Advertisement

ಮೆಲ್ಬರ್ನ್ ಟೆಸ್ಟ್: ಎರಡನೇ ದಿನದಾರಂಭದಲ್ಲಿ ಭಾರತದ ಎರಡು ವಿಕೆಟ್ ಪತನ

08:10 AM Dec 27, 2020 | keerthan |

ಮೆಲ್ಬರ್ನ್: ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಆತಿಥೇಯ ಆಸೀಸ್ ಮೊದಲ ಸೆಶನ್ ಮೇಲುಗೈ ಸಾಧಿಸುವಲ್ಲಿ ಸಫಲವಾಗಿದೆ. ಬಿಗು ಬೌಲಿಂಗ್ ದಾಳಿ ನಡೆಸಿದ ಪ್ಯಾಟ್ ಕಮಿನ್ಸ್ ಇಂದು ಎರಡು ವಿಕೆಟ್ ಪಡೆದು ಮಿಂಚಿದರು.

Advertisement

ಒಂದು ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಭಾರತಕ್ಕೆ ಗಿಲ್ ಮತ್ತು ಪೂಜಾರ ಉತ್ತಮ ಅಡಿಪಾಯ ಒದಗಿಸುವ ಪ್ರಯತ್ನ ನಡೆಸಿದರು. ತಂಡದ ಮೊತ್ತ 61 ರನ್ ಆಗುವಾಗ 45 ರನ್ ಗಳಿಸಿದ ಗಿಲ್ ಔಟಾದರು. ಎರಡನೇ ಓವರ್ ಅಂತರದಲ್ಲಿ 17 ರನ್ ಗಳಿಸಿದ್ದ ಪೂಜಾರಾ ಕೂಡಾ ವಿಕೆಟ್ ಒಪ್ಪಿಸಿದರು.

43 ಓವರ್ ಬಳಿಕ ಭಾರತ ಮೂರು ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದೆ. ನಾಯಕ ಅಜಿಂಕ್ಯ ರಹಾನೆ 16 ರನ್ ಮತ್ತು ಹನುಮ ವಿಹಾರಿ 16 ರನ್ ಗಳಿಸಿ ಆಡುತ್ತಿದ್ದಾರೆ. ಭಾರತ 90 ರನ್ ಹಿನ್ನಡೆಯಲ್ಲಿದೆ.

ಆಸೀಸ್ ಪರ ಪ್ಯಾಟ್ ಕಮಿನ್ಸ್ ಎರಡು, ಸ್ಟಾರ್ಕ್ ಒಂದು ವಿಕೆಟ್ ಪಡೆದರು. ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 195 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next