Advertisement

ಬಸವಲಿಂಗ ಸ್ವಾಮಿಗಳ ಸ್ಮರಣೆ; ಪ್ರವಚನಕ್ಕೆ ಚಾಲನೆ

06:15 PM Jan 25, 2022 | Team Udayavani |

ಮುನವಳ್ಳಿ: ಪಟ್ಟಣದ ಶ್ರೀ ಸೋಮಶೇಖರ ಮಠದ ಹಿಂದಿನ ಪೀಠಾಧಿಪತಿ ಲಿಂ| ಬಸವಲಿಂಗ ಸ್ವಾಮಿಗಳ 66ನೇ ಪುಣ್ಯಸ್ಮರಣೋತ್ಸವ ನಿಮಿತ್ಯ ಆಧ್ಯಾತ್ಮಿಕ ಪ್ರವಚನದ ಉದ್ಘಾಟನಾ ಕಾರ್ಯಕ್ರಮ ಶ್ರೀ ಸೋಮಶೇಖರ ಮಠದ ಸಭಾಂಗಣದಲ್ಲಿ ಶ್ರೀ ಮುರುಘೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಜರುಗಿತು.

Advertisement

ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ನನಗೇನು ಕೊಟ್ಟಿತು ಎನ್ನುವುದಕ್ಕಿಂತ ಸಮಾಜಕ್ಕೆ ನಾನೇನು ಕೊಟ್ಟೆ ಎಂದು ಪರಾಮರ್ಶೆ ಮಾಡಿಕೊಳ್ಳಬೇಕು. ಮಾನವ ಜೀವನ ಸಾರ್ಥಕವಾಗಲು ಸೇವೆ ಅವಶ್ಯವಾಗಿದೆ.

ಸೇವೆಯ ಮೂಲಕ ನಾವು ಭಗವಂತನನ್ನು ಕಾಣಬೇಕು. ಕೊರೊನಾ ಹಾಗೂ ಮಲಪ್ರಭಾ ನದಿಗೆ ನೆರೆ ಬಂದಾಗ ಶ್ರೀ ಸೋಮಶೇಖರ ಮಠವು ಸಮಾಜ ಮುಖೀಯಾಗಿ ಕಾರ್ಯನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಸವದತ್ತಿಯ ಶ್ರೀ ಶಿವಲಿಂಗ ಸ್ವಾಮೀಜಿ, ಗೊರವನಕೊಳ್ಳದ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗುಳೇದಗುಡ್ಡದ ಶ್ರೀ ಒಪ್ಪತ್ತೇಶ್ವರ ಮಠದ ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿಯವರಿಂದ ಪ್ರವಚನ ಜರುಗಿತು.

ಕಟಕೋಳದ ಟಿ.ಪಿ. ಮುನೋಳಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪುಂಡಲೀಕ ಹೊನ್ನಪ್ಪ ಮೇಟಿ ಆಗಮಿಸಿದ್ದರು. ಯರಗಟ್ಟಿಯ ರಾಜೇಂದ್ರ ವಾಲಿ ಅವರಿಗೆ ಗೌರವ ಸನ್ಮಾನ ಜರುಗಿತು. ಗಂಗಾಧರ ಗೊರಬಾಳ ನಿರೂಪಿಸಿದರು. ಬಿ.ಬಿ. ಹುಲಿಗೊಪ್ಪ ಸ್ವಾಗತಿಸಿದರು. ಮಂಜುನಾಥ ಭಂಡಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next