Advertisement

ಟ್ರಂಪ್‌ ಪತ್ನಿಯರ “ಫ‌ಸ್ಟ್‌ ಲೇಡಿ’ಜಗಳ

07:35 AM Oct 11, 2017 | Team Udayavani |

ವಾಷಿಂಗ್ಟನ್‌: ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ಮೊದಲ ಪ್ರಜೆ (ರಾಷ್ಟ್ರಾಧ್ಯಕ್ಷ) ಆಗಿರುವುದು ಈಗ ಅವರ ಹಾಲಿ ಮತ್ತು ಮಾಜಿ ಪತ್ನಿಯ ನಡುವೆ ಹೊಸ ಪೈಪೋಟಿ ಹುಟ್ಟುಹಾಕಿದೆ. ಟ್ರಂಪ್‌ ಮೊದಲ ಪತ್ನಿ ಸೋಮವಾರ ತಾವೇ “ಪ್ರಥಮ ಮಹಿಳೆ’ ಎಂದು ಹೇಳಿರುವುದು ಮೂರನೇ ಪತ್ನಿ ಮೆಲಾನಿಯಾ ಟ್ರಂಪ್‌ರನ್ನು ಕೆರಳಿಸಿದೆ. ತಾವು ಬರೆದ “ರೈಸಿಂಗ್‌ ಟ್ರಂಪ್‌’ ಪುಸ್ತಕದ ಲೋಕಾರ್ಪಣೆ ವೇಳೆ, ಇವಾನಾ, ತಾವು ಟ್ರಂಪ್‌ ಅವರ ಮೊದಲ ಪತ್ನಿ ಆದ್ದರಿಂದ ತಮಗೇ ಮೊದಲ ಮಹಿಳೆಯೆಂಬ ಹೆಗ್ಗಳಿಕೆ ಸಲ್ಲಬೇಕು ಎಂದಿದ್ದಾರೆ. ಇದಕ್ಕೆ ಸಿಡಿಮಿಡಿಗೊಂಡ ಮೆಲಾನಿಯಾ, “ಪುಸ್ತಕದ ಉತ್ತಮ ಮಾರಾಟಕ್ಕಾಗಿ ಇವಾನಾ ಈ ರೀತಿ ಹೇಳಿದ್ದಾರೆ’ ಎಂದು ಛೇಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next