Advertisement
– ಮದರಂಗಿ ಹಚ್ಚಿದ ಮೇಲೆ 7-8 ಗಂಟೆ ಕೈ ತೊಳೆಯಬೇಡಿ.-ಲಿಂಬೆರಸ ಮತ್ತು ಸಕ್ಕರೆಯನ್ನು ಬೆರೆಸಿ, ಆ ಮಿಶ್ರಣವನ್ನು ಹತ್ತಿಯಿಂದ ಕೈಗೆ ಲೇಪಿಸಿದರೆ ಮೆಹಂದಿಯ ಬಣ್ಣ ಗಾಢವಾಗುತ್ತದೆ.
– ಸ್ವಲ್ಪ ಲವಂಗ ಅಥವಾ ಏಲಕ್ಕಿಯನ್ನು ಪಾತ್ರೆಗೆ ಹಾಕಿ, ಸಣ್ಣ ಉರಿಯಲ್ಲಿ ಹುರಿಯುತ್ತಾ ಆ ಶಾಖಕ್ಕೆ ಕೈಗಳನ್ನೊಡ್ಡಿ. ಲಿಂಬೆ-ಸಕ್ಕರೆ ಮಿಶ್ರಣ ಹಚ್ಚಿದ ನಂತರ, ಹೀಗೆ ಮಾಡಿದರೆ ಉತ್ತಮ.
-ಮದರಂಗಿ ಹಚ್ಚಿದ ಕೈಯನ್ನು ಸೋಪು ಹಾಕಿ ತೊಳೆಯಬೇಡಿ.
-ಮದರಂಗಿ ಒಣಗಿದ ಮೇಲೆ ಕೊಬ್ಬರಿಎಣ್ಣೆಯನ್ನು ಸವರಿ.
-ಗೋರಂಟಿ ಸೊಪ್ಪನ್ನು ಅರೆದು ಹಚ್ಚುವುದಾದರೆ, ಅರೆಯುವಾಗ ವೀಳ್ಯದೆಲೆಯನ್ನು ಸೇರಿಸಿ.
-ಟೂತ್‌ಪೇಸ್ಟ್ ಅನ್ನು ಹಚ್ಚಿ ಕೈ ತೊಳೆಯುತ್ತಿದ್ದರೆ ಮೆಹಂದಿಯ ಬಣ್ಣ ಹೋಗುತ್ತದೆ.
– ದಿನಕ್ಕೆ 2-3 ಬಾರಿ ಆಲಿವ್ ಎಣ್ಣೆಗೆ ಉಪ್ಪನ್ನು ಸೇರಿಸಿ ಕೈಗೆ ಸವರಿ, ಹತ್ತು ನಿಮಿಷದ ನಂತರ ಕೈ ತೊಳೆಯಿರಿ.
– ಅಡುಗೆ ಸೋಡ ಮತ್ತು ಲಿಂಬೆ ರಸ ಸೇರಿಸಿ ಮಿಶ್ರಣ ಮಾಡಿ, ಕೈಗಳಿಗೆ ಉಜ್ಜಿ, ಒಣಗಿದ ನಂತರ ಕೈ ತೊಳೆಯಬೇಕು.