Advertisement
– ಮಾನಸಿಕ ಕಾಯಿಲೆ ಮತ್ತು ಮಾನಸಿಕ ಆರೋಗ್ಯಕ್ಕಿರುವ ವ್ಯತ್ಯಾಸವೇನು?– ತಾಯಂದಿರಲ್ಲಿ ಮಾನಸಿಕ ಆರೋಗ್ಯದ ಪ್ರಾಮುಖ್ಯ ಏನು ?
– ಮಕ್ಕಳು ಮತ್ತು ಕುಟುಂಬದ ಮೇಲೆ ತಾಯಂದಿರ ಮಾನಸಿಕ ಆರೋಗ್ಯದ ಪ್ರಭಾವವೇನು?
– ತಾಯಂದಿರ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವ ಅಂಶಗಳಾವುವು ?
– ತಾಯಂದಿರಲ್ಲಿ ಮಾನಸಿಕ ಆರೋಗ್ಯದ ಸ್ಥಿತಿ ಗುರುತಿಸುವುದು ಹೇಗೆ?
– ತಾಯಂದಿರ ಮಾನಸಿಕ ಆರೋಗ್ಯ ಸುಧಾರಿಸುವ ಮಾರ್ಗೋಪಾಯಗಳು ಯಾವುವು? ಈ ಬಗ್ಗೆ ಗಮನಹರಿಸೋಣ.
ಮಾನಸಿಕ ಕಾಯಿಲೆಯು ತಾಯಂದಿರಲ್ಲಿ ದಿನನಿತ್ಯದ ಕೆಲಸ ನಿರ್ವಹಣೆಯಲ್ಲಿ ಒತ್ತಡ (ಕಿರಿಕಿರಿ) ಉಂಟುಮಾಡುತ್ತದೆ. ನಕಾರಾತ್ಮಕ ಭಾವನೆಗಳು, ಆಲೋಚನೆಗಳು ಹಾಗು ನಡವಳಿಕೆಗಳು, ಅನಗತ್ಯ ಒತ್ತಡಗಳು, ಕುಗ್ಗಿದ ಕಾರ್ಯಕ್ಷಮತೆ ಮತ್ತು ದಿನನಿತ್ಯದ ಕೆಲಸಗಳನ್ನು ನಿರ್ವಹಿಸುವಲ್ಲಿನ ವಿಫಲತೆಯನ್ನು ಸೂಚಿಸುತ್ತದೆ. ಅಷ್ಟೇ ಅಲ್ಲದೆ ಮಕ್ಕಳು, ಕುಟುಂಬ ಮತ್ತು ಸಮಾಜದ ಜತೆಗೆ ಪರಿಣಾಮಕಾರಿ ಸಂಬಂಧವನ್ನು ಬೆಳೆಸುವಲ್ಲಿ ತಡೆ ಒಡ್ಡುತ್ತದೆ. ಮಾನಸಿಕ ಕಾಯಿಲೆಯ ರೋಗಲಕ್ಷಣಗಳನ್ನು ಪ್ರಾರಂಭದ ಹಂತದಲ್ಲಿ ಗುರುತಿಸಿ, ಮಾನಸಿಕ ತಜ್ಞರ ಸಲಹೆ ಪಡೆಯುವುದು ಆವಶ್ಯಕವಾಗಿದೆ.
Related Articles
Advertisement
ತಾಯಿಯ ಮಾನಸಿಕ ಅಸ್ವಾಸ್ಥ್ಯದ ಪ್ರಭಾವವೇನು?ತಾಯಿಯ ಮಾನಸಿಕ ಅಸ್ವಸ್ಥತೆಯು ಮಗುವಿನ ಮೇಲೆ ನೇರ ಪ್ರಭಾವವನ್ನು ಉಂಟುಮಾಡುತ್ತದೆ. ತಾಯಿ ಮಗುವಿನ ಸಂಬಂಧ ಕರುಳ ಬಳ್ಳಿಯ ಸಂಬಂಧವಾಗಿದೆ. ಗರ್ಭಾವಾಸ್ಥೆಯಲ್ಲಿಯೇ ತಾಯಿ ಮತ್ತು ಭ್ರೂಣದ ಸಂಬಂಧ ಚಿಗುರೊಡೆಯುತ್ತದೆ. ಬೆಳೆಯುತ್ತಿರುವ ಭ್ರೂಣವು ತಾಯಿಯ ಹೃದಯ ಬಡಿತ ಹಾಗೂ ಧ್ವನಿಯ ಬಗ್ಗೆ ಅರಿವನ್ನು ಪಡೆಯುತ್ತದೆ. ಸ್ಪರ್ಶ ಮತ್ತು ಚಲನೆಗೆ ಪ್ರತಿಕ್ರಿಯಿಸುತ್ತದೆ. ತಾಯಂದಿರು ಇಂಥ ಸಮಯದಲ್ಲಿ ತಮ್ಮ ದೇಹದಲ್ಲಾಗುತ್ತಿರುವ ವೈಪರೀತ್ಯಗಳಿಗೆ ನೀಡುವ ಸ್ಪಂದನೆ ಅಥವಾ ಪ್ರಸವದ ಬಗೆಗಿನ ಅವರ ಭಯ, ಆತಂಕ ಭ್ರೂಣದ ಮೇಲೆ ಪ್ರಭಾವ ಬೀರಬಹುದು. ಅಷ್ಟೇ ಅಲ್ಲದೆ ಹೆರಿಗೆಯ ಅನಂತರದ ಬಾಣಂತಿಯ ಚೇತರಿಕೆ, ಹಾಲುಣಿಸುವ ಸಂದರ್ಭದ ಬದಲಾವಣೆಗಳು, ನಿದ್ರಾಭಂಗದಂತಹ ಸಂದರ್ಭದಲ್ಲಿ ತಾಯಿಯ ಮಾನಸಿಕ ಅಸ್ವಸ್ಥತೆಯು ಮಗುವಿನ ಮೇಲೆ ಪ್ರಭಾವ ಬೀರುತ್ತದೆ.
1. ಸ್ವಯಂ ಕಾಳಜಿ ಮತ್ತು ಸಮತೋಲನ
ತಾಯಂದಿರು ತಮ್ಮ ವಯಕ್ತಿಕ ಕಾಳಜಿ ಹಾಗು ವೃತ್ತಿಜೀವನದ ಸಮತೋಲನವನ್ನು ಕಾಪಾಡಿಕೊಳ್ಳುವುದು. ವಿಶ್ರಾಂತಿ ಮತ್ತು ಸಮಚಿತ್ತತೆಯನ್ನು ಹೊಂದುವಲ್ಲಿ ತೊಡಗಿಕೊಳ್ಳುವುದು.
2. ಸ್ಥಿತಿಸ್ಥಾಪಕತ್ವ ಮತ್ತು ನಿಭಾಯಿಸುವ ಕೌಶಲಗಳು
ತಾಯಂದಿರು ತಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮಚಿತ್ತದಿಂದ ಎದುರಿಸುವಲ್ಲಿ ತೊಡಗಿಕೊಳ್ಳುವುದು.
3. ಸಕಾರಾತ್ಮಕ ಸಂಬಂಧವನ್ನು ಹೊಂದುವುದು
ತಾಯಂದಿರು ತಮ್ಮ ಜತೆಗಿರುವವರೊಂದಿಗೆ ಪ್ರಾಮಾಣಿಕ, ನಂಬಿಕಾರ್ಹ, ಗೌರವಯುತವಾಗಿದ್ದು ಮುಕ್ತ ಸಂವಹನದೊಂದಿಗೆ ಸಾಮಾಜಿಕ ಸಂಬಂಧವನ್ನು ಹೊಂದುವುದು ಮತ್ತು ತನ್ನ ವಯಕ್ತಿಕ ಹಾಗು ವೃತ್ತಿಜೀವನದ ಗುರಿ ಹಾಗೂ ಉದ್ದೇಶಗಳನ್ನು ಪೂರೈಸುವಲ್ಲಿ ಸಹಾಯಕವಾಗುವಂತಹ ಜನರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುವುದು.
ದೈನಂದಿನ ಒತ್ತಡಗಳು ಹಾಗೂ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು, ಜೀವನದ ಗುಣಮಟ್ಟವನ್ನು ಹೆಚ್ಚಿಸಲು, ಸಂಬಂಧಗಳನ್ನು ಪೂರ್ಣವಾಗಿ ಅನುಭವಿಸಲು, ಈ ಕ್ಷಣವನ್ನು ಜೀವಿಸಲು ಮತ್ತು ಜತೆಗಿರುವವರೊಂದಿಗೆ ಆತ್ಮೀಯವಾಗಿ ಜೀವನವನ್ನು ಅನುಭವಿಸಲು ಸಹಾಯಕವಾಗಿದೆ. ಮಗುವಿನ ಭವಿಷ್ಯ ತಾಯಿಯ ಕೈಯಲ್ಲಿದೆ. ಮಗುವನ್ನು ಉತ್ತಮ ನಾಗರಿಕನನ್ನಾಗಿ ಮಾಡುವ ಜವಾಬ್ದಾರಿ ಅವಳ ಮೇಲಿದೆ. ಹೀಗಾಗಿ ತಾಯಿಯು ತನ್ನ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ತಾಯಂದಿರ ಮಾನಸಿಕ ಆರೋಗ್ಯವು ಇಡೀ ಸಮಾಜದ ಹಿತ ಕಾಪಾಡುವಲ್ಲಿ ಮತ್ತು ಆರೋಗ್ಯವಂತ ಪೀಳಿಗೆಯನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ. ತನ್ನ ಜೀವನದ ಗುರಿಯನ್ನು ತಲುಪಲು, ಜತೆಗೆ ಸಮಾಜಕ್ಕೆ ಕೊಡುಗೆ ನೀಡುವಲ್ಲಿ ಪರಿಣಾಮ ಬೀರುತ್ತದೆ. ಸಂಗೀತಾ ಹೆಗ್ಡೆ, ರಿಸರ್ಚ್ ಅಸಿಸ್ಟೆಂಟ್
ಶಾಲಿನಿ ಕ್ವಾಡ್ರಸ್, ಅಸಿಸ್ಟೆಂಟ್ ಪ್ರೊಫೆಸರ್-ಸೀನಿಯರ್ ಸ್ಕೇಲ್
ಆಕ್ಯುಪೇಶನಲ್ ಥೆರಪಿ ವಿಭಾಗ, ಎಂಸಿಎಚ್ಪಿ, ಮಾಹೆ, ಮಣಿಪಾಲ