Advertisement
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಚಿನ್ ದೇವಾ ಅವರು ತನ್ನ ಸೈಕಲ್ ಪ್ರಯಾಣದ ಉದ್ದೇಶ ಹಾಗೂ ಅನುಭವಗಳನ್ನು ವಿವರಿಸಿದರು. ಗ್ವಾಲಿಯರ್‌ನ ಪ್ರತಿಷ್ಠಿತ ಸಿಂಧಿಯಾ ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಸಚಿನ್ ದೇವಾ ಅವರು ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಬ್ಯಾಂಕೊಂದರಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಮಂಗಳೂರು ಮೂಲದ ಯುವತಿಯನ್ನು ವಿವಾಹವಾಗಿದ್ದಾರೆ.
ಈ ಹದಿಮೂರು ದಿನಗಳ ಪ್ರಯಾಣದಲ್ಲಿ ಹಲವಾರು ಅನುಭವಗಳನ್ನು ಪಡೆದಿದ್ದೇನೆ. ಸೈಕಲ್ ಪ್ರಯಾಣದಿಂದ ಆರೋಗ್ಯ ಕಾಪಾಡಬಹುದು, ವಾಯು ಮಾಲಿನ್ಯ ತಡೆಯಬಹುದು ಹಾಗೂ ನಮ್ಮ ದೇಶ ಅತ್ಯಂತ ಸುರಕ್ಷಿತ ದೇಶ ಎಂಬ ಸಂದೇಶವನ್ನು ಸಾರುವುದು ನನ್ನ ಸೈಕಲ್ ಪ್ರಯಾಣದ ಮುಖ್ಯ ಉದ್ದೇಶವಾಗಿತ್ತು. ಪ್ರಯಾಣದುದ್ದಕ್ಕೂ ಜನರು, ಸಂಘ-ಸಂಸ್ಥೆಗಳು ಸ್ವಾಗತ ನೀಡಿ ಪ್ರೋತ್ಸಾಹಿಸಿದ್ದಾರೆ ಎಂದರು. ಲಡಾಖ್‌ನಿಂದ ಕನ್ಯಾಕುಮಾರಿಗೆ ಸೈಕಲ್ ಪ್ರಯಾಣ
‘ಬಾಲ್ಯದಿಂದಲೇ ಸಾಹಸ ಮಾಡುವ ಹಂಬಲ ನನ್ನಲ್ಲಿತ್ತು. ಬೈಕ್ ರ‍್ಯಾಲಿ , ಕಾರು ರ‍್ಯಾಲಿ ಮುಂತಾದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದೆ. ಈಗ 2200 ಕಿ.ಮೀ. ಸೈಕಲ್ ಪ್ರಯಾಣವನ್ನು ಯಶಸ್ವಿಯಾಗಿ ಮುಗಿಸಿದ್ದೇನೆ. ಮುಂದಿನ ಹಂತದಲ್ಲಿ ಲಡಾಖ್‌ನಿಂದ ಕನ್ಯಾಕುಮಾರಿಗೆ ಸೈಕಲ್ ಪ್ರಯಾಣ ಹಮ್ಮಿಕೊಳ್ಳಲು ನಿರ್ಧರಿಸಿದ್ದೇನೆ ‘ ಎಂದು ತಿಳಿಸಿದರು.
Related Articles
ರೋಟರಿ ಕ್ಲಬ್‌ನ ವಿಕ್ರಂದತ್ತ, ವಿನಾಯಕ ಪ್ರಭು ಉಪಸ್ಥಿತರಿದ್ದರು.
Advertisement
7 ರಾಜ್ಯಗಳಲ್ಲಿ ಪ್ರಯಾಣ‘ನವೆಂಬರ್ 30ರಂದು ಹೊಸ ದಿಲ್ಲಿಯ ಇಂಡಿಯಾಗೇಟ್‌ನಿಂದ ತನ್ನ ಸೈಕಲ್ ಪ್ರಯಾಣವನ್ನು ಆರಂಭಿಸಿದ್ದು ಡಿ. 12ರಂದು ಬೆಂಗಳೂರಿನಲ್ಲಿ ಮುಕ್ತಾಯಗೊಂಡಿದೆ. ಒಟ್ಟು 13 ದಿನಗಳಲ್ಲಿ ಈ ಕಠಿನ ಸೈಕಲ್ ಪ್ರಯಾಣವನ್ನು ಪೂರ್ತಿಗೊಳಿಸಿದ್ದೇನೆ. 7 ರಾಜ್ಯಗಳಲ್ಲಿ ಸಾಗಿಬಂದಿದ್ದು ದಿನವೊಂದಕ್ಕೆ 170 ರಿಂದ 200 ಕಿ.ಮೀ.ಯಂತೆ ಒಟ್ಟು 2,200 ಕಿ.ಮೀ. ದೂರ ಕ್ರಮಿಸಿದ್ದೇನೆ.