ಬೆಳಗಾವಿ: ಚುನಾವಣೆ ಮತ್ತು ಕಣದಲ್ಲಿರುವ ಆಭ್ಯರ್ಥಿಗಳ ಮಾತು ಬಂದಾಗ ಸಾಮಾನ್ಯವಾಗಿ 10 ಅಭ್ಯರ್ಥಿಗಳು ಸ್ಪರ್ಧೆಯಲ್ಲಿರುವುದು ಸಹಜ. ಆದರೆ ಬೆಳಗಾವಿ ಲೋಕಸಭಾ ಕ್ಷೇತ್ರ ಇದೆಲ್ಲವನ್ನೂ ಮೀರಿ ನಿಂತಿತ್ತು ಎಂದರೆ ನಿಮಗೆ
ಅಚ್ಚರಿಯಾಗಬಹುದು. ಈ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಒಟ್ಟು ಅಭ್ಯರ್ಥಿಗಳ ಸಂಖ್ಯೆ ಎಷ್ಟೆಂದು ಹೇಳುವುದನ್ನು ನಿಮ್ಮ ಊಹೆಗೆ ಬಿಟ್ಟರೆ ನೀವು 25 ಆಥವಾ 50 ಅಭ್ಯರ್ಥಿಗಳು ಎನ್ನಬಹುದು. ಆದರೆ ಈ ಲೆಕ್ಕಾಚಾರ, ಉತ್ತರ ಎಲ್ಲವೂ ತಪ್ಪು. ಬೆಳಗಾವಿ
ಲೋಕಸಭಾ ಕ್ಷೇತ್ರ ಒಮ್ಮೆ ಬರೋಬ್ಬರಿ 455 ಅಭ್ಯರ್ಥಿಗಳನ್ನು ಕಣದಲ್ಲಿ ನೋಡಿತ್ತು!
Advertisement
1996ರ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದ ಅಭ್ಯರ್ಥಿಗಳು ಮಾಡಿದ ಈ ನಿರ್ಧಾರ ಬಹುಶಃ ವಿಶ್ವದಾಖಲೆ ಆಗಿರಬಹುದು. ಮುಂದೆಯೂ ಇಂತಹ ಸಾಹಸವನ್ನು ಯಾರೂ ಮಾಡಲಾರರು. ಆದರೆ ಆಗ ಚುನಾವಣಾ ಆಯೋಗಕ್ಕಂತೂ ಇದೊಂದು ದೊಡ್ಡ ತಲೆನೋವಾಗಿ ಪರಿಣಿಮಿಸಿದ್ದು ಸುಳ್ಳಲ್ಲ. 1985ರಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಎಂಇಎಸ್ಗೆ ಬುದ್ಧಿ ಕಲಿಸಲು ಕನ್ನಡ ಸಂಘಟನೆಗಳ ಮುಖಂಡರು ಬೆಳಗಾವಿ ಕ್ಷೇತ್ರದಿಂದ 301 ಕನ್ನಡ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಎಂಇಎಸ್ ಲೋಕಸಭೆ ಚುನಾವಣೆಯಲ್ಲಿ 451 ಅಭ್ಯರ್ಥಿಗಳನ್ನು ನಿಲ್ಲಿಸಿ ಎಲ್ಲರ ಗಮನ ಸೆಳೆದಿತ್ತು.
Related Articles
ಕಳೆದುಕೊಂಡು ತೀವ್ರ ಮುಖಭಂಗ ಅನುಭವಿಸಿದ್ದು ಈಗ ಇತಿಹಾಸ. ಆದರೆ ದಾಖಲೆ ಸೃಷ್ಟಿಸಿದ ಈ ಚುನಾವಣೆ ಎಂಇಎಸ್ಗೆ ಸರಿಯಾದ ಪಾಠ ಕಲಿಸಿತು. ಚುನಾವಣೆ ನಂತರ ಎಂಇಎಸ್ ಬಲ ಮೊದಲಿನಂತೆ ಉಳಿಯಲಿಲ್ಲ. ಈ ಪಾಠದಿಂದ ಮುಂದೆ ಮತ್ತೂಮ್ಮೆ ಇಂತಹ ದುಸ್ಸಾಹಸ ಮಾಡುವ ಕೆಲಸಕ್ಕೆ ಸಮಿತಿ ನಾಯಕರು ಹೋಗಲಿಲ್ಲ.
Advertisement
ಹಾಗಾದರೆ ಗೆದ್ದಿದ್ದು ಯಾರು?455 ಆಭ್ಯರ್ಥಿಗಳು ಕಣದಲ್ಲಿದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಸಹಜವಾಗಿಯೇ ಇದು ಪ್ರತಿಷ್ಠೆಯ ವಿಷಯವಾಗಿತ್ತು. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗೆ ಮಾಡಿದ ಜನತಾದಳ ಮೊದಲ ಬಾರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ವಿಜಯದ ಮಾಲೆ ಧರಿಸಿತು. ಅಭ್ಯರ್ಥಿಗಳ ಸಂಖ್ಯೆಯ ವಿಷಯದಲ್ಲಿ ಸಾರ್ವಕಾಲಿಕ ದಾಖಲೆ
ಮಾಡಿದ ಈ ಚುನಾವಣೆಯಲ್ಲಿ ಜನತಾದಳದ ಶಿವಾನಂದ ಕೌಜಲಗಿ ಬಿಜೆಪಿಯ ಬಾಬಾಗೌಡ ಪಾಟೀಲ ಅವರನ್ನು 70 ಸಾವಿರ ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಲೋಕಸಭೆ ಪ್ರವೇಶ ಮಾಡಿದ್ದರು. ಈ ಚುನಾವಣೆಯಲ್ಲಿ ಮೊದಲ ಬಾರಿ ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಭಾಕರ ಕೋರೆ ಮೂರನೇ ಸ್ಥಾನ ಗಳಿಸಿದ್ದರು. *ಕೇಶವ ಆದಿ