Advertisement

ಮೇಗದ್ದೆ ಸರಕಾರಿ ಕಿ.ಪ್ರಾ. ಶಾಲೆ ಪುನರಾರಂಭ

12:36 AM Jun 24, 2019 | Team Udayavani |

ಹೆಬ್ರಿ: ಹೆಬ್ರಿ ತಾ. ನಾಡ್ಪಾಲು ಗ್ರಾಮದ ಸುಮಾರು 40 ವರ್ಷ ಇತಿಹಾಸವಿರುವ ಮೇಗದ್ದೆ ಸ.ಕಿ.ಪ್ರಾ. ಶಾಲೆ ಮಕ್ಕಳಿಲ್ಲ ಎಂಬ ಕಾರಣದಿಂದ ಮುಚ್ಚಿ ಮೂರು ವರ್ಷಗಳು ಕಳೆದಿದ್ದು ಇದೀಗ ಗ್ರಾಮಸ್ಥರ ಸತತ ಪ್ರಯತ್ನದ ಮೂಲಕ ಶಾಲೆ ತೆರೆದಿದೆ.

Advertisement

ಜೂ.22ರಂದು ಶಾಲೆಯಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಭಜನೆಯೊಂದಿಗೆ ತರಗತಿಗಳು ಆರಂಭಗೊಂಡಿವೆ.

ಶಿಕ್ಷಣ ಇಲಾಖೆ ಸ್ಪಂದನೆ

ಮುಚ್ಚಿದ ಶಾಲೆಯನ್ನು ತೆರೆಯುವಂತೆ ಗ್ರಾಮಸ್ಥರು ಮೂರು ವರ್ಷಗಳಿಂದ ಪ್ರಯತ್ನಿಸುತ್ತಾ ಬಂದಿರುವ ಬಗ್ಗೆ ಉದಯವಾಣಿ ಸಚಿತ್ರ ವರದಿ ಪ್ರಕಟಿಸಿದ ಕೂಡಲೇ ಶಿಕ್ಷಣ ಇಲಾಖೆಯ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್‌ ಅವರು ಸ್ಥಳಕ್ಕೆ ಭೇಟಿ ನೀಡಿ 10 ವಿದ್ಯಾರ್ಥಿಗಳಿದ್ದರೆ ಶಾಲೆಯನ್ನು ತೆರೆಯುವಂತೆ ಭರವಸೆ ನೀಡಿದ್ದರು. ಅದರಂತೆ ಗ್ರಾಮಸ್ಥರು ಪ್ರಯತ್ನ ಪಟ್ಟಿದ್ದು ಶಾಲೆ ಆರಂಭಗೊಳ್ಳಲು ಕಾರಣವಾಗಿದೆ.

ಹಬ್ಬದ ವಾತಾವರಣ

Advertisement

ಊರಿನವರೆಲ್ಲಾ ಸೇರಿ ಹಣ ಒಟ್ಟುಗೂಡಿಸಿ ಮನೆ ಕಾರ್ಯಕ್ರಮದಂತೆ ಶಾಲೆ ಪುನರಾರಂಭವನನು ಆಚರಿ ಸಿದ್ದಾರೆ. ಶಾಲೆ ಪ್ರಾರಂಭೋತ್ಸವಕ್ಕೆ ಉಪಾಹಾರದ ವ್ಯವಸ್ಥೆ ಯನ್ನೂ ಮಾಡಲಾಗಿತ್ತು. ತರಗತಿ ಉದ್ಘಾಟನೆಯನ್ನು ಗ್ರಾಮದ ಹಿರಿಯರಾದ ಕೊಲ್ಲಾಂಗಾರು ರಾಮಣ್ಣ ಹೆಗ್ಡೆ ನೆರವೇರಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಗುಳ್ಕಾಡು ಭಾಸ್ಕರ್‌ ಶೆಟ್ಟಿ ,ಸಿಆರ್‌ಪಿ ವೆಂಕಟರಮಣ ಕಲ್ಕೂರ್‌,ಪ್ರಗತಿಪರ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಸಂಜೀವ ಶೆಟ್ಟಿ, ನಾರಾಯಣ ಭಟ್, ಶಿಕ್ಷಕ ವೆಂಕಟೇಶ್‌ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next