Advertisement
ಹೀಗೆ ತನ್ನ ತಾಯಿಯನ್ನೇ ಅಮಾನುಷವಾಗಿ ಹತ್ಯೆ ಮಾಡಿರುವ ಆರೋಪಿಯನ್ನು ರಫೀಕ್ ಮೋಮಿನ್ (30) ಎಂದು ಗುರುತಿಸಲಾಗಿದ್ದು, ಹತ್ಯೆಯಾದ ತಾಯಿಯನ್ನು 49 ವರ್ಷದ ಬಾನು ಮೊಮಿನ್ ಎಂದು ಗುರುತಿಸಲಾಗಿದೆ.
ರಫೀಕ್ ತನ್ನ ತಾಯಿಯನ್ನು ಹತ್ಯೆ ಮಾಡುವುದಕ್ಕೂ ಮೊದಲು ತನ್ನದೇ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದ. ಪತಿಯ ಕಿರುಕುಳವನ್ನು ತಾಳಲಾದೆ ಈತನ ಪತ್ನಿ ಗುರುವಾರ ಬೆಳಿಗ್ಗೆಯಷ್ಟೇ ತವರಿಗೆ ಮರಳಿದ್ದಳು. ಇಂದು ಮದ್ಯಾಹ್ನ ರಫೀಕ್ ತನ್ನ ತಂದೆಯ ಮೇಲೆ ಹಲ್ಲೆ ಮಾಡಿದ್ದ, ಬಳಿಕ ಸಾಯಂಕಾಲ ಅಜ್ಜಿ ಮೇಲೂ ಹಲ್ಲೆಗೆ ಮುಂದಾಗಿದ್ದ. ಈ ಸಂದರ್ಭದಲ್ಲಿ ಅಜ್ಜಿಯ ಮೇಲೆ ಈತ ಹಲ್ಲೆ ಮಾಡುವುದನ್ನು ತಡೆಯಲು ಮುಂದಾದ ಸಂದರ್ಭದಲ್ಲಿ ಆರೋಪಿ ತಾಯಿಯ ಮೇಲೆಯೇ ಹಲ್ಲೆ ನಡೆಸಿ, ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
Related Articles
Advertisement