Advertisement
ಸಾರ್ವಜನಿಕರಿಗೆ ವಿದ್ಯುತ್ ಪೂರೈಕೆ ಯಲ್ಲಿ ಯಾವುದೇ ಸಮಸ್ಯೆಯಾಗದಂತೆ, ಜೀವ ಹಾನಿ ಸಂಭವಿಸದಂತೆ ನೋಡಿ ಕೊಳ್ಳಲು ಮೆಸ್ಕಾಂ ವಿಶೇಷ ಕಾರ್ಯ ಯೋಜನೆ ರೂಪಿಸಿದೆ.
Related Articles
Advertisement
ಉಡುಪಿ ವಿಭಾಗದಲ್ಲಿ 52, ಕುಂದಾಪುರ 56, ಕಾರ್ಕಳದಲ್ಲಿ 30 ಮಂದಿ ಸೇರಿ 138 ಜನರನ್ನು ಮನ್ಸೂನ್ ಗ್ಯಾಂಗ್‌ಗೆ ನೇಮಕ ಮಾಡಿಕೊಳ್ಳಲಾಗಿದೆ. ಈ ತಂಡದಲ್ಲಿ ಮೆಸ್ಕಾಂ ಸಿಬಂದಿಯೂ ಇದ್ದಾರೆ. ಜತೆಗೆ ಗ್ರಾಮೀಣ ಮತ್ತು ನಗರ ಭಾಗದಲ್ಲಿ ತುರ್ತು ತೆರಳಿ ಕೆಲಸಗಳನ್ನು ನಿರ್ವಹಿಸಲು ಉಡುಪಿಗೆ 5, ಕುಂದಾಪುರ 2, ಕಾರ್ಕಳದಲ್ಲಿ 4 ವಾಹನಗಳನ್ನು ಮೆಸ್ಕಾಂ ನೀಡಿದೆ. ಅಪಾಯಕಾರಿ ಮರಗಳ ತೆರವು, ಗ್ರೀಸಿಂಗ್ ವರ್ಕ್ಸ್, ಕೆಳಗೆ ಬಿದ್ದ ತಂತಿಗಳ ನಿರ್ವಹಣೆ, ಹೊಸ ತಂತಿ, ಕಂಬಗಳ ಅಳವಡಿಕೆ ಮೊದಲಾದ ಕೆಲಸಗಳನ್ನು ನಿರ್ವಹಿಸಲಿದೆ.
ಲೈನ್‌ಮನ್‌ಗಳು ಒತ್ತಡದಲ್ಲಿರುತ್ತಾರೆ, ಸಹಾಯವಾಣಿ ಸಂಪರ್ಕಿಸಿ
ಮಳೆಗಾಲವಾದ್ದರಿಂದ ತಾಂತ್ರಿಕ, ತಾಂತ್ರಿಕೇತರ ಕೆಲಸಗಳ ಒತ್ತಡದಲ್ಲಿ ಲೈನ್‌ಮೆನ್ ಗಳಿರುತ್ತಾರೆ. ಸ್ಥಳೀಯರ ಮೊಬೈಲ್ ಕರೆಗಳನ್ನು ಅವರು ಸ್ವೀಕರಿಸುವುದಿಲ್ಲ ಎಂಬ ದೂರಿನೊಂದಿಗೆ ಮೆಸ್ಕಾಂ ಸ್ಪಂದಿಸುತ್ತಿಲ್ಲ ಎಂಬ ಆರೋಪ ಸಾಮಾನ್ಯವಾಗಿ ಗ್ರಾಹಕರು ಮಾಡುತ್ತಾರೆ. ಅವರು ಕೆಲಸಗಳ ಒತ್ತಡದಲ್ಲಿ ಕರೆ ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರು ವಿದ್ಯುತ್ ಪೂರೈಕೆ ಸಂಬಂಧಿತ ಯಾವುದೆ ದೂರುಗಳಿದ್ದಲ್ಲಿ ಮೆಸ್ಕಾಂ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿಗೆ 1912 ಕರೆ ಮಾಡಿ ವಿಷಯ ತಿಳಿಸಬಹುದು. ತತ್‌ಕ್ಷಣ ಸಂಬಂಧಪಟ್ಟ ಸೆಕ್ಷನ್‌ಗೆ ಮಾಹಿತಿ ರವಾನೆಯಾಗಿ ತುರ್ತು ಕ್ರಮಕೈಗೊಳ್ಳುತ್ತಾರೆ.
ಮುಂಜಾಗ್ರತೆ ಕ್ರಮ
ಮಳೆಗಾಲದಲ್ಲಿ ಮೆಸ್ಕಾಂ ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಸಾರ್ವಜನಿಕ ದೂರು ಮತ್ತಿತರ ತುರ್ತು ಕೆಲಸಗಳಿಗೆ ಮೆಸ್ಕಾಂ ಮಾನ್ಸೂನ್ ಗ್ಯಾಂಗ್‌ನಲ್ಲಿ ಕಾರ್ಯನಿರ್ವಹಿಸಲು 138 ಮಂದಿ ತಾತ್ಕಾಲಿಕ ಕಾರ್ಮಿಕರನ್ನು ತೆಗೆದುಕೊಂಡಿದ್ದೇವೆ. ಹೆಚ್ಚುವರಿ ವಾಹನಗಳನ್ನು ಪಡೆದು ಕಾರ್ಕಳ, ಉಡುಪಿ, ಕುಂದಾಪುರಕ್ಕೆ ನೀಡಲಾಗಿದೆ. ದೂರುಗಳನ್ನು ಮೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ತಿಳಿಸಬಹುದು. ಗಂಭೀರ ಸಮಸ್ಯೆ, ದೂರುಗಳಿದ್ದಲ್ಲಿ ಆಯಾ ವ್ಯಾಪ್ತಿಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರನ್ನು ಸಂಪರ್ಕಿಸಬಹುದು. -ನರಸಿಂಹ ಪಂಡಿತ್, ಅಧೀಕ್ಷಕ ಎಂಜಿನಿಯರ್, ಮೆಸ್ಕಾಂ, ಉಡುಪಿ ಜಿಲ್ಲೆ
ಅವಿನ್ ಶೆಟ್ಟಿ