ ದಿನಗಳಲ್ಲಿ ತೋಡುಗಳ ಹೂಳೆತ್ತದೆ ಕೃಷಿ ಭೂಮಿಗೆ ನೀರು ನುಗ್ಗಿ ಕೃತಕ ನೆರೆ ಸೃಷ್ಟಿಯಾಗುತ್ತಿದೆ ಎಂದು ಗ್ರಾಮಸ್ಥರಾದ ಮುಟ್ಲುಪಾಡಿ ಸತೀಶ್‌ ಶೆಟ್ಟಿ ಹೇಳಿದರು. ಗ್ರಾಮೀಣ ಭಾಗದ ತೋಡುಗಳ ಹೂಳೆತ್ತುವ ಬಗ್ಗೆ ನಿರ್ಣಯ ಕೈಗೊಂಡು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವಂತೆ ಸತೀಶ್‌ ಶೆಟ್ಟಿ ಆಗ್ರಹಿಸಿದರು.

ಹೂಳೆತ್ತದೆ ಕೃತಕ ನೆರೆ

ಪಂಚಾಯತ್‌ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿರುವ ತೋಡುಗಳ ಹೂಳನ್ನು ಹಿಂದೆ ಜಲಾನಯನ ಇಲಾಖೆಯಿಂದ ತೆಗೆಯಲಾಗುತ್ತಿತ್ತು. ಆದರೆ ಕೆಲ ವರ್ಷಗಳಿಂದ ಜಲಾನಯನ ಇಲಾಖೆಯು ಕೃಷಿ ಇಲಾಖೆಯೊಂದಿಗೆ ಸೇರ್ಪಡೆಗೊಂಡಿದ್ದು ಅನಂತರದ ದಿನಗಳಲ್ಲಿ ತೋಡುಗಳ ಹೂಳೆತ್ತದೆ ಕೃಷಿ ಭೂಮಿಗೆ ನೀರು ನುಗ್ಗಿ ಕೃತಕ ನೆರೆ ಸೃಷ್ಟಿಯಾಗುತ್ತಿದೆ ಎಂದು ಗ್ರಾಮಸ್ಥರಾದ ಮುಟ್ಲುಪಾಡಿ ಸತೀಶ್‌ ಶೆಟ್ಟಿ ಹೇಳಿದರು. ಗ್ರಾಮೀಣ ಭಾಗದ ತೋಡುಗಳ ಹೂಳೆತ್ತುವ ಬಗ್ಗೆ ನಿರ್ಣಯ ಕೈಗೊಂಡು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವಂತೆ ಸತೀಶ್‌ ಶೆಟ್ಟಿ ಆಗ್ರಹಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next