ನವದೆಹಲಿ: ಆ್ಯಂಟಿಗುವಾದಿಂದ ಕ್ಯೂಬಾಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ವಜ್ರೋದ್ಯೋಮಿ ಮೆಹುಲ್ ಚೋಕ್ಸಿ ಕೆರಿಬಿಯನ್ ದ್ವೀಪರಾಷ್ಟ್ರ ಡೊಮಿನಿಕ್ ಗಣರಾಜ್ಯದಲ್ಲಿ ಬಂಧಿಸಿದ್ದು, ಏತನ್ಮಧ್ಯೆ ಜೋಕ್ಸಿಯನ್ನು ಗಡಿಪಾರು ಮಾಡುವುದನ್ನು ಡೊಮಿನಿಕಾ ಕೋರ್ಟ್ ತಡೆ ಹಿಡಿದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿದೆ: ಅತ್ಯಾಚಾರ ಆರೋಪಿಗಳ ವಿರುದ್ಧ ಸಿಎಂ ಗುಡುಗು
ಪಂಜಾಬ್ ನ್ಯಾಷನ್ ಬ್ಯಾಂಕ್ ಗೆ ವಂಚಿಸಿದ್ದ ವಜ್ರೋದ್ಯೊಮಿ ಮೆಹುಲ್ ಚೋಕ್ಸಿಯನ್ನು ಡೊಮಿನಿಕ್ ನಲ್ಲಿ ಬಂಧಿಸಲಾಗಿತ್ತು. ಆತನನ್ನು ಆ ರಾಷ್ಟ್ರದಿಂದಲೇ ನೇರವಾಗಿ ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿತ್ತು.
ಅಷ್ಟೇ ಅಲ್ಲ ಮೆಹುಲ್ ಚೋಕ್ಸಿಯನ್ನು ನೇರವಾಗಿ ಭಾರತಕ್ಕೆ ಹಸ್ತಾಂತರಿಸುವಂತೆ ಆ್ಯಂಟಿಗುವಾ ಮತ್ತು ಬಾರ್ಬುಡಾದ ಪ್ರಧಾನಿ ಗ್ಯಾಸ್ಟನ್ ಬ್ರೌನ್ ಕೂಡಾ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಿ ಎಂದು ಡೊಮಿನಿಕ್ ಗಣರಾಜ್ಯಕ್ಕೆ ಮನವಿ ಮಾಡಿದ್ದರು.
ಪ್ರಧಾನಿ ಗ್ಯಾಸ್ಟನ್ ಬ್ರೌನ್ ಮನವಿ ಬೆನ್ನಲ್ಲೇ ಚೋಕ್ಸಿ ಪರ ವಕೀಲರು ಡೊಮಿನಿಕಾ ಕೋರ್ಟ್ ನಲ್ಲಿ ಆಕ್ಷೇಪ ಸಲ್ಲಿಸಿದ್ದರು. ತನ್ನ ಕಕ್ಷಿದಾರ, ಉದ್ಯಮಿ ಚೋಕ್ಸಿಯನ್ನು ಭಾರತಕ್ಕೆ ಕಳುಹಿಸಲು ಸಾಧ್ಯವಿಲ್ಲ, ಯಾಕೆಂದರೆ ಅವರು ಕೆಲವು ವರ್ಷಗಳಿಂದ ಅವರು ಭಾರತದ ಪ್ರಜೆಯಾಗಿಲ್ಲ ಎಂದು ವಾದಿಸಿರುವುದಾಗಿ ವರದಿ ತಿಳಿಸಿದೆ. ಈ ಪ್ರಕರಣದ ವಿಚಾರಣೆ ಶುಕ್ರವಾರ (ಮೇ 28) ಡೊಮಿನಿಕಾ ಕೋರ್ಟ್ ನಲ್ಲಿ ನಡೆಯಲಿದೆ ಎಂದು ವಿವರಿಸಿದೆ.