Advertisement

ಇದು ಮೇಘಾಲಯ ಕಾಲ!

06:00 AM Jul 20, 2018 | Team Udayavani |

ನವದೆಹಲಿ: ನಾವೀಗ ಮೇಘಾಲಯ ಕಾಲದಲ್ಲಿ ವಾಸಿಸುತ್ತಿದ್ದೇವೆ. ನಿಜ. ಭೂಗರ್ಭಶಾಸ್ತ್ರಜ್ಞರು ಇದೀಗ ಭೂಮಿಯ ಭೌಗೋಳಿಕ ಇತಿಹಾಸದಲ್ಲಿ ಹೊಸ ಹಂತವನ್ನು ಗುರುತಿಸಿದ್ದು, ಇದನ್ನು ಮೇಘಾಲಯನ್‌ ಏಜ್‌ ಎಂದು ಕರೆದಿದ್ದಾರೆ. 4200 ವರ್ಷಗಳ ಹಿಂದೆ ಭೂಮಿಯ ವಾತಾವರಣ ಬದಲಾಗಿದ್ದನ್ನು ಗುರುತಿಸಲು ಮೇಘಾ ಲಯವೇ ನೆರವಾಗಿತ್ತು. ಹೀಗಾಗಿ ಈ ಕಾಲವನ್ನು ಮೇಘಾಲಯ ಕಾಲ ಎಂದೇ ಕರೆಯಲಾಗಿದೆ. 4200 ವರ್ಷಗಳ ಹಿಂದೆ ಶುರುವಾದ ಈ ಕಾಲ ಇಂದಿಗೂ ಮುಂದುವರಿದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Advertisement

ಈಜಿಪ್ಟ್ನಿಂದ ಚೀನಾವರೆಗೂ ನಾಗರಿಕತೆ ಯನ್ನೇ ಅಳಿಸಿಹಾಕಿದ ಭಾರೀ ಬರದಿಂದಾಗಿ ಮೇಘಾಲಯ ಕಾಲ ಆರಂಭ ವಾಯಿತು. ಈ ಹಿಂದೆ ಹಾಲೋಸೀನ್‌ ಎಪೋಚ್‌ ಎಂಬ ಕಾಲವಿತ್ತು. ಇದು 11,700 ವರ್ಷಗಳ ಅವಧಿಯದ್ದಾಗಿತ್ತು. ಮೇಘಾಲಯ ಕಾಲವು ಅತ್ಯಂತ ಮಹತ್ವದ್ದಾಗಿದ್ದು, ವಿಶಿಷ್ಟವೂ ಆಗಿದೆ. ಇಡೀ ಭೂಪ್ರದೇಶದಲ್ಲಿ ಕೃಷಿ ಆಧರಿತ ಸಮಾಜ ಬರದಿಂದಾಗಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಿದವು. ಮೇಘಾಲಯವೂ ಸೇರಿದಂತೆ ವಿಶ್ವದ ಏಳೂ ಖಂಡಗಳಲ್ಲಿ ಇದಕ್ಕೆ ಪೂರಕವಾದ ಸಾಕ್ಷಿ ಮಣ್ಣಿನಲ್ಲಿ ದೊರೆತಿದೆ. ಈ ಬರ ಸುಮಾರು 200 ವರ್ಷಗಳವರೆಗೆ ಇತ್ತು. ಈಜಿಪ್ಟ್, ಗ್ರೀಸ್‌, ಸಿರಿಯಾ, ಪ್ಯಾಲೆಸ್ತೀನ್‌, ಮೆಸಪೊಟೇಮಿಯಾದಿಂದ ಜನರು ವಲಸೆ ಹೋದರು ಎಂದು ಅಂತಾರಾಷ್ಟ್ರೀಯ ಭೂಗರ್ಭಶಾಸ್ತ್ರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸ್ಟಾನ್ಲ ಫಿನ್ನೆ ಹೇಳಿದ್ದಾರೆ.

ಈಗಿನ ಕಾಲವನ್ನು ಮೇಘಾಲಯನ್‌ ಏಜ್‌ ಎಂದು ಕರೆದ ಭೂಗರ್ಭಶಾಸ್ತ್ರಜ್ಞರು 
ಬರಗಾಲದಿಂದ ಭೂ ಹವಾಮಾನ ಬದಲಾಗಿದ್ದೇ ಕಾರಣ
ಅದಕ್ಕೂ ಮೊದಲು ಇದ್ದಿದ್ದು ಹಾಲೋಸೀನ್‌ ಎಪೋಚ್‌ ಎಂಬ ಕಾಲ

Advertisement

Udayavani is now on Telegram. Click here to join our channel and stay updated with the latest news.

Next