Advertisement

ಮೀ ಟೂ ಹೆಣ್ಣಿಗಷ್ಟೆ ಅಲ್ಲ ಗಂಡಿಗೂ ಮುಜುಗರ : ಜಯಮಾಲಾ 

06:20 AM Nov 05, 2018 | |

ಹಾಸನ: ಮೀ ಟೂ ಪ್ರಕರಣಗಳು ಮಹಿಳೆಯರಿಗಷ್ಟೇ ಅಲ್ಲ. ಪುರುಷರಿಗೂ ಮುಜುಗರ ತರುತ್ತಿವೆ ಎಂದು ಸಚಿವೆ ಡಾ.ಜಯಮಾಲಾ ತಿಳಿಸಿದರು.

Advertisement

ಹಾಸನಾಂಬೆಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹೆಣ್ಣಿಗೆ ಪದೇ ಪದೆ ಮುಜುಗರಕ್ಕೊಳಪಡಿಸುವ ಪ್ರಕರಣಗಳು ನಡೆಯುತ್ತಲೇ ಬಂದಿವೆ. ನ್ಯಾಯಾಲಯಕ್ಕೆ ಹೋದರೂ ಸಾಕ್ಷಿಗಳನ್ನು ಒದಗಿಸಲಾಗದೆ ಮತ್ತಷ್ಟು ಮುಜುಗರವನ್ನು ಮಹಿಳೆಯರು ಅನುಭವಿಸುವಂತಾಗಿದೆ. ಇದು ಪುರುಷರಿಗೂ ಅನ್ವಯಿಸುತ್ತದೆ. ಹಾಗಾಗಿ ಅವರವರೇ ತೀರ್ಮಾನ ಮಾಡಿಕೊಳ್ಳಬೇಕಾಗುತ್ತದೆ ಎಂದರು.

ಇದಕ್ಕೂ ಮೊದಲು ಅವರು ಹಾಸನಾಂಬೆಯ ದರ್ಶನ ಪಡೆದರು. ಹಾಸನಾಂಬೆಯ ದರ್ಶನ ಪಡೆಯಬೇಕೆಂಬುದು ತನ್ನ ಬಹಳ ವರ್ಷಗಳ ಬಯಕೆಯಾಗಿತ್ತು. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆಯನ್ನು ಪ್ರಥಮ ಬಾರಿಗೆ ತುಂಬಾ ಹತ್ತಿರದಿಂದ ನೋಡಲು ಅವಕಾಶ ಸಿಕ್ಕಿದ್ದು ತನ್ನ ಪುಣ್ಯ ಎಂದು ಹರ್ಷ ವ್ಯಕ್ತಪಡಿಸಿದರು. ಚಿತ್ರನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಸಹ ದೇವಾಲಯಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next