Advertisement

27 ಕ್ಕೆ ಮೆಗಾ ಲೋಕ್‌ ಅದಾಲತ್‌

03:58 PM Mar 10, 2021 | Team Udayavani |

ಮಂಡ್ಯ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಮಾ.27ರಂದು ರಾಜ್ಯಾದ್ಯಂತ ಮೆಗಾ ಲೋಕ್‌ -ಅದಾಲತ್‌ ನಡೆಸಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿಯೂ ನಡೆಯಲಿದೆ ಎಂದು 1ನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್‌.ಹೆಗಡೆ ತಿಳಿಸಿದರು.

Advertisement

ಲೋಕ್‌ ಅದಾಲತ್‌ನಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಅದರಂತೆ ಮುಂಚಿತವಾಗಿ ಪ್ರಕರಣಗಳ ಬಗ್ಗೆ ದೂರು ನೀಡಿ, ಬಗೆಹರಿಸಿಕೊಳ್ಳುವ ಮೂಲಕ ಸಮಯ, ಹಣ ಉಳಿಸುವುದರಜತೆಗೆ ನೆಮ್ಮದಿಯ ಜೀವನ ನಡೆಸಲು ಮುಂದಾಗಬೇಕು ಎಂದು ಮಂಗಳವಾರ ನಗರದ ನ್ಯಾಯಾಲಯದ ಆವರಣದ ಮಧ್ಯಸ್ಥಿಕೆ ಕೇಂದ್ರದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅದಾಲತ್ಗೆ 27923 ಪ್ರಕರಣಗಳು: ಮೆಗಾ ಲೋಕ್‌ ಅದಾಲತ್‌ನಲ್ಲಿ ಬಗೆಹರಿಸಬಹುದಾದ ಜಿಲ್ಲೆಯಾದ್ಯಂತಸುಮಾರು 27923 ಪ್ರಕರಣಗಳನ್ನು ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಜನವರಿ 31ಕ್ಕೆ ಪೂರ್ಣಗೊಂಡಂತೆ ಜಿಲ್ಲೆಯಲ್ಲಿ 50406 ಪ್ರಕರಣಗಳಿವೆ. ಪ್ರಕರಣಗಳಿಗೆ ಸಂಬಂಧಪಟ್ಟವರು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆಎಂದು ಹೇಳಿದರು.

ತಾಲೂಕುವಾರು ವಿವರ: ಮಂಡ್ಯ ತಾಲೂಕಿನಲ್ಲಿ 21303, ಕೆ.ಆರ್‌.ಪೇಟೆ 12319, ಶ್ರೀರಂಗಪಟ್ಟಣ 10587, ಮದ್ದೂರು 11430, ನಾಗಮಂಗಲ 8749, ಮಳವಳ್ಳಿ 8291 ಹಾಗೂಪಾಂಡವಪುರದಲ್ಲಿ 7754 ಪ್ರಕರಣಗಳಿವೆ ಎಂದರು.

ಇತ್ಯರ್ಥಪಡಿಸುವ ಪ್ರಕರಣಗಳು: ಮೆಗಾ ಲೋಕ ಅದಾಲತ್‌ನಲ್ಲಿ ಕ್ರಿಮಿನಲ್‌ ಪ್ರಕರಣಗಳು, ಸಣ್ಣ ಗಲಾಟೆ ಪ್ರಕರಣಗಳು, ಬ್ಯಾಂಕ್‌ ಪ್ರಕರಣಗಳು, ಚೆಕ್‌ ಬೌನ್ಸ್‌, ಅಪಘಾತ ಪರಿಹಾರ, ವಿದ್ಯುತ್‌ ಹಾಗೂ ನೀರಿನ ಬಿಲ್‌ ಪಾವತಿಪ್ರಕರಣಗಳು, ಜೀವನಾಂಶ ಪ್ರಕರಣಗಳು, ಭೂ ಸ್ವಾಧೀನಪರಿಹಾರ, ಕ್ರಯ ಪತ್ರ ಪ್ರಕರಣಗಳು, ಸಾಲ ವಸೂಲಾತಿ,ಜನನ ಪ್ರಮಾಣ ಪತ್ರ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

Advertisement

10918 ಪ್ರಕರಣಗಳು ಇತ್ಯರ್ಥ: ಕಳೆದ ವರ್ಷ ಡಿಸೆಂಬರ್‌ ನಲ್ಲಿ ನಡೆದ ಮೆಗಾ ಲೋಕ್‌ ಅದಾಲತ್‌ನಲ್ಲಿ 18193ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 10918ಪ್ರಕರಣಗಳು ಇತ್ಯರ್ಥಗೊಂಡಿವೆ. ಇನ್ನೂ ಹೆಚ್ಚಿನಪ್ರಕರಣಗಳನ್ನು ಈ ಬಾರಿ ಇತ್ಯರ್ಥಪಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

35 ಪೀಠಗಳು: ಜಿಲ್ಲೆಯ ಮಂಡ್ಯ ನಗರ ಸೇರಿದಂತೆ 7ತಾಲೂಕಿನಲ್ಲಿರುವ ನ್ಯಾಯಾಲಯದ ಸುಮಾರು 35 ಪೀಠಗಳಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಯೋಜನೆರೂಪಿಸಲಾಗಿದೆ. ಆದ್ದರಿಂದ ಕಕ್ಷಿದಾರರು ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

 39 ಕೋಟಿ ರೂ. ಪರಿಹಾರ: ಮೆಗಾ ಲೋಕ್‌ ಅದಾಲತ್‌ ನಲ್ಲಿ ಇದುವರೆಗೂ ದಂಡ, ಪರಿಹಾರ, ಅಪಘಾತ ವಿಮೆ ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ಒಟ್ಟು 39 ಕೋಟಿ ರೂ. ಪರಿಹಾರ ಒದಗಿಸಲಾಗಿದೆ. ಇದರಲ್ಲಿ ಭೂ ಸ್ವಾಧೀನ ಸಮಸ್ಯೆಗಳಲ್ಲಿ ರೈತರಿಗೆ 28 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ವರದರಾಜು ಹಾಜರಿದ್ದರು.

ಆನ್ಲೈನ್ ಮೂಲಕ ಇತ್ಯರ್ಥಕ್ಕೆ ಕ್ರಮ :

ಹೊರ ರಾಜ್ಯ ಸೇರಿದಂತೆ ಜಿಲ್ಲೆಯ ಹೊರಗಡೆ ಇದ್ದು,ಬರಲು ಸಾಧ್ಯವಾಗದ ಕಕ್ಷಿದಾರರು ವಾಟ್ಸಾಫ್‌,ಇ-ಮೇಲ್‌, ಎಸ್‌ಎಂಎಸ್‌, ಎಲೆಕ್ಟ್ರಾನಿಕ್‌ ಮೋಡ್‌ಗಳ ಮುಖಾಂತರ ಭೇಟಿ ನೀಡಿ ಪ್ರಕರಣಗಳನ್ನುಇತ್ಯರ್ಥಪಡಿಸಿಕೊಳ್ಳುವ ಅವಕಾಶವಿದೆ. ಕಳೆದ ಬಾರಿಬೆರಳೆಣಿಕೆ ಪ್ರಕರಣಗಳು ಬಂದಿದ್ದವು. ಈ ಬಾರಿಇಂಡಿಯನ್‌ ಬ್ಯಾಂಕ್‌ಗೆ ಸಂಬಂಧಿಸಿದ ಪ್ರಕರಣಗಳು ಆನ್‌ಲೈನ್‌ಗೆ ಬರುವ ಸಾಧ್ಯತೆ ಇದೆ ಎಂದು ನ್ಯಾಯಾಧೀಶೆ ರಾಜೇಶ್ವರಿ ಎನ್‌.ಹೆಗಡೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next