Advertisement

Mehndi campaign: ಪ್ರಧಾನಿ ಮೋದಿ ಕರೆ: ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ  

12:08 AM Apr 06, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಯೋಜನೆ ರೂಪಿಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ’ ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ ಗ್ಯಾರಂಟಿ ಬಗೆಗಿನ ಮಾಹಿತಿಯನ್ನು ಮನೆಮನೆಗೆ ತಲುಪಿಸುವಂತೆ ಮನವಿ ಮಾಡಿದ್ದಾರೆ.

Advertisement

ಕಾರ್ಯಕರ್ತರ ಜತೆಗೆ ಆಯೋಜಿಸಿದ್ದ “ಮೇರಾ ಬೂತ್‌ ಸಬ್‌ ಸೆ ಮಜಬೂತ್‌’ ಆನ್‌ಲೈನ್‌ ಸಂವಾದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಸುಪ್ರೀತ್‌ ಭಂಡಾರಿ ಜತೆ ಮಾತನಾಡಿ ಈ ಸೂಚನೆ ನೀಡಿದರು. ಪ್ರತಿ ಬೂತ್‌ನಲ್ಲೂ ಮಹಿಳಾ ಮತದಾರರು ನಿರ್ಣಾಯಕರು. ಅವರನ್ನು ತಲುಪಲು ಕರ್ನಾಟಕದಲ್ಲಿ ನಡೆಸಿರುವ ಕಾರ್ಯ ಯೋಜನೆ ಏನೆಂದು ಪ್ರಶ್ನಿಸಿ, ಮೆಹಂದಿ ಅಭಿಯಾನ ನಡೆಸುವಂತೆ ಸಲಹೆ ನೀಡಿದರು. ಜತೆಗೆ ಉಡುಪಿ ಜತೆಗಿನ ತಮ್ಮ ಅವಿನಾಭಾವ ಸಂಬಂಧವನ್ನು ಮೆಲಕು ಹಾಕಿದ ಮೋದಿ, ದ್ವಾರಕೆ ಹಾಗೂ ಉಡುಪಿಯ ನಂಟನ್ನು ಕಾರ್ಯಕರ್ತರಿಗೆ ವಿವರಿಸಿದರು.

ಮನೆ ಮನೆಗಳ ಮುಂದೆ ಕಮಲದ ರಂಗೋಲಿ ಹಾಕುವುದು ಒಂದು ಕಡೆಗಾದರೆ, ಮಹಿಳಾ ಮತದಾರರನ್ನು ಸೆಳೆಯಲು ಮೆಹಂದಿ ಅಭಿಯಾನ ನಡೆಸಿ. ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ ಬಿಜೆಪಿಯನ್ನು ಪ್ರತಿಮನೆಗೂ ತಲುಪಿಸಿ. ಇದರ ಜತೆಗೆ ವೃತ್ತಿ ನಿರತರು, ಯುವಕರನ್ನೂ ಸಂಪರ್ಕ ಮಾಡಿ. ಮೊದಲ ಬಾರಿ ಮತದಾನ ಮಾಡುವವರಿಗೆ ಮುದ್ರಾ ಯೋಜನೆಯ ಯಶಸ್ಸಿನ ಬಗ್ಗೆ ತಿಳಿಸಿ. ಫ‌ಲಾನುಭವಿಗಳ ಅನುಭವ ಕಥನವನ್ನು ಹೊಂದಿದ ರೀಲ್ಸ್‌ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಿ ಎನ್ನುವ ಮೂಲಕ ಲೋಕಸಭಾ ಸಮರಕ್ಕೆ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಲೋಕಸಭೆಯನ್ನು ಗೆಲ್ಲಬೇಕಿದ್ದರೆ ಮೊದಲು ಬೂತ್‌ ಗೆಲ್ಲಬೇಕು. ಪ್ರತಿ ಬೂತ್‌ನಲ್ಲಿ 370ಕ್ಕೂ ಹೆಚ್ಚು ಮತ ಪಡೆಯಲು ಪ್ರಯತ್ನ ನಡೆಸಬೇಕು. ಮತದಾರರ ಸಂಪೂರ್ಣ ವಿವರವುಳ್ಳ ಪಟ್ಟಿ ತಯಾರಿಸಿ. ಯಾರು ಮತ ಹಾಕುತ್ತಾರೆ, ಹಾಕುವುದಿಲ್ಲ ಎಂಬಿತ್ಯಾದಿ ವಿವರ ಸಂಗ್ರಹಿಸಿ. ಮತ ಹಾಕದೆ ಬೇರೆ ಕಡೆ ಹೋಗುವವರ ಮನ
ವೊಲಿಸಿ. ಬೇಸಗೆ ಕಾಲವಾದ್ದರಿಂದ ಬಿಸಿಲು ಹೆಚ್ಚಾಗುತ್ತಿದೆ. ಬೆಳಗ್ಗೆ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಜೆಡಿಎಸ್‌ ಜತೆ ಸಮನ್ವಯ ಸಾಧಿಸಿ
ಕರ್ನಾಟಕದಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿ ಇದ್ದು, ಪ್ರತಿ ಬೂತ್‌ನಲ್ಲೂ ಎರಡೂ ಪಕ್ಷಗಳ ಸಮನ್ವಯ ಸಭೆ ನಡೆಸಬೇಕು. ಇದು ಗೆಲುವಿನ ನಮ್ಮನ್ನು ಕಡೆಗೆ ಕರೆದೊಯ್ಯಲಿದೆ. ಕರ್ನಾಟಕದಲ್ಲಿ ನಾವು ಆಡಳಿತದಲ್ಲಿ ಇಲ್ಲದಿದ್ದರೂ ಭೇದಭಾವ ಮಾಡಿಲ್ಲ ಎಂದ ಪ್ರಧಾನಿ, ರಾಮಮಂದಿರದ ವಿಚಾರ ಎಷ್ಟು ಪ್ರಭಾವ ಬೀರಬಹುದು ಎಂದು ಪ್ರಶ್ನಿಸಿದರು.

Advertisement

ಬಿಜೆಪಿ ಸರಕಾರವು ಕಳೆದ 10 ವರ್ಷಗಳಲ್ಲಿ ನಾರಿ ಶಕ್ತಿಯ ಬಲವರ್ಧನೆ ಮಾಡಿದೆ. “ನಾರಿ ಶಕ್ತಿ ವಂದನಾ’ ರಾಜಕೀಯವಾಗಿ ಮಹಿಳಾ ಬಲವರ್ಧನೆ ಮಾಡಲಿದೆ ಮಹಿಳೆಯರ ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಿ. ಬೂತ್‌ ಕಾರ್ಯಕರ್ತರು ತಮ್ಮ ಕಾರ್ಯದ ಅವಲೋಕನ ಮಾಡಲು ಪ್ರತಿದಿನದ ಕೆಲಸ ಮುಗಿದ ಬಳಿಕ ಸೇರಬೇಕು. ಮತಗಳ ಪ್ರಮಾಣ ಹೆಚ್ಚಾಗುತ್ತಿದೆಯೇ ಎಂದು ಅನಿಸಿಕೆಗಳನ್ನು ಹಂಚಿಕೊಳ್ಳಬೇಕಿದೆ ಎಂದೂ ತಿಳಿಸಿದರು.
ಮೈಸೂರಿನ ರಾಜೇಶ್‌, ಶಿವಮೊಗ್ಗದ ಸರಳಾ, ಬೆಳಗಾವಿಯ ಶ್ರುತಿ ಆಪ್ಟೆàಕರ್‌, ಉಡುಪಿಯ ಸುಪ್ರೀತ್‌ ಭಂಡಾರಿ ಜತೆ ಸಂವಾದ ನಡೆಯಿತು.

 

 

Advertisement

Udayavani is now on Telegram. Click here to join our channel and stay updated with the latest news.

Next