Advertisement
ಪೋರ್ಚುಗೀಸ್-ಸ್ಪಾನಿಶ್‌ನ ಪಾಬ್ಲೊ ಕಾರೆನೊ ಬುಸ್ಟ ಮತು ಜೊವೊ ಸೌಸ ಅವರನ್ನು 6-4, 7-5 ಸೆಟ್‌ಗಳಿಂದ ಸೋಲಿಸಿ ಮುನ್ನಡೆದರು. ಈ ಪಂದ್ಯ ಒಂದು ತಾಸು ಮತ್ತು 28 ನಿಮಿಷಗಳವರೆಗೆ ಸಾಗಿತ್ತು.
Related Articles
ಬಲ ಕಾಲಿನ ಸ್ನಾಯು ಸೆಳೆತದಿಂದಾಗಿ ಭಾರತದ ಸಾನಿಯಾ ಮಿರ್ಜಾ ಅವರು ಮಿಕ್ಸೆಡ್ ಡಬಲ್ಸ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅವರು ಮಿಕ್ಸೆಡ್‌ನಲ್ಲಿ ರೋಹನ್ ಬೋಪಣ್ಣ ಜತೆ ಆಡಬೇಕಿತ್ತು.
Advertisement
ಆದರೆ 33ರ ಹರೆಯದ ಸಾನಿಯಾ ವನಿತೆಯರ ಡಬಲ್ಸ್‌ನಲ್ಲಿ ಆಡಲಿದ್ದಾರೆ. ಉಕ್ರೈನಿನ ನಾಡಿಯಾ ಕಿಚೆನೋಕ್ ಅವರ ಜತೆ ಆಡಲಿರುವ ಸಾನಿಯಾ ಗುರುವಾರ ನಡೆಯುವ ಮೊದಲ ಸುತ್ತಿನ ಪಂದ್ಯದಲ್ಲಿ ಚೀನದ ಕ್ಸಿನ್‌ಯುನ್ ಹಾನ್ ಮತ್ತು ಲಿನ್ ಝು ಅವರನ್ನು ಎದುರಿಸಲಿದ್ದಾರೆ.
ಮಿಕ್ಸೆಡ್‌ನಲ್ಲಿ ಸಾನಿಯಾ ಆರಂಭದಲ್ಲಿ ರಾಜೀವ್ ರಾಮ್ ಜತೆ ಆಡಬೇಕಿತ್ತು. ಆದರೆ ಜ್ವರದಿಂದ ಬಳಲುತ್ತಿರುವ ರಾಮ್ ಮಿಕ್ಸೆಡ್‌ನಿಂದ ಹಿಂದೆ ಸರಿದ ಕಾರಣ ಬೋಪಣ್ಣ ಜತೆ ಆಡಲು ನಿರ್ಧರಿಸಿದ್ದರು. ಇದೀಗ ಬೋಪಣ್ಣ ಮಿಕ್ಸೆಡ್‌ನಲ್ಲಿ ಕಿಚೆನಾಕ್ ಜತೆ ಆಡಲಿದ್ದಾರೆ.