Advertisement
ಪಾಲಿಕೆಯ 20 ನಾಮನಿರ್ದೇಶಿತ ಸದಸ್ಯ ರಿಗೂ ಟ್ಯಾಬ್ ನೀಡುವಂತೆ ಕೆಲವು ನಾಮ ನಿರ್ದೇಶಿತ ಸದಸ್ಯರು ಮೇಯರ್ ಅವರಿಗೆ ಮನವಿ ಮಾಡಿದ್ದು, ಮೇಯರ್ ಅವರು ನಾಮ ನಿರ್ದೇಶಿತ ಸದಸ್ಯರಿಗೆ ಟ್ಯಾಬ್ ನೀಡುವ ಸಂಬಂಧ ಪರಿಶೀಲನೆ ನಡೆಸುವಂತೆ ಅಧಿಕಾರಿ ಗಳಿಗೆ ಸೂಚಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿ ಗಳು ಈ ಕುರಿತ ಕಡತವನ್ನು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಅವರಿಗೆ ನೀಡಿ ದ್ದಾರೆ ಎಂದು ಹೆಸರು ಹೇಳ ಲಿಚ್ಛಿಸದ ಬಿಬಿ ಎಂಪಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Related Articles
Advertisement
ಅಪ್‌ಡೇಟ್ ಆಗುವರೇ?: 2017-18ನೇ ಸಾಲಿನಲ್ಲಿ ಐಟಿ ವಿಭಾಗಕ್ಕೆ 4 ಕೋಟಿ ರೂ. ಅನುದಾನ ನೀಡಲಾಗಿತ್ತು. ಇದರಲ್ಲಿ ಉಳಿದ ಅನುದಾನದಲ್ಲಿ 225 ಟ್ಯಾಬ್‌ಗಳನ್ನು ಖರೀದಿಸಲಾಗಿತ್ತು. ಒಂದು ಟ್ಯಾಬ್‌ಗ 38,600 ರೂ., ಪೌಚ್‌ಗೆ 2 ಸಾವಿರ ರೂ., ತಂತ್ರಾಂಶ ಅಳವಡಿಕೆ ಮತ್ತು ಸದಸ್ಯರಿಗೆ ತರಬೇತಿ ನೀಡುವುದು ಎಲ್ಲವೂ ಸೇರಿ ಪ್ರತಿ ಟ್ಯಾಬ್‌ಗ 44 ಸಾವಿರ ರೂ. ವೆಚ್ಚ ಮಾಡಲಾಗಿತ್ತು.
ಪಾಲಿಕೆಯಿಂದ ತೆಗೆದುಕೊಳ್ಳುವ ನಿರ್ಣಯಗಳು, ಆದೇಶಗಳು ಹಾಗೂ ಕೌನ್ಸಿಲ್ ಚರ್ಚೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಟ್ಯಾಬ್‌ನ ಮೂಲಕ ಪಾಲಿಕೆ ಸದಸ್ಯರಿಗೆ ನೀಡಿದರೆ ಆಡಳಿತಾತ್ಮಕ ವಿಷಯಗಳು ಸುಲಭವಾಗಿ ಬಗೆಹರಿ ಯಲಿದೆ ಎಂದು ಟ್ಯಾಬ್ ಪರಿಚಯಿಸಲಾಗಿತ್ತು. ಅಲ್ಲದೆ, ಟ್ಯಾಬ್ ನೀಡುವ ಮೂಲಕ ಇ- ಆಡಳಿತ ಉತ್ತೇಜನ ಹಾಗೂ ಕಾಗದ ರಹಿತ ವ್ಯವಹಾರ ನಡೆಸುವ ಯೋಜನೆಗಳನ್ನು ರೂಪಿಸಿ ಕೊಳ್ಳ ಲಾಗಿತ್ತು. ಆದರೆ, ಇದರಲ್ಲಿ ಬಹುತೇಕ ವಿಚಾರಗಳು ಕಾರ್ಯರೂಪಕ್ಕೆ ಬರಲಿಲ್ಲ. ಕೆಲವು ಸದಸ್ಯರಿಗೆ ಟ್ಯಾಬ್‌ಬಳಸಲು ಬರುವುದಿಲ್ಲ, ಟ್ಯಾಬ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳುತ್ತಿಲ್ಲ ಎನ್ನುವ ದೂರು ಅಧಿಕಾರಿಗಳಿಂದ ಕೇಳಿಬಂದಿದೆ.
ನಾಮನಿರ್ದೇಶಿತ ಸದಸ್ಯರು ಟ್ಯಾಬ್ ಬೇಡಿಕೆ ಇರಿಸಿರುವುದು ನಿಜ. ಆದರೆ, ನಾಮನಿರ್ದೇಶಿತರ ಅಧಿಕಾರ ಅವಧಿ ಕೇವಲ ಎರಡು ತಿಂಗಳಿದೆ. ಹೀಗಾಗಿ, ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. -ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ * ಹಿತೇಶ್ ವೈ.