Advertisement

ನಿಕ್‌ ಜತೆ ಮದುವೆ ನಿಕ್ಕಿ ಮಾಡಿಕೊಂಡ ಪಿಂಕಿ

06:00 AM Jul 28, 2018 | Team Udayavani |

ಮುಂಬಯಿ: ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್‌ ಜೊನಾಸ್‌ ಮದುವೆ ನಿಶ್ಚಿತಾರ್ಥ ಈಗಾಗಲೇ ನೆರವೇರಿದ್ದು, ಅಕ್ಟೋಬರ್‌ನಲ್ಲಿ ಈ ಇಬ್ಬರೂ ಹಸೆಮಣೆ ಏರಲಿದ್ದಾರೆಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. ಇತ್ತೀಚೆಗೆ, ಪ್ರಿಯಾಂಕಾ ಅವರು ಜು. 18ರಂದು ಲಂಡನ್‌ನಲ್ಲಿ 36ನೇ ಹುಟ್ಟುಹಬ್ಬ ಆಚರಿಸಿಕೊಂ ಡಿದ್ದು, ಅದೇ ಸಂದರ್ಭದಲ್ಲಿ ನಿಶ್ಚಿತಾರ್ಥವೂ ನೆರವೇರಿದೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಪ್ರಿಯಾಂಕಾ ಆಗಲೀ, ನಿಕ್‌ ಜೊನಾಸ್‌ ಆಗಲೀ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಟ್ವಿಟರ್‌ನಲ್ಲಿ ಪ್ರಿಯಾಂಕಾ ಅಭಿನ ಯಿಸಬೇಕಿದ್ದ ಭರತ್‌ ಎಂಬ ಹಿಂದಿ ಚಿತ್ರದಿಂದ ಪ್ರಿಯಾಂಕಾ ಹಿಂದೆ ಸರಿದಿರುವುದಾಗಿ ಅದರ ನಿರ್ದೇಶಕ ಅಲಿ ಅಬ್ಟಾಸ್‌ ಜಫ‌ರ್‌ ಟ್ವಿಟರ್‌ನಲ್ಲಿ ತಿಳಿಸಿದ್ದು, ಅವರ ನಿರ್ಧಾರದ ಕಾರಣ ಕೇಳಿ ಖುಷಿಯಾಗಿದೆ ಎಂದಿದ್ದಾರೆ. ಇದು, ಪ್ರಿಯಾಂಕಾ ಅವರ ನಿಶ್ಚಿತಾರ್ಥ ಸುದ್ದಿಗಳಿಗೆ ಪುಷ್ಠಿ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next