ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆಯಲು ರೈತರಿಗೆ, ಕನ್ನಡಪರ ಹೋರಾಟಗಾರರಿಗೆ, ರಂಗಭೂಮಿ ಮತ್ತು ಜಾನಪದ ಕಲಾವಿದರುಗಳಿಗೆ ಕಲಿಕಾ ಮಿತಿಯ ಮಾನದಂಡ ಅನ್ವಯಿಸುವುದಿಲ್ಲ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ಮಹೇಶ ಜೋಶಿ ಸಮ್ಮುಖ ಶುಕ್ರವಾರ ನಡೆದ ಕಾರ್ಯಕಾರಿಣಿ ಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯತ್ವ ಪಡೆಯುವ ಸಂಬಂಧ ತಜ್ಞರ ಸಮಿತಿ 7ನೇ ತರ ಗತಿಯ ವರೆಗೆ ಕಲಿತವರಿಗೆ ಮಾತ್ರ ಸದಸ್ಯತ್ವ ನೀಡಬೇಕು ಎಂದು ಶಿಫಾರಸು ಮಾಡಿತ್ತು. ಆದರೆ ಈ ವಿಚಾರದಲ್ಲಿ ಸಡಿಲಿಕೆ ಮಾಡಲಾಗಿದೆ.
ಕೃಷಿಕರು, ಜಾನಪದ ಕಲಾವಿದರು, ರಂಗದಭೂಮಿ ಮತ್ತು ನೃತ್ಯ, ಸಂಗೀತ ಕಲಾವಿದರು ಸೇರಿದಂತೆ ಕನ್ನಡ ನಾಡು, ನುಡಿ, ಜಲ ಭಾಷೆ ಸೇರಿದಂತೆ ಇನ್ನಿತರ ಕನ್ನಡಪ ವಿಚಾರದಲ್ಲಿ ಹೋರಾಟ ನಡೆಸಿದವರಿಗೆ ಕಲಿಕಾ ಮಾನ ದಂಡ ಇಲ್ಲದೆ ಸದಸ್ಯತ್ವ ನೀಡುವ ಕುರಿತಂತೆ ಅಂತಿಮ ನಿರ್ಧಾರಕ್ಕೆ ಬರಲಾಯಿತು. ಆದರೆ ಇವರನ್ನು ಹೊರತು ಪಡಿಸಿದರೆ ಯಾರಾದರೂ ಕನ್ನಡ ಸದಸ್ಯತ್ವ ಪಡೆಯಬೇಕಾದರೂ ಪ್ರಾಥಮಿಕ ಶಿಕ್ಷಣ ಮಾನದಂಡ ಅನ್ವಯವಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಹೇಳಿದ್ದಾರೆ.
ಶೀಘ್ರದಲ್ಲೆ ಕಾಗಿನಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಸರ್ವ ಸದಸ್ಯರ ಸಭೆ ನಡೆಯಲಿದೆ. ಅಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಬೈಲಾ ತಿದ್ದುಪಡಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್‌ನ ಮೊಬೈಲ್ ಆ್ಯಪ್ ಕುರಿತಂತೆ ಸಭೆಯಲ್ಲಿ ಯಾವುದೇ ಪ್ರಸ್ತಾವವಾಗಲಿಲ್ಲ. 2026ರಲ್ಲಿ ನಡೆಯುವ ಕಸಾಪ ಚುನಾವಣೆಯನ್ನು ಮೊಬೈಲ್ ಆ್ಯಪ್ ಮೂಲಕ ನಡೆಸಲು ಚಿಂತನೆ ಇದೆ ಎಂದು ತಿಳಿಸಿದ್ದಾರೆ.
ಆ್ಯಪ್ ಮೂಲಕ ಚುನಾವಣೆ ನಡೆಸು ವುದರಿಂದ ಹಲವು ಸಮಸ್ಯೆ ಗಳು ಎದುರಾಗಲಿವೆ. ಆ ಹಿನ್ನೆಲೆ ಯಲ್ಲಿ ಈ ನಿರ್ಧಾರದಿಂದ ಹಿಂದೆ ಸರಿಯುವುದು ಒಳ್ಳೆಯದು ಎನ್ನುವ ಸಲಹೆಯೂ ಕೇಳಿಬಂತು.
ಸದಸ್ಯತ್ವ ಶುಲ್ಕ ಇಳಿಕೆ
ಕನ್ನಡ ಭಾಷೆ ಬಾರದವರಿಗೆ ಆ್ಯಪ್ ಮೂಲಕ ಸರಳ ರೀತಿಯಲ್ಲಿ ಕನ್ನಡ ಕಲಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಜತಗೆ ಕಸಾಪ ಸದಸ್ಯತ್ವದ ಶುಲ್ಕವನ್ನು 1000 ರೂ.ನಿಂದ 250 ರೂ.ಗೆ ಇಳಿಕೆ ಮಾಡುವ ಕುರಿತಂತೆ ಸಮ್ಮತಿ ವ್ಯಕ್ತವಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾ ತಿದ್ದುಪಡಿಗೆ ಅನುಮೋದನೆ ಕೂಡ ದೊರೆಯಿತು ಎಂದು ತಿಳಿಸಿದ್ದಾರೆ.