Advertisement

ಕಾರ್ಕಳಕ್ಕೆ ಮೆಸ್ಕಾಂ ವಿಭಾಗೀಯ ಕಚೇರಿ ಶೀಘ್ರ

11:15 PM Jan 04, 2020 | Team Udayavani |

ಉತ್ತಮ ಸೇವೆ, ಗುಣಮಟ್ಟದ ವಿದ್ಯುತ್‌ ಪೂರೈಕೆಗೆ ಉಪವಿಭಾಗ ಸ್ಥಾಪನೆ ಅಗತ್ಯ. ಈ ನಿಟ್ಟಿನಲ್ಲಿ ಅಜೆಕಾರು, ಬೈಲೂರಿನಲ್ಲಿ ಹೊಸ ಉಪವಿಭಾಗ ಸ್ಥಾಪನೆಗೆ ಮೆಸ್ಕಾಂ ಮುಂದಾಗಿದ್ದು ಜನರ ಆಶಯ ಈಡೇರಿಸುವ ಸನ್ನಾಹದಲ್ಲಿದೆ.

Advertisement

ಕಾರ್ಕಳ: ಆಡಳಿತಾತ್ಮಕ ಅನುಕೂಲಕ್ಕಾಗಿ ಮತ್ತು ಕಾರ್ಕಳ, ಹೆಬ್ರಿ ತಾಲೂಕಿನ ವಿದ್ಯುತ್‌ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರ್ಕಳ ತಾಲೂಕಿನಲ್ಲೇ ಮೆಸ್ಕಾಂನ ವಿಭಾಗೀಯ ಕಚೇರಿ ತೆರೆಯುವ ಯೋಜನೆ ಸಿದ್ಧಗೊಂಡಿದೆ. ಸರಕಾರದಿಂದ ಈಗಾಗಲೇ ಈ ನಿಟ್ಟಿನಲ್ಲಿ ತಾತ್ತಿ$Ìಕ ಒಪ್ಪಿಗೆ ದೊರೆತಿದ್ದು, ಮುಂದಿನ ಕಾರ್ಯವಿಧಾನ ಕೈಗೊಳ್ಳುವಂತೆ ಮೆಸ್ಕಾಂ ಆಡಳಿತ ಮಂಡಲಿಗೆ ಸರಕಾರ ನಿರ್ದೇಶನ ನೀಡಿದೆ. ಎಲ್ಲವೂ ಅಂದುಕೊಂಡತೆ ನಡೆದಲ್ಲಿ ಮುಂದಿನ ಮಳೆಗಾಲದೊಳಗಾಗಿ ವಿಭಾಗೀಯ ಕಚೇರಿ ಕಾರ್ಕಳಕ್ಕೆ ದೊರೆಯಲಿದೆ.

ಕಾರ್ಕಳವು ಉಡುಪಿಯಲ್ಲಿರುವ ಮೆಸ್ಕಾಂ ವಿಭಾಗೀಯ ಕಚೇರಿಯನ್ನೇ ಅವಲಂಬಿಸಿರುವ ಕಾರಣ ಕಂಬ, ತಂತಿ ಸೇರಿದಂತೆ ಇನ್ನಿತರ ವಿದ್ಯುತ್‌ ಪರಿಕರಗಳನ್ನು ಅಲ್ಲಿಂದಲೇ ಪಡೆಯಬೇಕಾದ ಅನಿವಾರ್ಯತೆ ಇದೆ.

ಕಾರ್ಯನಿರ್ವಾಹಕ ಎಂಜಿನಿಯರ್‌ ವಿಭಾಗೀಯ ಕಚೇರಿ ಕಾರ್ಕಳದಲ್ಲಿ ಆದಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್‌ ಹುದ್ದೆ ಕಾರ್ಕಳಕ್ಕೆ ದೊರೆಯಲಿದೆ. ಇವರೊಂದಿಗೆ ತಾಂತ್ರಿಕ ವಿಭಾಗದ ಸಿಬಂದಿಯೂ ಲಭ್ಯರಾಗಲಿರುವರು. ಈ ಮೂಲಕ ವಿದ್ಯುತ್‌ ಗ್ರಾಹಕರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ದೊರೆಯಲಿದೆ.

ಕಾರ್ಕಳ ನಗರ ಮತ್ತು ಕೇಮಾರುವಿನಲ್ಲಿ ಕೆಪಿಟಿಸಿಎಲ್‌ನ 110 ಕೆ.ವಿ. ವಿದ್ಯುತ್‌ ಸಾಮರ್ಥ್ಯದ ಉಪವಿಭಾಗ ಕೇಂದ್ರ, ಹೆಬ್ರಿಯಲ್ಲಿ ಮೆಸ್ಕಾಂನ 33/11 ಕೆ.ವಿ. ಸಾಮರ್ಥ್ಯದ ಉಪವಿಭಾಗ ಕೇಂದ್ರವಿದ್ದು, ಇಲ್ಲಿಂದಲೇ ಕಾರ್ಕಳ, ಹೆಬ್ರಿ ತಾಲೂಕಿನಾದ್ಯಂತ ವಿದ್ಯುತ್‌ ಪೂರೈಕೆಯಾಗುತ್ತಿದೆ.

Advertisement

ಅಜೆಕಾರು, ಬೈಲೂರಿನಲ್ಲಿ ಹೊಸ ಉಪವಿಭಾಗ ಅಜೆಕಾರು ಮತ್ತು ಬೈಲೂರಿನಲ್ಲಿ 33/11 ಕೆ.ವಿ. ಸಾಮರ್ಥ್ಯದ ಉಪವಿಭಾಗ ಕೇಂದ್ರ ನಿರ್ಮಾಣ ಕುರಿತಂತೆ ಮೆಸ್ಕಾಂ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅಜೆಕಾರುವಿನಲ್ಲಿ ಈಗಾಗಲೇ ಉಪವಿಭಾಗ ಕೆಂದ್ರಕ್ಕಾಗಿ ಜಾಗ ಗುರುತಿಸಲಾಗಿದೆ. ಶಿರ್ಲಾಲು, ಕೆರ್ವಾಶೆ, ಅಂಡಾರು, ಮುನಿಯಾಲು, ಕಡ್ತಲ, ದೊಂಡೇರಂಗಡಿ, ಹೆರ್ಮುಂಡೆ, ಅಜೆಕಾರು, ವರಂಗ ಪ್ರದೇಶಗಳಿಗೆ ಅನಂತರ ಇದರಿಂದ ಗುಣಮಟ್ಟದ ವಿದ್ಯುತ್‌ ಸರಬರಾಜಾಗಲಿದೆ.ಅಜೆಕಾರುವಿನಲ್ಲಿ ಉಪವಿಭಾಗ ಕೇಂದ್ರಕ್ಕೆ ಗುರುತಿಸಲಾದ ಜಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಗಳಿದ್ದು, ಅವುಗಳನ್ನು ಕಡಿಯಲು ಅನುಮತಿ ದೊರೆತಿಲ್ಲ. ಹೀಗಾಗಿ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ.

ಬೈಲೂರು ಪರಿಸರದಲ್ಲಿ ಉಪವಿಭಾಗ ಕೇಂದ್ರಕ್ಕಾಗಿ ಕಾದಿರಿಸಿದ ಜಾಗ ಕಲ್ಲುಬಂಡೆಯಿಂದಲೇ ಆವೃತ್ತವಾಗಿರುವ ಕಾರಣ ಬೇರೆ ಜಾಗ ಗುರುತಿಸಿಕೊಡುವಂತೆ ಮೆಸ್ಕಾಂ ಇಲಾಖೆ ಬೈಲೂರು ಗ್ರಾ.ಪಂ.ಗೆ ಈಗಾಗಲೇ ಮನವಿ ಮಾಡಿದೆ.

ಕಳೆದ ಒಂದೇ ವರ್ಷದಲ್ಲಿ ಕಾರ್ಕಳದಲ್ಲಿ ಸುಮಾರು 645 ವಿದ್ಯುತ್‌ ಕಂಬ
(98 ಲಕ್ಷ ರೂ. ನಷ್ಟ), ಸುಮಾರು 146 ಟಿಸಿ (56 ಲಕ್ಷ ರೂ. ನಷ್ಟ) ಹಾನಿಗೀಡಾಗಿದೆ.

ಗೃಹ ಬಳಕೆ ಸಂಪರ್ಕ 59,525
ಕಾರ್ಕಳ ಅತ್ಯಧಿಕ ಕಲ್ಲುಬಂಡೆಗಳನ್ನು ಹೊಂದಿರುವ ತಾಲೂಕು. ಹೀಗಾಗಿ ಸಿಡಿಲು ಮಿಂಚಿನ ಆರ್ಭಟವೂ ಅಧಿಕ. ಪಶ್ವಿ‌ಮ ಘಟ್ಟದ ತಪ್ಪಲಾದ ಕಾರಣ ಅರಣ್ಯ ಸಂಪತ್ತಿನೊಂದಿಗೆ ಗಾಳಿ ಮಳೆಯೂ ಹೆಚ್ಚು. ಪರಿಣಾಮ ಮಳೆಗಾಲದಲ್ಲಿ ವಿದ್ಯುತ್‌ ಕಂಬ ಹಾನಿಗೀಡಾಗುವುದು,ಟ್ರಾನ್ಸ್‌ಫಾರ¾ರ್‌ ಕೆಟ್ಟು ಹೋಗುವುದು ಕಾರ್ಕಳದಲ್ಲಿ ಸಾಮಾನ್ಯ ಸಂಗತಿ.

ಹೊಸ ಉಪ ವಿಭಾಗ
ಸರಕಾರದಿಂದ ವಿಭಾಗೀಯ ಕಚೇರಿಗೆ ತಾತ್ತಿ$Ìಕ ಒಪ್ಪಿಗೆ ದೊರೆತಿದ್ದು ಮುಂದಿನ ಮಳೆಗಾಲದೊಳಗೆ ವಿಭಾಗೀಯ ಕಚೇರಿ ದೊರೆಯಲಿದೆ

ಕಾರ್ಕಳಕ್ಕೆ ಪ್ರಯೋಜನ
ಸರಕಾರದ ಎಲ್ಲ ಇಲಾಖೆಗಳಲ್ಲೂ ಹೊಸತನ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಾರ್ಕಳದಲ್ಲಿ ಮೆಸ್ಕಾಂ ವಿಭಾಗೀಯ ಕಚೇರಿ ತೆರೆಯುವ ಅಗತ್ಯತೆ ಕುರಿತು ಸರಕಾರದ ಗಮನ ಸೆಳೆದಿದ್ದೆ. ಈ ನಿಟ್ಟಿನಲ್ಲಿ ಪೂರಕ ಪ್ರಯತ್ನಗಳಾಗುತ್ತಿದ್ದು, ಮುಂದಿನ ಕೆಲವೇ ತಿಂಗಳಲ್ಲಿ ವಿಭಾಗೀಯ ಕಚೇರಿ ನಿರ್ಮಾಣವಾಗಲಿದೆ. ಇದರಿಂದ ಕಾರ್ಕಳ ತಾಲೂಕಿಗೆ ಸಾಕಷ್ಟು ಪ್ರಯೋಜನ ದೊರೆಯಲಿದೆ.
-ವಿ.ಸುನಿಲ್‌ ಕುಮಾರ್‌,
ಶಾಸಕರು, ಕಾರ್ಕಳ

ಸಮಸ್ಯೆ ಬಗೆಹರಿಯಲಿದೆ
ಕಾರ್ಕಳದಲ್ಲಿ ಮೆಸ್ಕಾಂ ವಿಭಾಗೀಯ ಕಚೇರಿ ತೆರೆದಲ್ಲಿ ವಿದ್ಯುತ್‌ಗೆ ಸಂಬಂಧಪಟ್ಟಂತೆ ಇಲ್ಲಿನ ಸಮಸ್ಯೆಗಳು ಬಗೆಹರಿಯಲಿದೆ. ಇದರಿಂದ ವಿದ್ಯುತ್‌ ಪರಿಕರ ಪಡೆಯುವಲ್ಲಿ ಮತ್ತು ತಕ್ಷಣದ ಸ್ಪಂದನೆ ದೊರೆಯುವಲ್ಲಿ ಅನುಕೂಲವಾಗಲಿದೆ.
-ವಿಠಲ್‌ ಪೈ ಪುಲ್ಕೇರಿ,ಎಲೆಕ್ಟ್ರೀಷಿಯನ್‌

ತ್ವರಿತವಾಗಿ ಪೂರ್ಣಗೊಳ್ಳಲಿ
ಅಜೆಕಾರುವಿನಲ್ಲಿ ಮೆಸ್ಕಾಂ ಸಬ್‌ಸ್ಟೇಷನ್‌ ಸ್ಥಾಪನೆಯಾದಲ್ಲಿ ನಮ್ಮ ಪ್ರಮುಖ ಬೇಡಿಕೆಯೊಂದು ಈಡೇರಲಿದೆ. ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಕಾರ್ಯೋನ್ಮುಖರಾಗಬೇಕು.
-ಜನಕ್‌ ಪೂಜಾರಿ,ಅಜೆಕಾರು

-ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next