ದಾವಣಗೆರೆ: ಮಾನಸಿಕ ರೋಗ ವಾಸಿಯಾಗದ ಕಾಯಿಲೆ ಅಲ್ಲ. ಬೇರೆ-ಬೇರೆ ರೀತಿಯ ಕಾಯಿಲೆಗಳಂತೆ ಮಾನಸಿಕ ಕಾಯಿಲೆ ಬರುತ್ತದೆ.ಮನೋತಜ್ಞರ ಸಲಹೆ ಸೂಚನೆ ಪಾಲಿಸುವ ಮೂಲಕ ಪ್ರಾಥಮಿಕ ಹಂತದಲ್ಲಿಯೇ ಸಮಸ್ಯೆಯನ್ನು ಗುಣಪಡಿಸಿಕೊಳ್ಳಬೇಕು ಎಂದು ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯಡಾ| ಎಸ್.ಬಿ. ಮುರುಗೇಶ್ ತಿಳಿಸಿದರು.
ಸೋಮವಾರಜಿಲ್ಲಾಡಳಿತ,ಜಿಲ್ಲಾಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ,ಜಿಲ್ಲಾಮಾನಸಿಕ ಆರೋಗ್ಯ ಇಲಾಖೆ, ಜಿಲ್ಲಾ ಕಾನೂನುಸೇವಾ ಪ್ರಾಧಿಕಾರ, ಜೆ.ಜೆ.ಎಂ. ವೈದ್ಯಕೀಯಮಹಾವಿದ್ಯಾಲಯದ ಮನೋವೈದ್ಯಕೀಯ ವಿಭಾಗಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಮಾನಸಿಕಆರೋಗ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿಮಾತನಾಡಿದ ಅವರು, ಮಾನಸಿಕ ರೋಗಿಗಳಿಗೆಚಿಕಿತ್ಸೆಗಿಂತಲೂ ಆಪ್ತತೆ, ಮುಕ್ತ ಸಮಾಲೋಚನೆಹೆಚ್ಚು ಪರಿಣಾಮಕಾರಿ ಎಂದು ತಿಳಿಸಿದರು.ಮಾನಸಿಕ ರೋಗಿಗಳು ಸಾಮಾನ್ಯವಾಗಿಸಮಸ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ.
ಕುಟುಂಬದವರು ಪ್ರಾಥಮಿಕಹಂತದಲ್ಲಿಯೇ ಮಾನಸಿಕ ಕಾಯಿಲೆಯಲಕ್ಷಣಗಳನ್ನು ಗುರುತಿಸಿ ಮನೋವೈದ್ಯರನ್ನುಸಂಪರ್ಕಿಸಿ ಅವರೊಂದಿಗೆ ಮುಕ್ತವಾಗಿಸಮಸ್ಯೆಯನ್ನು ಹಂಚಿಕೊಂಡು ಅವರು ನೀಡುವಸಲಹೆಗಳನ್ನು ಪಾಲಿಸಿದರೆ ಸಮಸ್ಯೆಯಿಂದಹೊರಬರಬಹುದು ಎಂದು ತಿಳಿಸಿದರು.ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿಯೊಂದು ಮನೆಮನೆಗೂ ಹೋಗಿಯಾರಾದರೂ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅವರಿಗೆಸೂಕ್ತ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲಹೆ, ಸೂಚನೆನೀಡಬೇಕು ಎಂದು ಮನವಿ ಮಾಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದರಾಜೇಶ್ವರಿ ಎನ್.ಹೆಗಡೆ ಮಾತನಾಡಿ, ದೈನಂದಿನಜೀವನದ ನಡುವಳಿಕೆಗಳಲ್ಲಿ ಬದಲಾವಣೆ,ಹಾವ-ಭಾವ, ಮದ್ಯವ್ಯಸನ, ಮಾನಸಿಕಖನ್ನತೆಯಂತಹ ಹಲವಾರು ಲಕ್ಷಣಗಳನ್ನು ಮಾನಸಿಕರೋಗಕ್ಕೆ ಸಂಬಂಧಿಸಿವೆ. ಮಾನಸಿಕ ರೋಗದಿಂದಬಳಲುವಂತಹರನ್ನಸಮಾಜದಿಂದದೂರವಿಡುತ್ತೇವೆ.ಅದಕ್ಕೆ ಪರಿಹಾರವಾಗಿ 1987 ರಲ್ಲಿ ಮೆಂಟಲ್ ಹೆಲ್ತ್‌ಆ್ಯಕ್ಟ್‌ನು° ಜಾರಿಗೆ ತಂದಿತು ಎಂದು ತಿಳಿಸಿದರು.ಕೋವಿಡ್ ಅಲೆ ಬಂದ ನಂತರ ಸಾಕಷ್ಟುಮಕ್ಕಳಲ್ಲಿ ಮಾನಸಿಕ ಖನ್ನತೆಯ ಲಕ್ಷಣಗಳು ಕಂಡುಬಂದಿವೆ. ಹಾಗಾಗಿ ಸಮಯಕ್ಕೆ ಸರಿಯಾಗಿ ರೋಗಕ್ಕೆಸೂಕ ¤ಚಿಕಿತೆಯ Õ ನ್ನು ಪಡೆಯದಿದ್ದರೆ ಭವಿಷ್ಯದಲ್ಲಿಸಾಕಷ್ಟು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆಎಂದು ಹೇಳಿದರು.
ಜಿಲ್ಲಾ ಹೆಚ್ಚುವರಿ ಅಧೀಕ್ಷಕ ಎಂ. ರಾಜೀವ್‌ಮಾತನಾಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್,ಕೆ.ಜೆ.ಕಲ್ಪನಾ, ಡಾ| ನಾಗರಾಜ, ಡಾ| ಪಿ.ಡಿ.ಮುರುಳೀಧರ, ಡಾ| ನಟರಾಜ್, ಡಾ| ಜಿ.ಡಿ.ರಾಘವನ್, ಡಾ| ಎಸ್. ಮೀನಾಕ್ಷಿ ಇತರರುಇದ್ದರು.