ಬೆಂಗಳೂರು: ಮಹಿಳಾ ಪ್ರಯಾಣಿಕರಿಗಾಗಿಯೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸುತ್ತಿದ್ದ 268 ಮಂದಿ ಪುರುಷ ಪ್ರಯಾಣಿಕರಿಗೆ ಬಿಎಂಟಿಸಿಯ ತನಿಖಾ ತಂಡ 26,800 ರೂ.ಗಳನ್ನು ದಂಡ ರೂಪದಲ್ಲಿ ವಸೂಲಿ ಮಾಡಿದೆ.
ಅಲ್ಲದೆ ಈ ಸಂಬಂಧ ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94ರ ಪ್ರಕಾರ ಪ್ರಕರಣ ದಾಖಲಿಸಿದೆ.
ನಗರಾದ್ಯಂತ ಸಂಚರಿಸುವ ಬಿಎಂಟಿಸಿ ವಾಹನಗಳಲ್ಲಿ ತನಿಖಾ ತಂಡ ತಪಾಸಣೆ ನಡೆಸಿದ್ದು ಎಪ್ರಿಲ್‌ನಲ್ಲಿ ಒಟ್ಟು 6,56,740 ರೂ.ಗಳನ್ನು ದಂಡ ರೂಪದಲ್ಲಿ ವಸೂಲಿ ಮಾಡಿದೆ. ಜತೆಗೆ ಬಿಎಂಟಿಸಿಯ ನಿರ್ವಾಹಕರ ವಿರುದ್ಧ 1340 ಪ್ರಕಣಗಳನ್ನು ದಾಖಲಿಸಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಟ್ಟು 14,670 ಟ್ರಿಪ್‌ಗಳನ್ನು ತಪಾಸಣೆ ನಡೆಸಲಾಗಿದ್ದು ಆ ವೇಳೆ 3,382 ಮಂದಿ ಟಿಕೆಟ್ ಪಡೆಯದೆ ಪ್ರಯಾಣಿಸುತ್ತಿದದ್ದು ಬೆಳಕಿಗೆ ಬಂದಿದೆ. ಒಟ್ಟಾರೆ ಏಪ್ರಿಲ್‌ನಲ್ಲಿ 3,650 ಪ್ರಯಾಣಿಕರಿಂದ ಒಟ್ಟು 6,83,540 ರೂ. ದಂಡರೂಪದಲ್ಲಿ ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.