Advertisement

ಗ್ರಾಮಗಳ ಅಭಿವೃದ್ಧಿಗೆ ಸದಸ್ಯರು ಶ್ರಮಿಸಿ: ಜೋತ್ಸ್ನಾ

12:27 PM Jan 17, 2021 | Team Udayavani |

ಚಿಂಚೋಳಿ: ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸಿಕೊಡುವುದು ನೂತನ ಗ್ರಾಪಂ ಸದಸ್ಯರ ಕೈಯಲ್ಲಿದೆ. ಸದಸ್ಯರು ತಮ್ಮ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿಲ್ಲಾ ಧಿಕಾರಿ ವಿ.ವಿ. ಜೋತ್ಸ್ನಾ ಹೇಳಿದರು.

Advertisement

ಪಟ್ಟಣದ ಸಿ.ಬಿ. ಪಾಟೀಲ ಪದವಿ ಮಹಾವಿದ್ಯಾಲಯದಲ್ಲಿ ತಾಲೂಕು ಆಡಳಿತ ಮತ್ತು ತಾಪಂ ವತಿಯಿಂದ ಗ್ರಾಪಂ ಚುನಾವಣೆಗಳ -2020 ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸುವ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಶಿಕ್ಷಣ ಪ್ರಗತಿಯಾಗಬೇಕು.

ಯಾವ ಯಾವ ಸೌಲಭ್ಯಗಳು ಹಳ್ಳಿಯ ಜನರಿಗೆ ಕೊಡಬೇಕೆಂಬುದು ಕ್ರಿಯಾಯೋಜನೆ ಸಿದ್ಧಪಡಿಸುವುದು ನಿಮ್ಮ ಕೈಯಲ್ಲಿದೆ. ಮಹಿಳೆಯರು ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಸಭೆಯಲ್ಲಿ ಸುಮ್ಮನೆ ಕುಳಿತುಕೊಳ್ಳಬಾರದು. ಕೆಲ ಮಹಿಳೆಯರು ವಿದ್ಯಾವಂತೆಯಾಗಿದ್ದರು ಸಹ ಸಭೆಯಲ್ಲಿ ಸುಮ್ಮನೆ ಕೂರುತ್ತಾರೆ. ಸಾಮಾನ್ಯ ಸಭೆಯಲ್ಲಿ ಸಮಸ್ಯೆಗಳನ್ನು ಗಮನಕ್ಕೆ ತರಬೇಕು ಅವುಗಳನ್ನು ಬಗೆಹರಿಸಿಕೊಳ್ಳುವ ಜವಾಬ್ದಾರಿ ಮಹಿಳಾ ಸದಸ್ಯರ ಮೇಲಿದೆ. ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂದೆ ಬರಬೇಕು.

ಇದನ್ನೂ ಓದಿ:ಕೇಸರದೇವಿ “ನಾಸಾಗೆ ಅಚ್ಚರಿ ತಂದ ಶಕ್ತಿದೇವತೆಯ ನೆಲೆ”

ಚಿಂಚೋಳಿ ತಾಲೂಕಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳ ಮೀಸಲಾತಿ ನಿಗದಿಪಡಿಸುವ ಸಭೆಯಲ್ಲಿ ಹೆಚ್ಚಾಗಿ ಮಹಿಳೆಯರು ಭಾಗವಹಿಸಿರುವುದು ನೋಡಿ ನನಗೆ ತುಂಬಾ ಸಂತಸವಾಗಿದೆ ಎಂದರು. ಅಂಗನವಾಡಿ ಕೇಂದ್ರಗಳಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಹಾಗೂ ಕಿಶೋರಿಯರಿಗೆ ಸಾಕಷ್ಟು ಸೌಲಭ್ಯಗಳು ಅಂಗನವಾಡಿ ಮೂಲಕ ಸರಕಾರ ನೀಡುತ್ತಿದೆ. ಗ್ರಾಪಂ ಸದಸ್ಯರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಮಹಿಳೆಯರಿಗೆ ತಿಳಿಸಿದರು.

Advertisement

ಸೇಡಂ ಸಹಾಯಕ ಆಯುಕ್ತ ರಮೇಶ ಕೋಲಾರ, ತಹಶೀಲ್ದಾರ್‌ ಬಸವರಾಜ ಬೆಣ್ಣೂರ, ತಾಪಂ ಇಒ ಅನಿಲಕುಮಾರರಾಠೊಡ, ಸಿಪಿಐ ಮಹಾಂತೇಶ ಪಾಟೀಲ,  ಪುರಸಭೆ ಮುಖ್ಯಾಧಿ ಕಾರಿ ಅಭಯಕುಮಾರ ಹಬೀಬ, ಶಿರಸ್ತೇದಾರ ವೆಂಕಟೇಶ ದುಗ್ಗನ್‌, ಶೋಯಬ್‌, ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ ಭಾಗವಹಿಸಿದ್ದರು. ಮಲ್ಲಿಕಾರ್ಜುನ ಪಾಲಾಮೂರ ಸ್ವಾಗತಿಸಿದರು. ತಾಪಂ ಯೋಜನಾ ಧಿಕಾರಿ ಶಂಕರ ರಾಠೊಡ ವಂದಿಸಿದರು. ಗ್ರಾಪಂ ನೂತನ ಸದಸ್ಯರು, ಗ್ರಾಪಂ ಅಭಿವೃದ್ಧಿ ಅ ಧಿಕಾರಿಗಳು, ಕಂದಾಯ ಇಲಾಖೆ ಮತ್ತು ತಾಪಂ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next