Advertisement

ರಾಜ್‌ಕುಮಾರ್‌ ಫೊಟೊ ನೆನಪುಗಳು

07:00 AM Apr 08, 2018 | |

ಎಪ್ರಿಲ್ 12ಕ್ಕೆ  ರಾಜ್‌ಕುಮಾರ್‌ ಅವರು ಇಹಲೋಕ ತ್ಯಜಿಸಿ ಹನ್ನೆರಡು ವರ್ಷ. ಈ ನೆಪದಲ್ಲಿ ಅವರ ಸಾವಿರಾರು ಫೋಟೋಗಳನ್ನು ತೆಗೆದ ಹಿರಿಯ ಪೋಟೋಗ್ರಾಫ‌ರ್‌ ಪ್ರವೀಣ್‌ ನಾಯಕ್‌,  ತಮ್ಮ ಹಾಗೂ ರಾಜ್‌ಕುಮಾರ್‌ ಒಡನಾಟದ ನೆನಪುಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ. 

Advertisement

ಬೆಂಗಳೂರಿಗೆ ಬಂದಾಗ ನನಗೆ ಶಾಕ್‌. ಏಕೆಂದರೆ, ನಮ್ಮ ಕಡೆ ಸಿನೆಮಾ ನೋಡೋರು, ಸಂತೋಷ ಪಡೋರು ಅಷ್ಟೇ. ಇಲ್ಲಿ ಹಾಗಿರಲಿಲ್ಲ. ಗೆಳೆಯ ಶಿವಶಂಕರ್‌ ಆಗ ಕಟೌಟು ಕಟ್ಟುತ್ತಿದ್ದ. ಅವನ ಜೊತೆ ಮೆಜೆಸ್ಟಿಕ್‌ ಥಿಯೇಟರ್‌ನಲ್ಲಿ  ರಾಜ್‌ಕುಮಾರರ ಸಿನೆಮಾಕ್ಕೆ ಹೋಗಿದ್ದೆ. ಇಡೀ ಸಿನೆಮಾದಲ್ಲಿ ಒಂದೇ ಒಂದು ಡೈಲಾಗ್‌ ಕೇಳಲಿಲ್ಲ. ರಾಜ್‌ಕುಮಾರ್‌ ಡ್ರೆಸ್‌ ಛೇಂಜ್‌ ಮಾಡಿಕೊಂಡು ಬಂದರೆ 15 ನಿಮಿಷ ಶಿಳ್ಳೆ, ಚಿಲ್ಲರೆ ಕಾಸು ಎಸೆಯೋರು. “ಎಂಥ ಅಭಿಮಾನನಯ್ನಾ ಇದು’ ಅಂದೆ ಗೆಳೆಯನಿಗೆ. “ಇದನ್ನು ಏನು ನೋಡ್ತೀಯಾ ಬಾ’ ಅಂತ ಥಿಯೇಟರ್‌ ಆಚೆ ಕರೆದುಕೊಂಡು ಬಂದರೆ ರಸ್ತೆ ಪೂರ್ತಿ ಜಾಮ…. ಅಂಗಡಿಗಳು ಬಂದ್‌ ಸಿನೆಮಾಕ್ಕಾಗಿ. 


ರಾಜ್‌ಕುಮಾರ್‌ ಅವರೇ ತೆಗೆದ ಪ್ರವೀಣ್‌ ನಾಯಕ್‌ ಅವರ ಫೊಟೊ

 ಈ ಗೆಳೆಯ ರಕ್ತಕೊಟ್ಟು, ದುಡ್ಡು ಸಂಪಾದನೆ ಮಾಡಿ ರಾಜ್‌ಕುಮಾರ್‌ ಕಟೌಟು ಕಟ್ಟೋನು. ಇದೆಂಥ ಅಭಿಮಾನ. ಅವ್ರನ್ನ ನೋಡಲೇ ಬೇಕಲ್ಲ ಅಂದುಕೊಂಡೆ. ಆ ನನ್ನ ಹತ್ತಿರ ಪುಟ್ಟ ಯಾಶಿಕಾ ಕ್ಯಾಮರ ಇತ್ತು. ಸಣ್ಣಪುಟ್ಟ ಫೋಟೋ ತೆಗೀತಿದ್ದೆ. “ರಾಗಸಂಗಮ’ ಅನ್ನೋ ಮ್ಯಾಗಿjàನ್‌ಗೆ ಬರೀತಿದ್ದೆ. ಹೀಗಿರುವಾಗ ಎಂಬಿ ಸಿಂಗ್‌ರ ಪರಿಚಯವಾಯಿತು. ಅವರು, “ಪ್ರವೀಣ್‌ ರಾಜ್‌ಕುಮಾರ್‌ ಫೋಟೋ ಇದ್ದರೆ ಕಳುಹಿಸಿ’ ಅಂದರು. ಇದಕ್ಕೂ ಮೊದಲು ಒಂದು ಘಟನೆ ಆಗಿತ್ತು. 

ಕೆರಳಿದ ಸಿಂಹ ಶೂಟಿಂಗ್‌ ಇರಬೇಕು. ರಾಜ್‌ಕುಮಾರರು ಇನ್ಸ್‌ಪೆಕ್ಟರ್‌ ಡ್ರೆಸ್‌ನಲ್ಲಿ ಇದ್ದರು. ಬ್ರೇಕ್‌ ಮಧ್ಯೆ ಸಾರ್‌ ಒಂದಷ್ಟು ಫೋಟೋ ಬೇಕಲ್ಲ ಅಂತ ಹೇಗೋ ಮಾಡಿ, ಅವರ ಕೋಟೆ ಭೇದಿಸಿ ಹೋಗಿ ಕೇಳಿ¨ªೆ. ಅವರು ಹಿಂದೂಮುಂದೂ ನೋಡದೆ ಅರ್ಧ ಗಂಟೆ ಅವಕಾಶ ಕೊಟ್ಟರು. ಒಂದು ರೋಲ… ಪೂರ್ತಿ ಫೋಟೋ ತೆಗೆದೆ.  ಬಹಳ ಖುಷಿಯಾಗಿ ಡೆವಲಪ್‌ ಮಾಡಿಸೋಕೆ ಹೋದರೆ, ಲ್ಯಾಬ್‌ನಲ್ಲಿ “ಏನ್‌ರಿ, ಫೋಟೋನೇ ಇಲ್ಲ’ ಅಂದುಬಿಟ್ಟರು. ಆಕಾಶವೇ ತಲೆಮೇಲೆ ಬಿದ್ದಂತೆ ಆಯಿತು. ಮತ್ತೆ ರಾಜ್‌ಕುಮಾರನ ಹೇಗೆ ಕೇಳ್ಳೋದು. ಇಂಥ ಕಥೆ ಆಗಿತ್ತು. 

ಇಂಥ ಹೊತ್ತಲ್ಲಿ ಎಂ. ಬಿ. ಸಿಂಗ್‌ ಅವರ ಫೋಟೋ ಕೇಳಿದರು. ಚಿನ್ನೇಗೌಡರನ್ನು ಕೇಳಿದೆ. “ತಿಂಗಳು ಬಿಟ್ಟು ಬನ್ನಿ’ ಅಂದರು. ಕೊನೆಗೆ ಅವರೇ ಖುದ್ದು ಫೋನ್‌ ಮಾಡಿ ಹೇಳಿದ್ದರಿಂದ ರಾಜ್‌ಕುಮಾರ್‌ ಮನೆಗೆ ಹೋದೆ. ಆವತ್ತು ಏನಾಗಿತ್ತೆಂದರೆ, ರಾಜ್‌ಕುಮಾರರ ತಾಯಿಗೆ ಹುಷಾರು ಇರಲಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದರು. ಇಂಥ ಸಂದರ್ಭದಲ್ಲಿ ಒಂದು ಫೋಸು ಕೊಡಿ ಅಂತ ಕೇಳುವುದು ಹೇಗೆ ಅನ್ನೋದು ಚಿಂತೆಯಾಗಿತ್ತು. ಚಿನ್ನೇಗೌಡರು ಇದನ್ನೇ ಹೇಳಿದ್ದರು. ಇರಲಿ ಟ್ರೈ ಮಾಡೋಣ ಅಂತಲೇ ಮನೆಗೆ ಹೋದೆವು. ಈ ಮಧ್ಯೆ ಶೂಟಿಂಗ್‌ ಸಂದರ್ಭದಲ್ಲಿ ವಿನಯ… ರಾಜ್‌ಕುಮಾರರ ಒಂದಷ್ಟು ಫೋಟೋಗಳನ್ನು ತೆಗೆದಿ¨ªೆ. ಅದನ್ನು ರಾಜ್‌ಕುಮಾರರಿಗೆ ತೋರಿಸಲು ಸಮಯ ಕಾಯುತ್ತಿದ್ದೆ. ಚಿನ್ನೇಗೌಡರು ಪೂರ್ವಾಪರ ಹೇಳಿ ಪರಿಚಯಿಸಿದರು. ಮುಖದಲ್ಲಿ ದುಃಖ ಮಡುಗಟ್ಟಿತ್ತು. “ಫೋಟೋ ತೆಗೀತೀನಿ’ ಅಂತ ಹೇಗೆ ಕೇಳ್ಳೋದು. 

Advertisement

ಇಂಥ ಸಂದರ್ಭದಲ್ಲೂ “ಕಾಫಿ ತಗೊಳ್ತೀರಾ’ ಅಂದರು ರಾಜಕುಮಾರ್‌. ಕೈಯಲ್ಲಿದ್ದ ವಿನಯ… ರಾಜ್‌ಕುಮಾರರ ಫೋಟೋ ಕೊಟ್ಟೆ. ಮುದ್ದು, ಮು¨ªಾಗಿ ನಿಂತಿದ್ದ, ಓಡಾಡುತ್ತಿದ್ದವನನ್ನು ನೋಡುತ್ತಿದ್ದಂತೆ ಮೂಡ್‌ ಬದಲಾಯಿತು. ಅಯ್ಯಯ್ಯೋ ಎಷ್ಟು ಚೆನ್ನಾಗಿದೆ ಮುದ್ದು ಮು¨ªಾಗಿ… “ಬಾರೋ ನೋಡು ಪುಟ್ಟು ಹೇಗಿದಿಯಾ’ ಅಂತ ಅವನಿಗೂ ತೋರಿಸಿದರು. ಮುಖ ಅರಳಿತು. ಅಣ್ಣಾ ಫೋಟೋ ತೆಗೀತಿನಿ ಅಂತ ಬೇಡಿಕೆ ಇಟ್ಟರೆ, “ತಗೊಳ್ಳಿ ತಗೊಳಿ’ ಅಂದರು. ಒಂದಷ್ಟು ಫೋಟೋ ತೆಗೆದೆ. ಪಾರ್ವತಮ್ಮನವರೂ ಸೇರಿಕೊಂಡರು. ಪುನೀತ್‌ ಕೂಡಿಕೊಂಡರು. ಅಂದುಕೊಂಡಂದಕ್ಕಿಂತ ಒಳ್ಳೇ ಫೋಟೋಗಳು ಬಂದವು. 

ಅನಿರೀಕ್ಷಿತ ಕರೆ
ಮೂರು ದಿನದ ನಂತರ ವಜ್ರೆಶ್ವರಿಯಿಂದ ಕರೆ ಬಂತು. “ನೀವು ಸ್ವಲ್ಪ ಆಫೀಸಿಗೆ ಬನ್ನಿ’ ಅಂತ. ಓಹೋ ಫೋಟೋಗಳಲ್ಲಿ ಏನೋ ಯಡವಟ್ಟಾಗಿರಬೇಕು, ಒಟ್ಟಾರೆ ಏನೋ ಕಾದಿದೆ ಅಂತ ಭಯವಾಗಿ ಹೋದರೆ- ಚಿನ್ನೇಗೌಡರು ನಾನು ತೆಗೆದ ಒಂದಷ್ಟು ಫೋಟೋಗಳನ್ನು ಗುಡ್ಡೆ ಹಾಕಿಕೊಂಡು, “ಅಕ್ಕಭಾವ ಇದ್ದಾರಲ್ಲ ಅದು 500 ಫೋಟೋಗಳಿರಲಿ, ಎಲ್ಲರೂ ಒಟ್ಟಿಗೆ ನಿಂತಿರೋದು 100 ಪೋಟೋ ಇರಲಿ’- ಹೀಗೆ ಹದಿನೆಂಟು ಸಾವಿರ ರೂ. ಆರ್ಡರ್‌ ಕೊಟ್ಟು, 20 ಸಾವಿರ ರೂ. ಕೈಗಿಟ್ಟರು. ಉಳಿದದ್ದು ಕೊಡಲು ಹೋದರೆ “ಇಟ್ಕೊಳಿ’ ಅಂದರು. 

ಆಗ ನನ್ನ ಅಂಗಡಿ ಬಾಡಿಗೆ 400 ರೂ. 
ಅಲ್ಲಿಂದ ರಾಜ್‌ಕುಮಾರ್‌ ನನ್ನ ಗೆಳೆತನ ಹೆಮ್ಮರವಾಗುತ್ತ ಹೋಯಿತು. ಮನೆಗೆ ಹೋದರೆ ಚಕ್ಕಮಟ್ಲ ಹಾಕಿಕೊಂಡು ಗಂಟೆಗಟ್ಟಲೆ ಹರಟೆ ಹೊಡೆಯೋರು. ನಮ್ಮನ್ನು ಕಳುಹಿಸಲು ಇಷ್ಟವಿಲ್ಲದೆ ಇದ್ದರೆ, ಒಂದ್ಸಲ ಕಾಫಿ ಅನ್ನೋರು. ಕುಡಿದಾದ ನಂತರ ಇನ್ನೇನು ಎದ್ದೇಳಬೇಕು ಅನ್ನುವ ಹೊತ್ತಿಗೆ “ಪ್ರವೀಣ್‌, ಇನ್ನೊಂದ್ಸಲ ಕಾಫಿ’ ಅನ್ನೋರು. ಹೀಗೆ ಮಾಡಿ, ಮಾಡಿ ಮೂರು ನಾಲ್ಕು ಗಂಟೆಗಳ ಕಾಲ ಮಾತನಾಡುತ್ತಲೇ ಕುಳಿತಿರುತ್ತಿದ್ದೆವು.  ಎಷ್ಟೋ ಸಲ ನೀವು ನಮ್ಮೂರಿಗೆ ಬರಬೇಕು ಅನ್ನೋರು. ಹಾಗೇ ಕರೆದುಕೊಂಡು ಹೋದರು. ಅಲ್ಲಿ ಅವರು ಹುಟ್ಟಿದ್ದ ಮನೆ, ಜಮೀನು ಎಲ್ಲ ತೋರಿಸಿ ಸಂತೋಷ ಪಟ್ಟಿದ್ದರು. ನೀವು ನಮ್ಮೂರಿಗೆ ಬಂದಿದ್ದೀರಿ, ನಿಮ್ಮೂರಿಗೆ ಬರ್ತೀನಿ ಅಂತ ನಮ್ಮೂರಿಗೂ ಬಂದರು. 

ತಿಪಟೂರಿಗೆ ಹೋಗಿದ್ದು
 ಒಂದು ಸಲ ಹೀಗೆ ಫೋಟೋ ತೆಗೆಯೋಕೆ ಹೋಗಿದ್ದೆ. ತಿಪಟೂರು ರಾಮಸ್ವಾಮಿ ಬಂದಿದ್ದರು. ಇಬ್ಬರೂ ಬಹಳ ಹೊತ್ತು ಮಾತನಾಡುತ್ತ ಕೂತಿದ್ದರು. ಕೊನೆಗೆ ಹೊರಟರು. ಗೇಟಿನ ತನಕ ಬಿಟ್ಟು ಬರಲು ಬಂದ ರಾಜ್‌ಕುಮಾರರಿಗೆ ಏನು ಅನಿಸಿತೋ ಏನೋ, “ರಾಮಸ್ವಾಮಿ, ನಾನು ನಿಮ್ಮ ಊರಿನ ತನಕ ಬಿಟ್ಟು ಬರ್ತೀನಿ’ ಅಂತ ಹೊರಟರು. ಪಕ್ಕದಲ್ಲಿ ನಾನಿದ್ದೆ – “ನೀವು ಬನ್ನಿ ಪ್ರವೀಣ್‌’ ಅಂದರು. ಪಾರ್ವತಮ್ಮನವರು ಕಾರಲ್ಲಿ ದೊಡ್ಡ ಡಬ್ಬದ ತುಂಬ ಚಕ್ಕುಲಿ ಬೇರೆ ಕಳುಹಿಸಿದ್ದರು. ದಾರಿಯುದ್ದಕ್ಕೂ ಮಾತು, ಮಾತು ಮತ್ತು ಚಕ್ಕುಲಿ. ತೇಗಿದರೆ ಬರೀ ಚಕ್ಕುಲಿ ವಾಸನೆ. 

“ಪ್ರವೀಣ್‌ ನೀವು ತಿಪಟೂರಿನ ಫೋಟೋಗಳು ತೆಗೀಬೇಕು’ ಅಂದರು. ಊರು ಬಂತು. ಅವರು ಆಟವಾಡುತ್ತಿದ್ದ ಜಾಗ, ರಾಮಸ್ವಾಮಿ ಮನೆಯಿಂದ ಬೆಲ್ಲಕದ್ದು ತಂದರೆ, ರಾಜ್‌ಕುಮಾರ್‌ ಅಕ್ಕಿ ಕದ್ದು ತಂದು ಅಲ್ಲೆಲ್ಲೋ  ಮಡಿಕೆಯನ್ನು ಬಚ್ಚಿಟ್ಟಿದ್ದರಂತೆ. ಅದಕ್ಕೆ ಕೆರೆಯ ನೀರು ಹಾಕಿ, ಕಾಯಿಸಿ ಸಿಹಿ ಪೊಂಗಲ… ಮಾಡಿಕೊಂಡು ತಿನ್ನುತ್ತಿದ್ದ ಕಥೆಯನ್ನು ವಿವರಿಸುತ್ತಾ ಹೋದರು. 

 ಇಷ್ಟೆಲ್ಲ ಸರಿ, ರಾಜ್‌ಕುಮಾರರು ಏಕೆ ನನಗೆ ಪ್ರೀತಿ ತೋರುತ್ತಿದ್ದರೋ ಗೊತ್ತಿಲ್ಲ. ನನ್ನಂಥ ಅನೇಕ ಫೋಟೋಗ್ರಾಫ‌ರ್‌ಗಳನ್ನು ನೋಡಿದವರು ಅವರು. ಆದರೂ ಎಲ್ಲರಿಗಿಂತ ಒಂದು ಕೈ ಹೆಚ್ಚು ಪ್ರೀತಿ ನನ್ನ ಮೇಲೆ ಇಟ್ಟಿದ್ದರು ಅನ್ನೋದು ಈಗಲೂ ಯಕ್ಷಪ್ರಶ್ನೆಯೇ ಆಗಿದೆ. ಅವರೇ ಬಂದು ಬಾಗಿಲು ತಟ್ಟಿದರು…

ಮದುವೆಯಾಗಿ ಹೊಸತು. ನಂದಿ ಬೆಟ್ಟದಲ್ಲಿ ಶೂಟಿಂಗ್‌. ಫೋಟೋ ತೆಗೆಯಲು ಹೋಗಿದ್ದೆ. ಹೋಗುವ ಮೊದಲು ರಾಜ್‌ಕುಮಾರರು ಕಂಡೀಷನ್‌ ಹಾಕಿದ್ದರು. ಏನೆಂದರೆ, ಹೊಸ ಜೋಡಿ ಇಬ್ಬರೂ ಶೂಟಿಂಗ್‌ಗೆ ಬರಬೇಕು ಅಂತ. ಅಲ್ಲಿ ಹೋದರೆ, ಫೋಟೋ ತೆಗೆಯೋಕೆ ಬಿಡುತ್ತಿಲ್ಲ. “ಪ್ರವೀಣ… ಹೊಸದಾಗಿ ಮದುವೆಯಾಗಿದ್ದೀರಿ, ಹೋಗಿ ಪ್ರಕೃತಿ, ಏಕಾಂತವನ್ನು ಎಂಜಾಯ… ಮಾಡಿ’ ಅನ್ನೋರು. ಕೊನೆಗೆ ಒಂದು ಫೋಟೋ ತೆಗೆದರೆ ಇಬ್ಬರೂ ಒಂದು ರೌಂಡ್‌ ಹೊಡೆದು ಕೊಂಡು ಬರೇಬೇಕು ಅಂತ ಇನ್ನೊಂದು ಕಂಡೀಷನ್‌ ಹಾಕಿದರು. ಆವತ್ತು ರಾತ್ರಿ ಘಟನೆ ನಡೀತು. ಸುಮಾರು 10 ಘಂಟೆ. ಇನ್ನೇನು ನಿದ್ದೆ ಮಾಡಬೇಕು ಅನ್ನೋ ಹೊತ್ತಿಗೆ ಬಾಗಿಲು ಸದ್ದಾಯಿತು. ಹೋಗಿ ನೋಡಿದರೆ ರಾಜ್‌ಕುಮಾರ್‌ ಪ್ರವೀಣ… ನೋಡಿ ಅಲ್ಲೆಲ್ಲೋ  ಫೋನ್‌ ನಂಬರ್‌ ಇದೆಯಂತೆ. ಕರೆ ಮಾಡಿ ನಿಮಗೆ ಏನು ಬೇಕೋ ಎಲ್ಲಾ ತಂದು ಕೊಡ್ತಾರೆ. ಸಂಕೋಚ ಬೇಡ. ಚಳಿ ಜಾಸ್ತಿ ಇದೆ. ಬೆಡ್‌ಶೀಟ… ತಗೊಳ್ಳಿ ಅಂತ ಕೊಟ್ಟು. ಗುಡ್‌ನೈಟ… ಅಂತ ಹೇಳಿ ಹೋದರು. ನಾವು ನಮ್ಮ ಕಣ್ಣುಗಳನ್ನು ನಂಬದೇ ಹೋದೆವು. 

ಫೋಸು ಕೊಡೋರಲ್ಲ…
ರಾಜ್‌ಕುಮಾರ್‌ ಫೋಟೋ ತೆಗೆಯೋದು ಕಷ್ಟವೇನು ಇರಲಿಲ್ಲ. ಅವರು ಯಾವುತ್ತೋ ಫೋಸು ಕೊಡಲಿಲ್ಲ. ಹಾಗೆ ಕೊಡೋದು ಅಂದರೆ ಅವರಿಗೆ ಕಷ್ಟ. ರಾಜ್‌ಕುಮಾರರ ಮುಖಕ್ಕೆ ತೀರ ಲೈಟಿಂಗ್‌ ಅಗತ್ಯವಿಲ್ಲ. ಕಿ.ಲೈಟ್‌ಗಳಲ್ಲೇ (ಹೈ.ಕಿ, ಲೋ.ಕಿ) ಫೋಟೋ ತೆಗೆಯಬಹುದು. ಆದರೆ ಎಕ್ಸ್‌ಪ್ರೆಷನ್‌ಗೆ ಎಲ್ಲಿ ಯಾವ ಲೈಟ್‌ ಬಳಸಬೇಕು ಅಂದರೆ ಬೌನ್ಸ್ ಬೇಕಾ, ಲೋಫೀಲ್ ಕೊಟ್ಟರೆ ಮುಖ ಸ್ವಲ್ಪ ತುಂಬಿಕೊಳ್ಳುತ್ತದೆ. ಮುಖದಲ್ಲಿ ಶ್ಯಾಡೋ ಇರುವಂತೆ ನೋಡಿಕೊಂಡರೆ ಇನ್ನೂ ಚೆನ್ನಾಗಿ ಕಾಣುತ್ತಾರೆ ರಾಜ್‌ಕುಮಾರ್‌.  ಇಂಥ ಟೆಕ್ನಿಕ್‌ ಗೊತ್ತಿರಬೇಕಿತ್ತು ಅಷ್ಟೇ. 

ಕಟ್ಟೆ ಗುರುರಾಜ್‌

Advertisement

Udayavani is now on Telegram. Click here to join our channel and stay updated with the latest news.

Next