Advertisement

Meralda Jewels: ಮಂಗಳೂರಿನಲ್ಲಿ ನೂತನ ಮಳಿಗೆ ಶುಭಾರಂಭ

11:09 PM Oct 29, 2023 | Team Udayavani |

ಮಂಗಳೂರು: ಕೇರಳದ ಪ್ರಸಿದ್ಧ ಆಭರಣ ಮಳಿಗೆಯಾಗಿರುವ “ಮೆರಾಲ್ಡಾ ಜುವೆಲ್ಸ್‌’ನ ಕರ್ನಾಟಕದ ಮೊದಲ ಶೋರೂಂ ರವಿವಾರ ಮಂಗಳೂರಿನ ಬಲ್ಮಠದಲ್ಲಿ ಶುಭಾರಂಭಗೊಂಡಿತು.

Advertisement

ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್‌ ಮಳಿಗೆಯನ್ನು ಉದ್ಘಾಟಿಸಿದರು. ಮಳಿಗೆಯ ಸಂಗ್ರಹದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು , ಶುಭ ಹಾರೈಸಿದರು. ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಮುಖ್ಯ ಅತಿಥಿಯಾಗಿದ್ದರು.

ಮನೆಮಾತಾದ ಸಂಸ್ಥೆ
ಸಮಾರಂಭದ ಮುಖ್ಯ ಆಕರ್ಷಣೆ ನಟಿ ಅಥಿಯಾ ಶೆಟ್ಟಿ ಮಾತನಾಡಿ, ಆಭರಣ ಪ್ರಿಯ ಮಹಿಳೆಯರಿಗೆ ಮೆರಾಲ್ಡಾದಲ್ಲಿ ವಿಪುಲವಾದ ಸಂಗ್ರಹವಿದೆ. ಈಗಾಗಲೇ ಕೇರಳದಲ್ಲಿ ಸಂಸ್ಥೆ ಮನೆ ಮಾತಾಗಿದ್ದು, ಮಂಗಳೂರಿನಲ್ಲೂ ಮಹಿಳೆಯರನ್ನು ಆಕರ್ಷಿಸಲಿದೆ. ಕರ್ನಾಟಕದಲ್ಲಿಯೂ ಮೆರಾಲ್ಡಾ ಜುವೆಲ್ಸ್‌ ಯಶಸ್ವಿಯಾಗಲಿ ಎಂದರು. ಇದೇ ವೇಳೆ ಅವರು ಮೊದಲ ಗ್ರಾಹಕರಿಗೆ ಆಭರಣ ಹಸ್ತಾಂತರಿಸಿದರು.

ವಿಶಾಲವಾದ ಮಳಿಗೆ
ಬಲ್ಮಠದ ಮೆರಾಲ್ಡಾ ಮಳಿಗೆ ವಿಶಾಲವಾಗಿದ್ದು, ನಗರದ ಹೃದಯ ಭಾಗದಲ್ಲಿದೆ. ಹವಾನಿಯಂತ್ರಿತ ವ್ಯವಸ್ಥೆ ಗ್ರಾಹಕರಿಗೆ ಆರಾಮದಾಯಕ ಖರೀದಿಗೆ ಅವಕಾಶ ನೀಡಲಿದೆ. ವಾಹನಗಳ ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳಾವಕಾಶವೂ ಇದೆ. ಆಭರಣ ಕ್ಷೇತ್ರದಲ್ಲಿ ನುರಿತ ಸಿಬಂದಿ ಸೇವೆ ಒದಗಿಸಲಿದ್ದಾರೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.
ಮೆರಾಲ್ಡಾ ಗ್ರೂಪ್‌ನ ಚೇರ್ಮನ್‌ ಅಬ್ದುಲ್‌ ಜಲೀಲ್‌, ಕಾರ್ಯಕಾರಿ ನಿರ್ದೇಶಕರಾದ ಜೆಸೀಲ್‌ ಮೊಹಮ್ಮದ್‌ ಹಾಗೂ ಶಾನಿಲ್‌ ಮೊಹಮ್ಮದ್‌ ಭಾಗವಹಿಸಿದ್ದರು. ಶಾಹಿಲ್‌ ಝಹೀರ್‌ ಕಾರ್ಯಕ್ರಮ ನಿರೂಪಿಸಿದರು.

50,000 ರೂ. ಖರೀದಿಗೆ ಚಿನ್ನದ ನಾಣ್ಯ
ಕೇರಳದ ಕೊಚ್ಚಿ, ಕೋಯಿಕ್ಕೋಡ್‌, ಕಣ್ಣೂರಿನಲ್ಲಿ ಈಗಾಗಲೇ ಮಳಿಗೆಗಳನ್ನು ಹೊಂದಿರುವ “ಮೆರಾಲ್ಡಾ ಜುವೆಲ್ಸ್‌’ ಸಂಸ್ಥೆ ಮಂಗಳೂರಿನ ಮೂಲಕ ಕರ್ನಾಟಕಕ್ಕೆ ಪಾದಾರ್ಪಣೆ ಮಾಡಿದೆ. ಚಿನ್ನ, ವಜ್ರ, ಜೆಮ್‌ಸ್ಟೋನ್‌, ಪೊಲ್ಕಿ, ಪ್ಲಾಟಿನಂ ಆಭರಣಗಳ ವಿಪುಲ ಸಂಗ್ರಹವಿದ್ದು, ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಒಪ್ಪುವ ಆಭರಣಗಳು, ನೆಕ್ಲೆಸ್‌, ಪೆಂಡೆಂಟ್‌, ಉಂಗುರ, ಕಿವಿಯೋಲೆ, ಬಳೆಗಳು, ನಿತ್ಯ ಬಳಕೆಯ ಆಭರಣಗಳು ಲಭ್ಯವಿವೆ. ಸಾಂಪ್ರದಾಯಿಕ, ಆಧುನಿಕ ಮತ್ತು ಟ್ರೆಂಡಿ ಆಭರಣಗಳ ವ್ಯಾಪಕ ಸಂಗ್ರಹ ಹೊಂದಿದೆ. ಮಂಗಳೂರಿನ ಚಿನ್ನಾಭರಣ ಪ್ರಿಯರನ್ನು ತನ್ನ ಅತ್ಯಾಕರ್ಷಕ ವಿನ್ಯಾಸ, ಶ್ರೀಮಂತ ಕಲಾತ್ಮಕತೆಯ ಆಭರಣಗಳ ಮೂಲಕ ಆಕರ್ಷಿಸಲು ಮೆರಾಲ್ಡಾ ಜುವೆಲ್ಸ್‌ ಸಿದ್ಧವಾಗಿದೆ. ಮಳಿಗೆಯ ಉದ್ಘಾಟನ ಕೊಡುಗೆಯಾಗಿ ಮುಂದಿನ ಎರಡು ವಾರ 50 ಸಾವಿರ ರೂ. ಖರೀದಿಗೆ ಚಿನ್ನದ ನಾಣ್ಯ ಉಡುಗೊರೆಯಾಗಿ ದೊರೆಯಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next