Advertisement

ರಕ್ತದಾನದಿಂದ ಮಾನಸಿಕ ಸದೃಢತೆ

05:34 PM Oct 07, 2017 | |

ಶಹಾಪುರ: ನಿಗದಿತ ಸಮಯನುಸಾರ ರಕ್ತದಾನ ಮಾಡುವುದರಿಂದ ಮನುಷ್ಯ ಆರೋಗ್ಯಯುತ ಬದುಕಲು ಸಾಗಿಸಬಹುದು ಎಂದು ಕೃಷಿ ಮಹಾ ವಿದ್ಯಾಲಯದ ಡೀನ್‌ ಡಾ| ಸುರೇಶ ಪಾಟೀಲ್‌ ಹೇಳಿದರು.

Advertisement

ಸಮೀಪದ ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದಲ್ಲಿ ರೆಡ್‌ಕ್ರಾಸ್‌ ಸಂಸ್ಥೆ ಯಾದಗಿರ, ಜಿಲ್ಲಾಡಳಿತ ಮತ್ತು ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್‌ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಯಾದಗಿರ ಹಾಗೂ ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನೇಷನ್‌ ಸೊಸೈಟಿ ಇವಗಳ ಆಶ್ರಯದಲ್ಲಿ ನಡೆದ ವಿಶ್ವ ರಕ್ತದಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ರಕ್ತದಾನ ಮಾಡುವುದರಿಂದ ಮನುಷ್ಯ ಶಾರೀರಿಕ ಮತ್ತು ಮಾನಸಿಕವಾಗಿ ಸದೃಢವಾಗುತ್ತಾನೆ. ಅಲ್ಲದೆ ನಾವುಗಳು
ಮಾಡಿದ ರಕ್ತದಾನದಿಂದ ಬೇರೆಯವರ ಜೀವ ಉಳಿಯಲು ಸಹಕಾರಿ ಆಗಲಿದೆ ಎಂದರು. 

ಆರತಿ ಧನಶ್ರೀ ಮಾತನಾಡಿ, ರಕ್ತದಾನ ಮಾಡುವಾಗ ದಾನಿಯು ಎಚ್ಚರಿಕೆ ವಹಿಸುವ ಕ್ರಮಗಳು, ರಕ್ತದಾನ ಮಾಡುವುದರಿಂದ ದಾನಿಗಳಿಗೆ ಆಗುವ ಪ್ರಯೋಜನಗಳ ಕುರಿತು ತಿಳಿಸಿದರು. ಜಿಲ್ಲಾ ಏಡ್ಸ್‌ ನಿಯಂತ್ರಣಾ 
ಧಿಕಾರಿ ಡಾ| ಗುರುರಾಜ ಹೀರೆಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವ ರಕ್ತದಾನದ ಆಚರಣೆ ಪ್ರಾಮುಖ್ಯತೆ ಕುರಿತು ಹೇಳಿದರು. ಡಾ| ಸೌಮ್ಯ, ಡಾ| ಸತೀಶ, ಡಾ| ವಿಜಯಕುಮಾರ, ದೇವರಾಜ ಚಟ್ಟಿ ವಕೀಲರು, ಭೀಮಾಶಂಕರ, ಗುಂಡುರಾವ, ಅಂಬರೀಶ ಭೂತಿ ಇದ್ದರು. ಇದೇ ಸಂದರ್ಭದಲ್ಲಿ ವಿಶ್ವ ರಕ್ತದಾನ ದಿನಾಚರಣೆ ಪ್ರಯುಕ್ತ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ರಕ್ತದಾನ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next