Advertisement

ಕಾಡುವ ಮಳೆಗಾಲದ ಸಂಭ್ರಮ

03:12 PM Jun 06, 2021 | Team Udayavani |

ಮಳೆ ಎಂದರೆ ಸಾಕು ಹೆಣ್ಮಕ್ಕಳಿಗೆ ಏನೂ ಒಂದು ಸಂತಸ. ಯಾರು ಕಾಣದ ಲೋಕವನ್ನು ಅವರು ಮಳೆಯಲ್ಲಿ ಕಾಣುತ್ತಾರೆ.

Advertisement

ಹೆಣ್ಣು ಮಕ್ಕಳು ಹಾಗೆ ತಾನೇ ತಮ್ಮ ಜೀವನದಲ್ಲಿ ಚಿಕ್ಕ ಚಿಕ್ಕ ವಿಷಯಕ್ಕೂ ಖುಷಿ ಕಾಣುವುದು ಸಹಜ. ಮಳೆ ಎಂದಾಗ ನಮ್ಮ ಬಾಲ್ಯ, ಕಾಲೇಜು ದಿನಗಳು ನೆನಪಿಗೆ ಬರುವುದು. ಮೋಡದ ಅಲೆಗಳು, ಮಿಂಚಿನ ಓಟಗಳು, ಸಿಡಿಲಿನ ಭಯಾನಕ ಸದ್ದು ಇವೆಲ್ಲವೂ ಮಳೆ ಆಗಮನದ ಮುನ್ಸೂಚನೆಗಳು. ಆಗ ನೋಡಿ ಜಿಟಿ ಜಿಟಿ ಮಳೆ ಹಾನಿಗಳು ನಮ್ಮ ಮನೆ ಅಂಗಳಕ್ಕೆ ಬೀಳಲು ಶುರುವಾಯಿತು. “ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು’ ಎಂಬ ಗಾಯನದ ಸ್ವರ ಹೊರಹೊಮ್ಮಿತು. ಮನಸ್ಸಿನಲ್ಲಿ ಏನೋ ಒಂದು ಮೌನ, ಸಂತಸ, ಬೆಚ್ಚಗಿನ ಕನಸುಗಳು.

ಮಳೆ ನಿಂತ ಅನಂತರ ಕಾಮನ ಬಿಲ್ಲಿನ ಸೊಗಸನ್ನು ನೋಡಲು ಕಣ್ಣಿಗೆ ಇಂಪು. ಜತೆಗೆ ಬಾಲ್ಯದ ನೆನಪುಗಳು ತುಂಬಿ ತುಂಬಿವೆ. ನೀರಿನಲ್ಲಿ ಆಟವಾಡಿ ದೋಣಿ ಬಿಡುವುದೆಂದರೆ ಎಲ್ಲಿಲ್ಲದ ತವಕ. ಮಳೆಗಾಲವನ್ನು ರೈತರ ಹಬ್ಬವೆಂದೇ ಹೇಳಬಹುದು. ಇದರ ಆಗಮನದಿಂದ ರೈತನ ಮುಖದಲ್ಲಿ ಮಂದಹಾಸ ಜತೆಗೆ ಉತ್ತಮ ಫಲ ಪಡೆಯುವ ಭವಿಷ್ಯದ ಕನಸು, ಇವೆಲ್ಲವನ್ನು ನನಸಾಗಿಸುವ ಈ ದಿನ ಅವರ ಬಾಳಿಗೆ ಸುದಿನ. ಅದೇ ರೀತಿ ಅತೀ ಹೆಚ್ಚು ಮಳೆ ಸುರಿದರು ನೆರೆಗೆ ಬೆಳೆ ಹಾನಿ ಆಗುವ ಸಂಭವ ಅತೀ ಹೆಚ್ಚು. ಮತ್ತೂಂದು ಕಡೆ ಮಕ್ಕಳಿಗೆ ಕೊಂಚ ಖುಷಿ, ವರುಣನ ಆರ್ಭಟದಿಂದ ಎಲ್ಲಿ ಶಾಲೆಗೆ ರಜೆ ಸಿಗುತ್ತದೆ ಎನ್ನುವ ಕಾತರ.

ಮತ್ತೂಂದೆಡೆ ಕೆರೆ, ಬಾವಿ ಇವೆಲ್ಲವೂ ಕೂಡ ತುಂಬಿ ತುಳುಕುತ್ತಿರುತ್ತವೆ. ಈ ಸಮಯದಲ್ಲಿ ಮೀನು, ಸಿಗಡಿ, ಇದನ್ನೆಲ್ಲ ಹಿಡಿಯುವ ಮಜಾನೇ ಬೇರೆ. ಅದರಲ್ಲಿ ಸಿಗುವ ಖುಷಿ ಮತ್ತೆ ಯಾವುದರಲ್ಲೂ ಪಡೆಯಲು ಅಸಾಧ್ಯ. ಜೋರಾಗಿ ಗಾಳಿಯ ಸದ್ದು ಕೇಳಿದರೆ ಸಾಕು ಎಲ್ಲರೂ ಮಾವಿನ ಹಣ್ಣಿನ ಬುಡದಲ್ಲಿ ತಾ ಮುಂದು ನಾ ಮುಂದು ಎಂದು ಓಡಿ ಹೋಗಿ ಜಗಳವಾಡುವ ಸಂಭ್ರಮ.

ವರ್ಷದಲ್ಲಿ ಒಂದು ಬಾರಿ ಮಳೆಯನ್ನು ಸಂಭ್ರಮವನ್ನು ಅನುಭವಿಸದಿದ್ದರೆ ಆ ವರ್ಷಕ್ಕೆ ಹರುಷವೇ ಇಲ್ಲ. ಈ ರೀತಿಯಾಗಿ ಮಳೆಯಲ್ಲಿ ಪಡೆದ ಅನುಭವವನ್ನು ಬಣ್ಣಿಸಲು ಸಾಧ್ಯವಿಲ್ಲ. ಹೀಗೆ ಪ್ರತಿಯೊಬ್ಬರು ಮಳೆ ಖುಷಿಯನ್ನು ಅನುಭವಿಸದೇ ಇರಲು ಸಾಧ್ಯವಿಲ್ಲ. ಹೀಗೆ ಮಳೆಗಾಲದ ಪ್ರತಿಯೊಂದು ಅನುಭವ ಹೊಸ ತನದ ಜತೆಗೆ ಮನಸ್ಸಿಗೆ ಉಲ್ಲಾಸವನ್ನು ಮತ್ತು ಮುದವನ್ನು ನೀಡುತ್ತದೆ. ಪತ್ರಿಯೊಂದು ಸಣ್ಣ ಪುಟ್ಟ ವಿಷಯದಲ್ಲಿಯೂ ಸಂಭ್ರಮಿಸಲು ಮಳೆರಾಯ ಮುಖ್ಯ ಕಾರಣನಾಗಿರುತ್ತಾನೆ.

Advertisement

 

 ಚೈತನ್ಯ ಕೊಟ್ಟಾರಿ

ಸೈಂಟ್‌ ಅಲೋಶಿಯಸ್‌ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next