Advertisement
ಸಂದರ್ಶನವೊಂದರಲ್ಲಿ ಮೀಟೂ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯರ ಸುರಕ್ಷತೆ ವಿಚಾರವಾಗಿ ಮಾತನಾಡಿದ ಅವರು, ನನಗೆ ಇಷ್ಟು ವರ್ಷಗಳಲ್ಲಿ ಈರೀತಿ ನಡೆದಿದ್ದು ಗೊತ್ತಿಲ್ಲ, ಬಹುಶಃ ನಾನು ಹುಡುಗಿಯಾಗಿದ್ದರೆ ಗೊತ್ತಾಗುತ್ತಿತ್ತೇನೋ. ಆದರೆ, ಗಂಡಸರಿಗೂ ಶೋಷಣೆ ಆಗಿವೆ. ಎಲ್ಲರಿಗೂ ಸಣ್ಣ ಪುಟ್ಟ ಆಗಿರುತ್ತದೆ. ನಾವು ಎಲ್ಲೋ ಒಂದು ಕಡೆ ಸ್ಕ್ರಿಪ್ಟ್ ತೆಗೆದುಕೊಂಡು ಹೋಗಿರುತ್ತೇವೆ. ಅದು ಇನ್ನೆಲ್ಲೋ ಸಿನಿಮಾ ಆಗಿಬಿಡುತ್ತೆ. ಕೆಲ ಸಿನಿಮಾಗಳನ್ನು ಮಾರಿಕೊಂಡಿರುತ್ತಾರೆ. ಅದರ ಹಣವೂ ನಮಗೆ ಸಿಗಲ್ಲ. ಆಗ ಕಾಪಿ ರೈಟ್, ಹೋರಾಟ ಮಾಡಲು ಆಗಲ್ಲ. ಕೇವಲ ಸಿನಿಮಾ ಅಷ್ಟೇ ಅಲ್ಲ ಎಲ್ಲ ಉದ್ಯಮದಲ್ಲೂ ಶೋಷಣೆ ಇದೆ. ಪ್ರಸ್ತುತ ಇದಕ್ಕಾಗಿ ಒಂದು ವೇದಿಕೆ ಸಿದ್ಧವಾಗುತ್ತಿರುವುದು ಉತ್ತಮ ಸಂಗತಿ. ಇದರಿಂದ ಮುಕ್ತವಾಗಿ ಧ್ವನಿಯೆತ್ತಲು ಸಾಧ್ಯವಾಗುತ್ತದೆ ಎಂದಿದ್ದಾರೆ.
Advertisement
Upendra: ಸಿನಿರಂಗದಲ್ಲಿ ಗಂಡಸರಿಗೂ ಶೋಷಣೆ ಆಗಿದೆ- ಉಪೇಂದ್ರ
11:30 AM Sep 18, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.