Advertisement
ತರುಣಿಯ ಮೇಲೆ ಚಳಿಯ ಲೀಲೆ!ಅಮೆರಿಕದ ಮಧ್ಯಪ್ರಾಚ್ಯ ಪ್ರದೇಶ ಸ್ಟೇಟ್ ಆಫ್ ಲೋವಾದ ನಿವಾಸಿ, ಟೇಲರ್ ಸ್ಕಾಲನ್ ಅವರು ಮಹಾ ಚಳಿ ಆವರಿಸಿದ್ದ ಸಂದರ್ಭದಲ್ಲಿ ಸ್ನಾನ ಮುಗಿಸಿ ಹೊರ ಬಂದ ಕೂಡಲೇ ತಮ್ಮ ಕೂದಲಿನ ನೀರು ಕ್ಷಣಾರ್ಧದಲ್ಲಿ ಮಂಜುಗಡ್ಡೆಯಾಗಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿದ್ದು, ಅದೀಗ ವೈರಲ್ ಆಗಿದೆ. ಕೂದಲಿನ ನೀರು ಮಂಜುಗಡ್ಡೆಯಾಗಿದ್ದರಿಂದ ಅವು ನೆಟ್ಟಗೆ ತಂತಿಯಂತೆ ನಿಂತಿ ರುವುದು ಅವರಿರುವ ಪ್ರಾಂತ್ಯದ ಹವಾ ಮಾನವನ್ನು ವಿಷದೀಕರಿಸುತ್ತದೆ. ಟ್ವಿಟರ್‌ನಲ್ಲಿ taylor_scallon ಹ್ಯಾಂಡಲ್ ಬಾರ್‌ನಡಿ ಈ ವಿಡಿಯೋ ನೋಡಬಹುದು.