Advertisement

ಅನರ್ಹತೆ ಭೀತಿಯಲಿ 7 “ಕ್ಕೆ ನಗರಸಭೆ ಸದಸ್ಯರು

02:37 PM Nov 29, 2021 | Team Udayavani |

ಚಿಕ್ಕಬಳ್ಳಾಪುರ: ನಗರಸಭೆಯಲ್ಲಿ ಬಿಜೆಪಿ ಬೆಂಬಲಿಸಿದ್ದ ಕಾಂಗ್ರೆಸ್‌ನ 7 ಸದಸ್ಯರ ರಾಜಕೀಯ ಭವಿಷ್ಯ ನಿರ್ಣಾಯಕ ಹಂತಕ್ಕೆ ತಲುಪಿದೆ. ವಿಪ್‌ ಉಲ್ಲಂಘನೆ ಪ್ರಕರಣ ಇತ್ಯರ್ಥಗೊಳಿಸುವಂತೆ ಡೀಸಿಗೆ ಹೈಕೋರ್ಟ್‌ 4 ವಾರ ಗಡುವು ನೀಡಿದೆ. ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಅಧಿ ಕಾರದ ಚುಕ್ಕಾಣಿ ಹಿಡಿಯಲು ಸ್ಪಷ್ಟ ಬಹುಮತ ಇದ್ದರೂ ಅಧಿ ಕಾರಕ್ಕಾಗಿ ವಿಪ್‌ ಉಲಂಘಿಸಿ ಅಡ್ಡಮತದಾನ ಮಾಡಿದ ಕಾಂಗ್ರೆಸ್‌ ಪಕ್ಷದ 7 ಸದಸ್ಯರ ಭವಿಷ್ಯ ಇನ್ನೂ 4 ವಾರದೊಳಗೆ ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ. ಒಟ್ಟು 31 ಸದಸ್ಯರ ಸ್ಥಾನ ಹೊಂದಿರುವ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಭಾರೀ ಪೈಪೋಟಿ ನಡೆದು ಕಾಂಗ್ರೆಸ್‌ 16 ಸ್ಥಾನಗಳಲ್ಲಿ ಜಯಗಳಿಸಿತ್ತು.

Advertisement

ಜೆಡಿಎಸ್‌ 2, ಪಕ್ಷೇತರ 4, ಬಿಜೆಪಿ 9 ಸ್ಥಾನಕ್ಕೆ ತೃಪ್ತಿ ಪಡೆಯಬೇಕಾಯಿತು. ಆದರೆ, ಹೆಚ್ಚು ಸ್ಥಾನ ಹೊಂದಿದ್ದ ಕಾಂಗ್ರೆಸ್‌ ಅಧಿ ಕಾರ ಗದ್ದುಗೆ ಏರುವ ಆಸೆಯಲ್ಲಿತ್ತು. ಆದರೆ, ಕಾಂಗ್ರೆಸ್‌ ಮುಖಂಡರ ಆಸೆಗೆ ಅಪರೇಷನ್‌ ಕಮಲ ತಣ್ಣೀರು ಎರಚಿತು. ಕಾಂಗ್ರೆಸ್‌ನಿಂದ ಗೆಲುವು ಸಾ ಧಿಸಿದ 7 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಅಧ್ಯಕ್ಷ, ಉಪಾಧ್ಯಕ್ಷರ ಚುನಾವ ಣೆಯಲ್ಲಿ ಬೆಂಬಲಿಸಿದ್ದರು. ಇದರಿಂದ ನಗರಸಭೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯುವುದರಲ್ಲಿ ಸಫಲವಾಗಿತ್ತು.

ಡೀಸಿ ವಿರುದ್ಧ “ಕೈ’ ಆಕ್ರೋಶ: ದಿಢೀರ್‌ ರಾಜಕೀಯ ಬೆಳವಣಿಗೆಯಿಂದ ಆಕ್ರೋಶಗೊಂಡ ಕಾಂಗ್ರೆಸ್‌ ನಾಯಕರು, ಬಿಜೆಪಿ ಬೆಂಬಲಕ್ಕೆ ನಿಂತ ಏಳು ಮಂದಿ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಕೇಶವರೆಡ್ಡಿ ಅವರು, ಡೀಸಿ ನ್ಯಾಯಾ ಲಯದ ಮೊರೆ ಹೋದರು.

ಇದನ್ನೂ ಓದಿ;- ಶಿರಸಿಯಲ್ಲಿ ಗಾನ ಸೇವಾ ಕಾರ್ಯಕ್ರಮ: ಜಯತೀರ್ಥ ಮೇವುಂಡಿ ಭಾಗಿ

ಒಂದು ವರ್ಷವಾದ್ರೂ ಡೀಸಿ ಕೋರ್ಟ್‌ನಲ್ಲಿ ಪ್ರಕರಣ ಇತ್ಯ ರ್ಥವಾಗಿಲ್ಲ. ಇದರಿಂದ ಅಸಮಾಧಾನಗೊಂಡ ಮುಖಂಡರು, ಡೀಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

Advertisement

ಒತ್ತಡಕ್ಕೆ ಮಣಿದು ವಿಳಂಬ: ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ 6 ತಿಂಗಳಲ್ಲಿ ಪ್ರಕರಣ ಇತ್ಯರ್ಥ ಗೊಳಿಸಬೇಕು. ಆದರೆ, ಜಿಲ್ಲಾ ಧಿಕಾರಿ ಒತ್ತಡಕ್ಕೆ ಮಣಿದು ಇತ್ಯರ್ಥಗೊಳಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪ ಮಾಡಲಾ ರಂಭಿಸಿದರು. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇಂತಹ ಪ್ರಕರಣ ದಲ್ಲಿ ಜಿಲ್ಲಾ ಧಿಕಾರಿ ಪûಾಂತರಿಗಳನ್ನು ಅನರ್ಹ ಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಚಿಕ್ಕ ಬಳ್ಳಾಪುರ ಜಿಲ್ಲಾ ಧಿಕಾರಿ ವಿಳಂಬ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಅಸಮಾಧಾನ ವ್ಯಕ್ತಪಡಿಸಿದರು.

ವಿಪ್‌ ಉಲ್ಲಂಘನೆ ಪ್ರಕರಣ ಇತ್ಯರ್ಥಪಡಿಸುವಲ್ಲಿ ಜಿಲ್ಲಾಧಿ ಕಾರಿಗಳ ವಿಳಂಬ ಧೋರಣೆ ಬಗ್ಗೆ ಕಾಂಗ್ರೆಸ್‌ ಮುಖಂಡರು ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಈ ಕುರಿತು ವಿಚಾರಣೆ ನಡೆಸಿರುವ ನ್ಯಾಯಾಲಯ ನಾಲ್ಕು ವಾರದೊಳಗೆ ಇತ್ಯರ್ಥಗೊಳಿಸಬೇಕು ಎಂದು ಸೂಚನೆ ನೀಡಿದೆ. ಇದರಿಂದ ಮುಂದಿನ 4 ವಾರಗಳ ಅವ ಧಿಯಲ್ಲಿ ಡೀಸಿ ಕೋರ್ಟ್‌ನಿಂದ ಹೊರಬೀಳುವ ಆದೇಶದತ್ತ ಜನರ ದೃಷ್ಟಿ ಕೇಂದ್ರೀಕೃತವಾಗಿದೆ.

“ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ವಿಪ್‌ ಉಲಂಘಿಸಿ ಅಡ್ಡಮತದಾನ ಮಾಡಿದ 7 ನಗರಸಭಾ ಸದಸ್ಯರ ವಿರುದ್ಧ ಡೀಸಿಗೆ ದೂರು ನೀಡಲಾಗಿತ್ತು. ಕಾಲಮಿತಿಯೊಳಗೆ ಪ್ರಕರಣ ಇತ್ಯರ್ಥಪಡಿಸಿದ ಕಾರಣ, ಹೈಕೋರ್ಟ್‌ ಮೊರೆ ಹೋಗುವಂತಾಯಿತು. ಮುಂದಿನ 4 ವಾರದ ಅವಧಿ ಯಲ್ಲಿ ಪ್ರಕರಣ ಇತ್ಯರ್ಥಗೊಳಿಸುವಂತೆ ಹೈಕೋರ್ಟ್‌ ಸೂಚಿಸಿದೆ. ಅದರಂತೆ ನಮಗೆ ನ್ಯಾಯ ದೊರೆಯುವ ವಿಶ್ವಾಸ ಇದೆ.“- ಕೆ.ಎನ್‌.ಕೇಶವರೆಡ್ಡಿ, ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್‌ ಸಮಿತಿ, ಚಿಕ್ಕಬಳ್ಳಾಪುರ.

Advertisement

Udayavani is now on Telegram. Click here to join our channel and stay updated with the latest news.

Next