Advertisement

ಮರಳಿ ಬಂದು ಬಿಡು, ಸ್ನೇಹಕ್ಕೆ ರುಜು ಹಾಕುವ!

09:52 AM Dec 04, 2019 | Suhan S |

ಈ ಜೀವನ ಎಂಬುದು ಅಂತಿಮವಿಲ್ಲದ ಪಯಣ. ಸಾಗುತ್ತಾ ಹೋದಂತೆ ಅನುಭವಗಳ ಸರಮಾಲೆಯೇ ಸಿಗುತ್ತಾ

Advertisement

ಹೋಗುತ್ತದೆ . ಕಾರಣವಿಲ್ಲದೆ ಕೆಲವರು ಮನಸ್ಸಿಗೆ ಹತ್ತಿರವಾಗುತ್ತಾರೆ. ಹಾಗೆಯೇ, ಕಾರಣವಿಲ್ಲದೇ ದೂರಾನೂ ಆಗ್ತಾರೆ .ಎಷ್ಟು ವಿಚಿತ್ರ ಅಲ್ವಾ? ಆ ದಿನ ಆ ಮುಗುಳುನಗೆ ನನ್ನನ್ನೇ ನಾಮರೆಯುವಂತೆ ಮಾಡಿತು.

ಯಾರಿಂದಲೂ ಏನನ್ನೂ ಅಪೇಕ್ಷಿಸದ ಈ ಜೀವಕೆ ನಿನ್ನ ಸ್ನೇಹವನ್ನು ಪಡೆಯಬೇಕೆಂಬ ಹಂಬಲ ಹೆಚ್ಚಾಯಿತು.ಅದೇಕೋ ನಾನರಿಯೆ. ಮುಗಿಲ ಮಲ್ಲಿಗೆಯಂತೆ ನಿನ್ನ ಚೆಲುವು. ಅದಕ್ಕೂ ಮಿಗಿಲಾಗಿ ಮೊಗದಲ್ಲಿ ಅರಳುತ್ತಿರುವ ನಗುವೆಂಬ ಹೂವು. ಇಷ್ಟೇ ಸಾಕಲ್ಲವೇ ಮರುಳನಾಗಲು. ಮನಸ್ಸುಗಳು ಒಂದಾಗಿ, ಭಾವ ಭಾವಗಳು ಬೆರೆತು,ಪರಿಚಯವಾಗಿ, ಸ್ನೇಹವೆಂಬ ನೌಕೆಯಾವ ಬಿರುಗಾಳಿಗೂ ಸಿಲುಕದೇ ಹಾಯಾಗಿ ಸಾಗುತ್ತಿತ್ತು. ಗೆಳತಿ, ನೀ ನಿಜಕ್ಕೂ ನಕ್ಷತ್ರವೇ ಸರಿ. ನೀ ಜೊತೆಯಿದ್ದರೆ, ನನಗಾಗುವ ಖುಷಿಗೆಮಿತಿಯೇ ಇರಲಿಲ್ಲ ಗೊತ್ತಾ? ದಿನವೆಲ್ಲ ಹೇಗೆ ಕಳೆಯುತಿತ್ತೋ ಗೊತ್ತಿಲ್ಲ. ಆದರೆ, ಈಗ ನನ್ನೆದೆಯಾಳದಲಿ ಹಗಲಿರುಳು ನಿನ್ನದೇ ನೆನಪುಮರುಕಳಿಸುತ್ತಿದೆ. ನಿನಗೆ ನೆನಪಿದೆಯಾ,ಅದೆಷ್ಟೋ ರಾತ್ರಿಯ ಕನಸಿನಲ್ಲಿ ಬಂದು ನಿದ್ರೆಯನ್ನೆಲ್ಲ ಹಾಳು ಮಾಡುತ್ತಿದ್ದೆ ನೀನು. ಬರೀ ನೋವುಗಳೇ ತುಂಬಿದ ಮನದೊಳಗೆ ಸ್ನೇಹವೆಂಬಅಮೃತವ ಸುರಿದು, ಸದಾ ನಗುತಿರುವಂತೆ ಮಾಡಿದ ನಿನಗೆ ಎಷ್ಟು ಧನ್ಯವಾದ ಸಲ್ಲಿಸಿದರೂಸಾಲದು. ನಿನ್ನ ಸ್ನೇಹ ಪಂಜರದೊಳಗೆ ನಾ ಬಂದಿಯಾದೆ.

ನನಗೆ ಏನೇ ಕಷ್ಟ ಬಂದರೂ, ನೀನು ಜೊತೆಗಿದ್ದು ಸಂತೈಸುತ್ತಿದ್ದೆ.ನನ್ನ ಎಲ್ಲಾ ಕೆಲಸಗಳಿಗೆ ಸ್ಫೂರ್ತಿಯಚಿಲುವೆಯಂತಿದ್ದೆ. ಆದರೆ, ಇಂದು ಇವೆಲ್ಲವೂ ನನ್ನ ಪಾಲಿಗೆ ಮಧುರ ನೆನಪಾಗಿ ಉಳಿದಿದೆ. ಉತ್ತರ ಸಿಗದ ಪ್ರಶ್ನೆಗಳು ತುಂಬಾ ಇವೆ.ಬದಲಾವಣೆ ಜಗದ ನಿಯಮ ಗೆಳತಿ.ಆದರೆ, ಹಿಂದಿನ ದಾರಿ ಮರೆಯುವುದು ಎಷ್ಟು ಸೂಕ್ತ ಹೇಳು. ನಮ್ಮ ಸ್ನೇಹ, ಯಾವ ಬಿರುಗಾಳಿಗೆ ಸಿಲುಕಿ

ಬಾನಾಚೆ ಹಾರಿತೋ ನಾನರಿಯೆ. ಮನಸ್ಸುಗಳುದೂರಾಗಿರಬಹುದು ಗೆಳತಿ, ನೆನಪುಗಳು ದೂರವಾಗಲು ಸಾಧ್ಯವೇ ಹೇಳು? ನೀನಿಲ್ಲದ ಈ ದಿನಗಳು ಹೇಗೇ ಸಾಗುತ್ತಿದೆ ಎಂಬ ಅರಿವುನಿನಗಿಲ್ಲ. ಆದರೆ, ಮೂರು ದಿನದ ಈ ಬದುಕಿನಲ್ಲಿ ಇದೆಲ್ಲವೂ ಬೇಕಾ ಹೇಳು? ಮರಳಿ ಬಂದು ಬಿಡು ನೀನು ಪ್ಲೀಸ್‌ವಂದನೆಗಳೊಂದಿಗೆ

Advertisement

 

ನಂದನ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next