Advertisement

ಪಾರ್ಕ್‌ ಅಭಿವೃದ್ಧಿ ಯೋಜನೆ ಮಾರ್ಪಾಡು

03:17 PM Feb 27, 2022 | Team Udayavani |

ಹಾಸನ: ನಗರದ ಮಹಾರಾಜ ಪಾರ್ಕ್‌ ಅಭಿವೃದ್ಧಿ ಹೆಸರಿನಲ್ಲಿ ಅನಗತ್ಯ ಕಾಮಗಾರಿಗಳನ್ನು ಆರಂಭಿಸಿದ್ದನ್ನುವಿರೋಧಿಸಿ ಹೋರಾಟ ನಡೆಸುತ್ತಿದ್ದ ವಿವಿಧ ಸಂಘಸಂಸ್ಥೆಗಳ ಹೋರಾಟಕ್ಕೆ ಮಣಿದಿರುವ ಜಿಲ್ಲಾಡಳಿತವುಪಾರ್ಕ್‌ ಅಭಿವೃದ್ಧಿ ಯೋಜನೆ ಮರು ವಿನ್ಯಾಸಕ್ಕೆ ಸಮ್ಮತಿಸಿದೆ.

Advertisement

ಮಹಾರಾಜ ಪಾರ್ಕ್‌ ಉಳಿಸಿ ಹೋರಾಟಸಮಿತಿಯವರೊಂದಿಗೆ ತಮ್ಮ ಕಚೇರಿಯಸಭಾಂಗಣದಲ್ಲಿ ಶನಿವಾರ ನಡೆಸಿದ ಸಭೆಯಲ್ಲಿ ಚರ್ಚಿಸಿದ ಜಿಲ್ಲಾಧಿಕಾರಿ ಪಾರ್ಕ್‌ ಅಭಿವೃದ್ಧಿಯಪರಿಷ್ಕೃತ ಯೋಜನೆಯನ್ನು ಬುಧವಾರದೊಳಗೆಸಿದ್ಧಪಡಿಸಲು ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದಾರೆ.

ಪರಿಷ್ಕೃತ ಯೋಜನೆಯ ಪ್ರಕಾರ ಈ ಹಿಂದೆಕೈಗೊಳ್ಳಲು ಉದ್ದೇಶಿಸಿದ್ದ ಕಾಮಗಾರಿಗಳಲ್ಲಿ ಶೇ. 50ಕಾಮಗಾರಿಗಳನ್ನು ಕಡಿತಗೊಳಿಸಲಾಗಿದೆ ಒಂದು ವಾಲಿಬಾಲ್‌ ಅಂಕಣ, ಒಂದು ಬ್ಯಾಡ್ಮಿಂಟನ್‌ ಅಂಕಣ,2 ಸಣ್ಣ ಮತ್ತು 2 ವಿಸ್ತಾರವಾದ ಗಜಿಬೋ (ವಿಶ್ರಾಂತಿಕುಟೀರ ) ಸಂಗೀತ ಕಾರಂಜಿ, ಬಯಲು ರಂಗ ಮಂದಿರ ನಿರ್ಮಿಸಲು ನಿರ್ದೇಶನ ನೀಡಿದ್ದಾರೆ. ಜನರ ಭಾವನೆಗಳನ್ನು ಮನದಲ್ಲಿರಿಸಿಕೊಂಡು ಪಾರ್ಕ್‌ ಅಭಿವೃದ್ಧಿಯನ್ನುಮರು ವಿನ್ಯಾಸಗೊಳಿಸಲು ಡೀಸಿ ಗಿರೀಶ್‌ ಅವರುಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಾರ್ಕ್‌ನಲ್ಲಿರುವ ಪ್ರಾಚ್ಯ ವಸ್ತು ಸಂಗ್ರಹಾಲಯದಹಳೆ ಕಟ್ಟಡವನ್ನು ನೆಲಸಮ ಮಾಡಿ ಆ ಜಾಗದಲ್ಲಿ ಯಾವುದೇ ಕಾಮಗಾರಿ ಮಾಡದೆ ಉದ್ಯಾನವನ್ನಾಗಿಪರಿವರ್ತಿಸಲಾಗುವುದು. ಪಾರ್ಕ್‌ ಅಭಿವೃದ್ಧಿಗೆಸಂಬಂಧಿಸಿದಂತೆ ಅನೇಕ ಸಂಘ ಸಂಸ್ಥೆಗಳು ಹಲವಾರು ಬೇಡಿಕೆಗಳನ್ನು ಮಂಡಿಸಿದ್ದು, ಅವರ ಬೇಡಿಕೆಗಳನ್ನು ಈಗಾಗಲೇ ಪರಿಗಣಿಸಲಾಗಿದೆ. ಪಾರ್ಕ್‌ ಅಭಿವೃದ್ಧಿಗೆಹೋರಾಟಗಾರರು ಸಹಕಾರ ವ್ಯಕ್ತಪಡಿಸಿದ್ದಾರೆ. ಈಕಾಮಗಾರಿಗೆ ಸಂಬಂಧಿಸಿದಂತೆ ಕೇಳಿರುವ ವಿವರಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಜನ ಸಾಮಾನ್ಯರ ಬೇಡಿಕೆಯಂತೆ ಉದ್ಯಾನವನಅಭಿವೃದ್ಧಿಪಡಿಸಲಾಗುವುದು ಎಲ್ಲರೂ ಸಹಕಾರ ನೀಡ ಬೇಕು. ಉದ್ಯಾನವನ ನಿರ್ವಹಣೆಗೆಸಹಕಾರಿಯಾಗುವಂತೆ ತುಂತುರು ನೀರಾವರಿ ಹಾಗೂ ಹನಿ ನೀರಾವರಿ ವ್ಯವಸ್ಥೆ ಯನ್ನು ಮಾಡಬೇಕು. ಉದ್ಯಾನವನದ ಸುತ್ತಲಿನ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಮಹಾರಾಜ ಪಾರ್ಕ್‌ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಕೆ.ಮಂಜುನಾಥ್‌, ಕಾರ್ಯಾಧ್ಯಕ್ಷ ಧರ್ಮೆಶ್‌ ಅವರು ಮಾತನಾಡಿ ಅಭಿವೃದ್ಧಿ ಕಾರ್ಯಗಳಿಗೆ ನಾವು ಅಡ್ಡಿಪಡಿಸುವುದಿಲ್ಲ, ಉದ್ಯಾನವನ ಅಭಿವೃದ್ಧಿ ಮಾಡಲು ನಮ್ಮ ಸಹಕಾರವಿದ್ದು , ಕಾಮಗಾರಿಯ ಪೂರ್ಣ ಮಾಹಿತಿಯನ್ನು ನಮಗೆ ಒದಗಿಸಿ ಎಂದು ಕೋರಿದ್ದಾರೆ.

ಮಹಾರಾಜ ಪಾರ್ಕ್‌ ಉಳಿಸಿ ಹೋರಾಟಸಮಿತಿಯ ಗೌರವಾಧ್ಯಕ್ಷ ಕೆ.ಟಿ.ಶಿವ ಪ್ರಸಾದ್‌,ವೆಂಕಟೇಶ್‌, ಬಾಳ್ಳು ಗೋಪಾಲ್‌, ಕೃಷ್ಣದಾಸ್‌, ಹೆತ್ತೂರುನಾಗರಾಜ್‌, ಸಿ.ಸುವರ್ಣ, ಎಚ್‌.ಆರ್‌. ನವೀನ್‌ಕುಮಾರ್‌, ರಘುಗೌಡ, ರಾಜಶೇಖರ್‌ ಇತರರು ಸಭೆಯಲ್ಲಿದ್ದರು.

ಮಾ.3 ರಂದು ಹೋರಾಟಗಾರ ಅಂತಿಮ ನಿರ್ಧಾರ :

ಮಹಾರಾಜ ಪಾರ್ಕ್‌ ಅಭಿವೃದ್ಧಿಯ ವಿವಾದ ಪರಿಹರಿಸುವ ಸಂಬಂಧ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ನಮ್ಮೊಂದಿಗೆ ಚರ್ಚಿಸಿದ್ದು, ಅಭಿವೃದ್ಧಿ ಯೋಜನೆಯ ಮರುವಿನ್ಯಾಸದ ವಿವರವನ್ನು ಬುಧವಾರ ನೀಡಲಿದ್ದಾರೆ. ಅದನ್ನು ಪರಿಶೀಲಿಸಿ ಗುರುವಾರಸಭೆ ಸೇರಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಪಾರ್ಕ್‌ ಉಳಿಸಿ ಹೋರಾಟ ಸಮಿತಿಯ ಮುಖಂಡರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾರ್ಕ್‌ನ ಒಟ್ಟು ವಿಸ್ತೀರ್ಣದಮಾಹಿತಿ, ಮರು ವಿನ್ಯಾಸದಲ್ಲಿ ಅಡಕವಾಗುವ ಕಾಮಗಾರಿಗಳ ವಿವರ ಹಾಗೂಪಾರ್ಕ್‌ ಅಭಿವೃದ್ಧಿಯ ಒಟ್ಟು ಅಂದಾಜು ವೆಚ್ಚ, ಉಳಿಕೆಯಾಗುವ ಮೊತ್ತ ಸೇರಿದಂತೆಪರಿಪೂರ್ಣ ಮಾಹಿತಿಯನ್ನು ಬುಧವಾರದೊಳಗೆ ಹೋರಾಟ ಸಮಿತಿಯ ಗಮನಕ್ಕೆತರುವಂತೆ ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆನೀಡಿದ್ದಾರೆ. ಬುಧವಾರ ನಮಗೆ ಮಾಹಿತಿ ಲಭ್ಯವಾದರೆ ಗುರುವಾರ ಹೋರಾಟ ಸಮಿತಿಯ ಸಭೆಯಲ್ಲಿ ಚರ್ಚಿಸಿ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿಯವರು ನಮ್ಮೊಂದಿಗೆ ಸಮಾಲೋಚನೆ ಮಾಡಿ ಯೋಜನೆ ಮರು ವಿನ್ಯಾಸ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದು ನಮಗೆ ಸಮಾಧಾನತಂದಿದೆ. ಆದರೆ ಪರಿಷ್ಕೃತ ಯೋಜನೆಯನ್ನು ಸಮ್ಮತಿಸಬೇಕೇ ಅಥವಾ ಬೇಡವೇಎಂಬುದನ್ನು ಸಭೆಯಲ್ಲಿ ಚರ್ಚಿಸಿ ತೀರ್ಮಾನಿ ಸಲಾಗುವುದು ಎಂದರು.

ಮಹಾರಾಜ ಪಾರ್ಕ್‌ ಉಳಿಸಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೆ.ಟಿ.ಶಿವಪ್ರಸಾದ್‌, ಅಧ್ಯಕ್ಷ ಬಿ.ಕೆ.ಮಂಜುನಾಥ್‌, ಕಾರ್ಯಾಧ್ಯಕ್ಷರಾದ ಧರ್ಮೇಶ್‌,ಕೃಷ್ಣದಾಸ್‌, ರಾಜಶೇಖರ್‌ ವೆಂಕಟೇಶ್‌, ಎಚ್‌.ಆರ್‌. ನವೀನ್‌ ಕುಮಾರ್‌, ರಘುಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next