Advertisement

ಸದಸ್ಯರ ಅಭಿವೃದ್ಧಿ ಯೋಜನೆಯ ಉದ್ದೇಶ: ಡಾ|ವೀರೇಂದ್ರ ಹೆಗ್ಗಡೆ

01:58 AM Dec 29, 2019 | mahesh |

ಹೆಬ್ರಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಲ ನೀಡುವ ಸಂಘವಲ್ಲ. ಸಂಘದ ಸದಸ್ಯರ ಅಭಿವೃದ್ಧಿಯೇ ಮೂಲ ಉದ್ದೇಶ. ಯೋಜನೆಯ ಮೂಲಕ ಹೆಚ್ಚಿನ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಈ ಬಾರಿ ಕಾರ್ಕಳ ವಲಯದಲ್ಲಿ 24 ಕೋಟಿ ರೂ. ಉಳಿತಾಯ ಮಾಡುವುದರ ಜತೆಗೆ ಹೆಬ್ರಿಯಲ್ಲಿಯೇ 4.4 ಕೋ.ರೂ.ಗಳನ್ನು ಸಂಘದ ಸದಸ್ಯರು ಉಳಿತಾಯ ಮಾಡಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ಶನಿವಾರ ಹೆಬ್ರಿ ತಾಣ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಬಳಿ ನಡೆದ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಮತ್ತು ಭಜನ ಸಂಭ್ರಮ ಕಾರ್ಯಕ್ರಮ ದಲ್ಲಿ ಮಾತನಾಡಿದರು. ಗ್ರಾಮಾಭಿವೃದ್ಧಿ ಯೋಜನೆಯಿಂದ ಆರ್ಥಿಕ ಸುಧಾರಣೆ ಮಾತ್ರವಲ್ಲದೆ ಕೃಷಿ, ಹೈನುಗಾರಿಕೆ, ಮಧ್ಯವ್ಯರ್ಜನ ಶಿಬಿರ ದಂತಹ ಕಾರ್ಯಕ್ರಮಗಳು ಜನರ ಬದಕಿನ ಬದಲಾವಣೆಗೆ ದಾರಿದೀಪವಾಗಿವೆ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು.

ಸಮಾಜಸೇವೆಯಲ್ಲಿ ತೃಪ್ತಿ
ಕುಂದಾಪುರ ತಾ.ಜ.ಜಾ.ವೇ.ಯ ನಿಕಟಪೂರ್ವ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಸಮ್ಮಾನ ಸ್ವೀಕರಿಸಿ ಮಾತನಾಡಿ, ರಾಜಕೀಯ, ಶಿಕ್ಷಣ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ನನಗೆ ಸಮಾಜಸೇವೆಯಲ್ಲಿ ಕಂಡಷ್ಟು ತೃಪ್ತಿ ಬೇರೆಲ್ಲೂ ಸಿಕ್ಕಿಲ್ಲ. ಸರಕಾರ ಮಾಡ ಲಾಗದ ಕೆಲಸವನ್ನು ಡಾ| ಹೆಗ್ಗಡೆಯ ವರು ಮಾಡುತ್ತಿದ್ದಾರೆ ಎಂದರು.

ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಎಚ್‌.ಕೆ. ಸುಧಾಕರ್‌, ಗಣೇಶ್‌ ಬಿ. ಪ್ರಗತಿಬಂಧು ಸ್ವಸಹಾಯ ಒಕ್ಕೂಟದ ವಲಯಾಧ್ಯಕ್ಷ ಮುದ್ದುಕೃಷ್ಣ, ಶ್ರೀ ಧ.ಮಂ. ಭಜನ ಪರಿಷತ್‌ ಹೆಬ್ರಿ ವಲಯ ಸಂಯೋಜಕ ಎಸ್‌. ನಾರಾಯಣ ಉಪಸ್ಥಿತರಿದ್ದರು. ಯೋಜನಾಧಿಕಾರಿ ಭಾಸ್ಕರ್‌ ವಿ ವರದಿ ವಾಚಿಸಿದರು. ಹೆಬ್ರಿ ವಲಯ ಮೇಲ್ವಿಚಾರಕ ಪ್ರವೀಣ್‌ ಸ್ವಾಗತಿಸಿ, ಬಾಲಕೃಷ್ಣ ನಾಯಕ್‌ ವಂದಿಸಿದರು. ಶಿಕ್ಷಕ ಪ್ರಕಾಶ್‌ ಪೂಜಾರಿ ನಿರ್ವಹಿಸಿದರು.

ಅನಂತ ಪದ್ಮನಾಭ ದೇವಸ್ಥಾನದಿಂದ ತಾಣ ಅಂಬಡಿ ಗದ್ದೆಯವೆರೆಗೆ ಡಾ| ಹೆಗ್ಗಡೆ ಅವರು ಬೆಳ್ಳಿಯ ರಥದ ಮೂಲಕ ಮೆರವಣಿಗೆಯಲ್ಲಿ ಸಾಗಿಬಂದರು. 50 ಸಾವಿರಕ್ಕೂ ಹೆಚ್ಚು ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next