Advertisement

ಜೂ. 10: ಬಂಟರ ಭವನದಲ್ಲಿ  ಮೆಗಾ ಆರ್ಥಿಕ ಸಹಾಯ ವಿತರಣೆ; ಭರದ ಸಿದ್ಧತೆ

02:28 PM Jun 06, 2018 | Team Udayavani |

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಆಶ್ರಯದಲ್ಲಿ ಜೂ. 10ರಂದು ಬೆಳಗ್ಗೆ 10ರಿಂದ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜರಗಲಿರುವ 14ನೇ ಮೆಗಾ ಆರ್ಥಿಕ ಸಹಾಯ ವಿತರಣೆ ಕಾರ್ಯಕ್ರಮದ ಸಿದ್ಧತೆ ಭರದಿಂದ ಸಾಗುತ್ತಿದೆ. ಆರ್ಥಿಕವಾಗಿ ತೊಂದರೆಯಲ್ಲಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ ಶಿಪ್‌, ವಿಧವೆಯರಿಗೆ ಹಾಗೂ ವಿಕಲಚೇತನ ವಿದ್ಯಾರ್ಥಿಗಳಿಗೆ ಸಹಾಯ ರೂಪದಲ್ಲಿ ಈ ಬಾರಿ ಸುಮಾರು 1,25,00,000 ರೂ.ಗಳಷ್ಟು ಮೊತ್ತವನ್ನು ವಿತರಿಸಲಾಗುವುದು. ಈ ಬಾರಿ ಸುಮಾರು 3,852 ಆರ್ಜಿಗಳು ಬಂದಿದ್ದು, ಅರ್ಹವೆನಿಸಿದ ಅರ್ಜಿದಾರರಿಗೆ ಕೌಂಟರ್‌ ನಂಬರ್‌ ಸ್ಲಿಪ್‌ ನೀಡಲಾಗಿದೆಯಲ್ಲದೆ, ಸಂಘದಿಂದ ಸಮ್ಮತಿ ಪತ್ರವನ್ನು ಕಳುಹಿಸಲಾಗುವುದು. ಅರ್ಜಿದಾರರು ಚೆಕ್‌ ಮೊತ್ತ ಪಡೆಯುವಾಗ ವಿದ್ಯಾರ್ಥಿಯ 2017-18ರ ಶೈಕ್ಷಣಿಕ ಅವಧಿಯ ಒರಿಜಿನಲ್‌ ಮಾರ್ಕ್‌ಶೀಟ್‌ ಹಾಗೂ ಪೋಷಕರ ಮೆಂಬರ್‌ಶಿಪ್‌ ಐ.ಡಿ. ತೋರಿಸುವುದು ಅಗತ್ಯವಾಗಿದೆ. ಆಯಾಯ ವಿದ್ಯಾರ್ಥಿಯ ಪಾಲಕರು ಪೋಷಕರಿಗೆ ಮಾತ್ರ ಚೆಕ್‌ ನೀಡಲಾಗುವುದು. ಆರ್ಥಿಕ ಸಹಾಯ ವಿತರಣಾ ದಿನದಂದು ವಿದ್ಯಾರ್ಥಿ ಅಥವಾ ಆತನ/ಆಕೆಯ ತಂದೆ-ತಾಯಿ ಇರತಕ್ಕದ್ದು, ಗೈರು ಹಾಜರಿಯಾದವರ ಚೆಕ್‌ ಇತರರು ಪಡೆಯುವಂತಿಲ್ಲ.

Advertisement

ವಿಧವೆಯರು ಪತಿಯ ನಿಧನದ ಪ್ರಮಾಣಪತ್ರವನ್ನು, ವಿಕಲಚೇತನರು ಅವರ ಪ್ರಮಾಣಪತ್ರವನ್ನು ತೋರಿಸಬೇಕು. ದತ್ತು ಹಣ ಸ್ವೀಕರಿಸುವ ವಿದ್ಯಾರ್ಥಿಗಳು, ವಿಧವೆಯರು, ವಿಕಲಚೇತನರು ಬಂಟರ ಸಂಘ ನೀಡಿರುವ ಪ್ರಮಾಣ ಪತ್ರವನ್ನು ತೋರಿಸಬೇಕು. ಸಂಘದ ನಿಣರ್ಯವೇ ಅಂತಿಮವಾಗಿದೆ. 

ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಪ್ರತಿ ವರ್ಷ ತಮ್ಮ ದಾನಿಗಳಿಂದ ದೇಣಿಗೆ ಪಡೆದು ಈ ಆರ್ಥಿಕ ಸಹಾಯವನ್ನು ವಿತರಿಸುತ್ತಿದೆ. ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಹಾಗೂ ಪದಾಧಿಕಾರಿಗಳ ಮಾರ್ಗ ದರ್ಶನದೊಂದಿಗೆ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ, ಕಾರ್ಯದರ್ಶಿ ಖಾಂದೇಶ್‌ ಭಾಸ್ಕರ್‌ ವೈ. ಶೆಟ್ಟಿ, ಕೋಶಾಧಿಕಾರಿ ಸುರೇಶ್‌ ಬಿ. ಶೆಟ್ಟಿ ಮರಾಠ ಇವರು ದೇಣಿಗೆ ಸಂಗ್ರಹದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಸಂಘವು ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next