Advertisement

ಮೇಕೆದಾಟು ಆರಂಭದ ದಿನಾಂಕ ಪ್ರಕಟಿಸಲು ಆಗ್ರಹ

12:14 PM Jul 20, 2021 | Team Udayavani |

ರಾಮನಗರ: ರಾಜ್ಯ ಶಾಸನ ಸಭೆಯಆರಂಭಕ್ಕೂ ಮುನ್ನ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳುವ ದಿನಾಂಕವನ್ನು ಸಿಎಂಬಿ.ಎಸ್‌.ಯಡಿಯೂರಪ್ಪ ಅವರು ಪ್ರಕಟಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಎಚ್ಚರಿಸಿದರು.

Advertisement

ನಗರದ ಐಜೂರು ವೃತ್ತದಲ್ಲಿ ಮೇಕೆದಾಟು ಯೋಜನೆಗಾಗಿ ಒತ್ತಾಯಿಸಿ, ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಸುದ್ದಿಗಾರರೊಂದಿಗೆಮಾತನಾಡಿ, ಮೇಕೆದಾಟು ರಾಜ್ಯದ ಹಕ್ಕು, ಇದಕ್ಕಾಗಿ ರಾಜ್ಯದ ಎಲ್ಲಾಮೂಲಗಳಲ್ಲೂಹೋರಾಟನಡೆಯಲಿದೆ. 2020ನೇ ಸಾಲಿನಲ್ಲಿ ಯೋಜನಾ ವರದಿಯನ್ನು ಆನ್‌ಲೈನ್‌ ಮೂಲಕ ಕೇಂದ್ರಕ್ಕೆಸಲ್ಲಿಸಿದ್ದಾರೆ. ಆದರೆ, ಈ ಹೊತ್ತಿನವರೆಗೂ ಯೋಜನೆ ಮಂಜೂರಾತಿಗೆ ಪ್ರಾಮಾಣಿಕಪ್ರಯತ್ನ ಮಾಡಿಲ್ಲ. ರಾಜ್ಯದ ಯಾವ ಸಚಿವರು, ಸಂಸದರಿಗೂ ಈ ವಿಚಾರದಲ್ಲಿ ಕಾಳಜಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಿಗಳ ಬಳಿ ಚರ್ಚೆ ಏಕಿಲ್ಲ?: ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಇತ್ತೀಚೆಗೆ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಅವರು ಮೇಕೆದಾಟು ಯೋಜನೆ ಬಗ್ಗೆ ಪ್ರಸ್ತಾಪ ಮಾಡಲಿಲ್ಲ, ಪ್ರಧಾನಿಗಳಿಂದ ಸ್ಪಷ್ಟ ಭರವಸೆ ಪಡೆಯಲಿಲ್ಲ. ಆದರೂ ಸಿಎಂ ಮೇಕೆದಾಟುಯೋಜನೆ ಆರಂಭಿಸುವುದಾಗಿ ಜನರಿಗೆ ಸುಳ್ಳು ಹೇಳಿದ್ದಾರೆ.

ಸಿಎಂ ಯಡಿಯೂರಪ್ಪ ಅವರು ತಮ್ಮ ಅಧಿಕಾರ ಉಳಿಸಿಕೊಳ್ಳಲು ಸರ್ಕಸ್‌ ಮಾಡುತ್ತಿದ್ದಾರೆ. ಅವರು ತಮ್ಮ ಅಧಿಕಾರಕ್ಕಿಂತ ಮೇಕೆದಾಟು ಯೋಜನೆ ಮುಖ್ಯ ಎಂಬುದನ್ನು ಅರಿಯಬೇಕು ಎಂದರು.

ಎಲ್ಲರನ್ನು ಪಾಸ್‌ ಮಾಡಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬೇಡ ಎಂದು ತಾವು ನಿರಂತರವಾಗಿ ಆಗ್ರಹಿಸಿದ್ದಾಗಿ,ಆದರೆ, ಶಿಕ್ಷಣ ಮಂತ್ರಿ ಸುರೇಶ್‌ಕುಮಾರ್‌ ಪರೀಕ್ಷೆ ಮಾಡೇ ತೀರುವುದಾಗಿ ಸರ್ಕಸ್‌ ಆರಂಭಿ ಸಿದ್ದಾರೆ. ಎಲ್ಲರನ್ನು ಪಾಸು ಮಾಡುವುದಿದ್ದರೆಪರೀಕ್ಷೆ ಏಕೆ ಬೇಕಿತ್ತು ಎಂದು ವಾಟಾಳ್‌ ಪ್ರಶ್ನಿಸಿದರು. ಪರೀಕ್ಷೆಗೆ ಹಾಜರಾದವರು, ಹಾಜರಾಗದಿರುವವರನ್ನು ಪಾಸು ಮಾಡಿ ಎಂದು ಅವರು ಒತ್ತಾಯಿಸಿದರು. ಕನ್ನಡ ಚಳವಳಿ ವಾಟಾಳ್‌ಪಕ್ಷದ ಪಾರ್ಥಸಾರಥಿ, ಕರುನಾಡು ಸೇನೆಯಪ್ರಮುಖರಾದ ಜಗದೀಶ್‌, ಸಿ.ಎಸ್‌.ಜಯ ಕುಮಾರ್‌, ಜಯರಾಮು ಭಾಗವಹಿಸಿದ್ದರು.

Advertisement

 

ಕೆ.ಜಿ.ಎಫ್ ನಗರಸಭೆ ಸೂಪರ್‌ ಸೀಡ್‌ಒತ್ತಾಯ :

ಕೆ.ಜಿ.ಎಫ್ಕರ್ನಾಟಕದ ನೆಲ. ಆದರೆ ಅಲ್ಲಿನ ನಗರಸಭೆ ತಮಿಳಿಗರ ಪಾಲಾಗಿದೆ. ತಮಿಳು ಭಾಷೆಯ ನಾಮಫ‌ಲಕವನ್ನು ಹಾಕಿದ್ದಾರೆ. ರಾಜ್ಯ ಸರ್ಕಾರಕೂಡಲೆ ಇತ್ತ ಗಮನ ಹರಿಸಿ ನಾಮ ಫ‌ಲಕವನ್ನು ತೆಗೆಯಬೇಕು. ಅಲ್ಲಿನ ನಗರಸಭೆಯನ್ನು ಸೂಪರ್‌ ಸೀಡ್‌ ಮಾಡಬೇಕು.ಕನ್ನಡನಾಡು, ನುಡಿಯ ರಕ್ಷಣೆ ಸರ್ಕಾರದ್ದು ಎಂದು ವಾಟಾಳ್‌ ನಾಗರಾಜ್‌ ಗುಡುಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next