Advertisement

ಕರಾಳ ದಿನಾಚರಣೆಗೂ ಎಂಇಎಸ್‌ ಹೈಟೆಕ್‌ ಪ್ರಚಾರ

09:32 AM Oct 30, 2017 | Team Udayavani |

ಬೆಳಗಾವಿ: ಗಡಿಯಲ್ಲಿ ಪ್ರತಿ ವರ್ಷ ತಂಟೆ ತೆಗೆಯಲು ಹಳ್ಳಿಹಳ್ಳಿಯಲ್ಲಿ ಸಭೆ ನಡೆಸಿ, ಸೈಕಲ್‌ ಜಾಥಾ ಮಾಡುತ್ತ ಕನ್ನಡ ರಾಜ್ಯೋತ್ಸವದಂದು ಆಚರಿಸುವ ಕರಾಳ ದಿನದ ಪ್ರಚಾರ ಮಾಡುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಈಗ ಹೈಟೆಕ್‌ ಪ್ರಚಾರಕ್ಕೆ ಇಳಿದಿದೆ.

Advertisement

ಕನ್ನಡ ರಾಜ್ಯೋತ್ಸವ ದಿನದಂದೇ ಕರಾಳ ದಿನ ಆಚರಿಸುವ ಎಂಇಎಸ್‌, ಪ್ರತಿ ವರ್ಷ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ಕಪ್ಪು ಬಣ್ಣದ ಶರ್ಟ್‌- ಪ್ಯಾಂಟ್‌ ಧರಿಸಿ ಸೈಕಲ್‌ ತುಳಿಯುತ್ತ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗುವುದು ವಾಡಿಕೆ. ಈ ವರ್ಷ ಎಂಇಎಸ್‌ ಮುಖಂಡರು ಸಾಮಾಜಿಕ ಜಾಲತಾಣಗಳನ್ನು ಪ್ರಚಾರಕ್ಕೆ ಆಶ್ರಯಿಸಿದ್ದಾರೆ. ಫೇಸ್‌ಬುಕ್‌, ಟ್ವಿಟರ್‌, ವಾಟ್ಸಾಪ್‌ಗ್ಳಲ್ಲಿ ನಾಡದ್ರೋಹಿ ಬರಹಗಳುಳ್ಳ ಚಿತ್ರಗಳನ್ನು ಹಾಕುತ್ತ, ಕರಾಳ ದಿನಾಚರಣೆಯಲ್ಲಿ ಭಾಗವಹಿಸಲು ಪ್ರಚೋದಿಸುತ್ತಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಒತ್ತು: ಮುಂಬರುವ ವಿಧಾನಸಭೆ ಚುನಾವಣೆ ನಿಟ್ಟಿನಲ್ಲಿ ಕರಾಳ ದಿನದ ಪ್ರಚಾರಕ್ಕೆ ಎಂಇಎಸ್‌ ನಾಯಕರು ಒತ್ತು ನೀಡಿದ್ದಾರೆ. ಈ ಸಲದ ಕರಾಳ ದಿನ ಚುನಾವಣೆಯ ಪ್ರಚಾರ ಎಂದೇ ಬಿಂಬಿತಗೊಂಡಿದೆ. ಆದರೆ, ಭಿನ್ನಮತ ಭುಗಿಲೆದ್ದಿರುವ ಎಂಇಎಸ್‌ನಲ್ಲಿ ಆಯಾ ನಾಯಕರು ತಮ್ಮ ಬೆಂಬಲಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ನಾಲ್ಕೈದು ಜನ ಟಿಕೆಟ್‌ ಆಕಾಂಕ್ಷಿಗಳಾಗಿದ್ದು, ಪೈಪೋಟಿ ಹೆಚ್ಚಿದೆ. ಬೆಳಗಾವಿ, ಬೀದರ, ಕಾರವಾರ, ನಿಪ್ಪಾಣಿ, ಭಾಲ್ಕಿ
ಸೇರಿದಂತೆ ಇತರೆ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಬೇಡಿಕೆ ಎಂಇಎಸ್‌ ಮುಖಂಡರದ್ದು. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಸಂಭಾಜಿ ಪಾಟೀಲ, ಖಾನಾಪುರ ಶಾಸಕ ಅರವಿಂದ ಪಾಟೀಲ ಸೇರಿದಂತೆ ಎಂಇಎಸ್‌ನ ಎಲ್ಲ ಜನಪ್ರತಿನಿಧಿಗಳು, ಎಂಇಎಸ್‌ನ ಪಾಲಿಕೆ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next